• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಲ್ಲೆ ಪ್ರಕರಣ : ನಟ ರಿಷಿ ವಿರುದ್ಧ ಎಫ್ಐಆರ್ ದಾಖಲು

|

ಬೆಂಗಳೂರು, ಅಕ್ಟೋಬರ್ 17: ತನ್ನ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತುಕೊಂಡಿರುವ ಉದಯೋನ್ಮುಖ ನಟ ಮನೀಷ್ ರಿಷಿ ಅವರ ವಿರುದ್ಧ ಬಸವೇಶ್ವರ ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮೂರು ದಿನಗಳ ಹಿಂದೆ ಆಪರೇಷನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿತ್ತು. ಈ ಕುರಿತಂತೆ ರಿಷಿ ಅವರ ಚಿಕ್ಕಮ್ಮ ಶಾಲಿನಿ ಅವರು ಬಸವೇಶ್ವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿದ್ದರು. ಈಗ ಎಫ್ಐಆರ್ ಹಾಕಿ, ತನಿಖೆ ಮುಂದುವರೆಸಿದ್ದಾರೆ.

ಆಪರೇಷನ್‌ ಅಲುಮೇಲಮ್ಮ ಖ್ಯಾತಿಯ ನಟ ಮನಿಷ್ ವಿರುದ್ಧ ಕೇಸ್

ಪುನಿತ್‌ ರಾಜ್‌ಕುಮಾರ್‌ ನಿರ್ಮಿಸುತ್ತಿರುವ "ಕವಲುದಾರಿ' ಸಿನಿಮಾದಲ್ಲಿ ನಾಯಕ ನಟನಾಗಿ ರಿಷಿ ಅಭಿನಯಿಸುತ್ತಿದ್ದಾರೆ. ಈ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇದೆಲ್ಲವೂ ನನ್ನ ವಿರುದ್ಧ ಹೂಡಿರುವ ಷಡ್ಯಂತ್ರ, ನಾನು ಯಾವ ತಪ್ಪು ಮಾಡಿಲ್ಲ. ಅಸ್ತಿ ಆಸೆಗಾಗಿ ನಡೆದ ಗಲಾಟೆ ಇದಲ್ಲ ಎಂದಿದ್ದಾರೆ.

ಘಟನೆ ಹಿನ್ನಲೆ: ರಿಷಿ ಅವರ ತಾತ ಬೋರಯ್ಯನವರು ಸ್ಟ್ರೋಕ್‌ನಿಂದ ಹಾಸಿಗೆ ಹಿಡಿದಿದ್ದು, ಇವರನ್ನು ನೋಡಲೆಂದು ರಿಷಿ ಅವರ ಚಿಕ್ಕಮ್ಮ ಮನೆಗೆ ತೆರಳಿದ್ದಾರೆ. ಈ ವೇಳೆ, ಆಸ್ತಿ ಹಂಚಿಕೆಗಾಗಿ ಮಾತುಕತೆ ನಡೆದಿದೆ. ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಲು ಶಾಲಿನಿ ಅವರಿಗೆ ರಿಷಿ ಒತ್ತಾಯ ಮಾಡಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ತಾತನ ಮನೆಯಲ್ಲೇ ರಿಷಿ ಮತ್ತು ಆತನ ತಂದೆ ತಾಯಿ ವಾಸವಿದ್ದು, ಶಾಲಿನಿಗೆ ಸ್ಟ್ಯಾಂಪ್ ಪೇಪರ್‌ಗೆ ಸಹಿ ಮಾಡಿ ಒಳಗೆ ಬರುವಂತೆ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ರಿಷಿ ಜತೆಗೆ ತಾಯಿ ಅನಲಾ ಮತ್ತು ತಂದೆ ನಾಗರಾಜ್ ಸೇರಿ ಶಾಲಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Basaveshwarnagar police have filed FIR against Operation Alamelamma fame actor Manish Rishi. Rishi was booked by Police for assaulting his aunt at residence.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more