ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 9 ಕಳ್ಳರ ಬಂಧನ 646 ಗ್ರಾಂ ಚಿನ್ನ ಜಪ್ತಿ

By Ashwath
|
Google Oneindia Kannada News

ಬೆಂಗಳೂರು, ಜೂ.21:ವಿವಿಧ ಕಳ್ಳತನ ಪ್ರಕರಣ ಭಾಗಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 646 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಗಲು ವೇಳೆಯಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಗಣೇಶ ಬಿನ್ ಕೃಷ್ಣಮೂರ್ತಿ(29), ಆನಂದ ಬಿನ್ ನರಸಿಂಹಮೂರ್ತಿ(25) ಬಂಧಿತ ಆರೋಪಿಗಳು. ಬಂಧಿತರಿಂದ 11 ಲಕ್ಷ ಬೆಲೆ ಬಾಳುವ 502 ಗ್ರಾಂ ಚಿನ್ನ ಮತ್ತು 65 ಸಾವಿರ ರೂ ವಶಪಡಿಸಿಕೊಂಡಿದ್ದಾರೆ.

ಒಂಟಿ ಮಹಿಳೆ ಮನೆಗೆ ನುಗ್ಗಿ ಆಯುಧಗಳನ್ನು ತೋರಿಸಿ ಚಿನ್ನಾಭರಣಗಳನ್ನು ಸುಲಿಗೆ ಮಾಡುತ್ತಿದ್ದ ಬೆಟ್ಟದಾಸನಪುರದ ನಯಿಮ್‌ ಅಹಮದ್‌(23), ಬೇಗೂರು ಮೈಲಾಸಂದ್ರದ ಕಿಶೋರ್‌ ಕುಮಾರ್‌(22) ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಮತ್ತು ಟಿ.ವಿ.ಯನ್ನು ವಶಪಡಿಸಿಕೊಂಡಿದ್ದಾರೆ.

ಕುರುಬರಹಳ್ಳಿ ಶಿವನ ದೇವಸ್ದಾನದ ಬಳಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಲಪುರದ ಸೈಯ್ಯದ್ ಅಪ್ಸರ್‌(24) ರಾಮಚಂದ್ರಪುರದವರಾದ ವಸೀಮ್ ಷರೀಫ್(23), ಹಾಖಿಲ್ ಅಹಮದ್(24), ವಾಜಿದ್‍ಅಹಮದ್(24), ಮಹಮದ್ ಹನೀಫ್(24) ಬಂಧಿತ ಆರೋಪಿಗಳು.

 basaveshwara nagar police nabbed 9

ಬಂಧಿತರಿಂದ ಆರು ಲಕ್ಷ ಮೌಲ್ಯದ 144ಗ್ರಾಂ ಚಿನ್ನದ ಆಭರಣ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಮತ್ತು ಒಂದು ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬಸವೇಶ್ವರನಗರ, ರಾಜರಾಜೇಶ್ವರಿನಗರ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ 3 ಸರ ಅಪಹರಣ ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ.

ಬಸವೇಶ್ವರನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಪೂರ್ಣಚಂದ್ರ ತೇಜಸ್ವಿರವರ ನೇತೃತ್ವದಲ್ಲಿ ಸಿ.ಎ.ಸಿದ್ದಲಿಂಗಯ್ಯ, ಬಿ.ಎಸ್.ಅಶೋಕ್, ಕುಮಾರ, ಗಂಗರಾಜು, ಶಿವಕುಮಾರ, ರಮೇಶ, ಸಿದ್ದಪ್ಪ ರಾವ್, ಗಿರಿಜಾ ಶಂಕರ್, ಸತೀಶ್ ಕುಮಾರ್ ಅವರು ಈ ಮೂರು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಖಲೆಯಿಲ್ಲದೇ ಹಣ ಸಾಗಾಟ:
ದಾಖಲೆ ಇಲ್ಲದೆ ಹಣವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಚಿಕ್ಕಪೇಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯ ಸಾಗರ್ ಹರಗುಡೆ ಬಿನ್ ದಿನಕರ್‌(22) ಬಂಧಿತ ಆರೋಪಿ.

ಚಿಕ್ಕಪೇಟೆ ಮುಖ್ಯ ರಸ್ತೆಯ ಸುದರ್ಶನ್ ಸಿಲ್ಕ್ಸ್ ಹೌಸ್ ಮುಂಭಾಗ ಬ್ಯಾಗ್‍ನಲ್ಲಿ ಯಾವುದೇ ದಾಖಲೆಗಳಿಲ್ಲದ ಹಣವನ್ನು ತೆಗೆದುಕೊಂಡು ಸಂಶಯಾಸ್ಪದವಾಗಿ ಬರುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಿಕ್ಕಪೇಟೆ ಪೊಲೀಸ್ ಇನ್‌ಸ್ಪೆಕ್ಟರ್‌ ಹಣಮಂತರಾಯ ಎಸ್ ರವರ ನೇತೃತ್ವದಲ್ಲಿ ಪಿಎಸ್‍ಐ ಮೋಹನ್ ಕುಮಾರ್ ಮತ್ತು ಸಿಬ್ಬಂದಿಗಳಾದ ಎಎಸ್‍ಐ ರವಿಸಿಂಗ್, ಚನ್ನಪ್ಪರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
Cracking different cases including looting, chain snatching, dacoity, housebreak and theft , Bangalore basaveshwara nagar police nabbed 9 accused and seized 646 grams gold worth valuables from them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X