ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನ, ಗೃಹ ಸಚಿವರ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಆ. 19: ಬೆಂಗಳೂರಿನ ಎಂಎಸ್ ರಾಮಯ್ಯ ಅಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಅಧಿಕಾರಿಗಳು ಬಂಧಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Recommended Video

Vedkrishi-ರೈತರಿಗೆ ಉಪಯೋಗವಾಗುತ್ತೆ ಈ ಅಪ್ಲಿಕೇಶನ್ | Oneindia Kannada

ರಾಮಯ್ಯ ಕಾಲೇಜಿನಲ್ಲಿ ಎನ್.ಐ.ಎ ಇಂದ ಒಬ್ಬ ವೈದ್ಯನ ಬಂಧನ ಆಗಿದೆ, ಈಗಾಗಲೇ ಎರಡು ಉಗ್ರ ಗುಂಪುಗಳ ಲಿಂಕ್ ಇರೋದನ್ನು ಬಹಿರಂಗ ಪಡಿಸಲಾಗಿದೆ. ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದರು.

ISIS ಜೊತೆ ಲಿಂಕ್, ಬೆಂಗಳೂರಿನ ವೈದ್ಯನನ್ನು ಬಂಧಿಸಿದ NIA ISIS ಜೊತೆ ಲಿಂಕ್, ಬೆಂಗಳೂರಿನ ವೈದ್ಯನನ್ನು ಬಂಧಿಸಿದ NIA

ಎನ್ಐಎ ಜೊತೆ ನಮ್ಮ ಐಎಸ್ಡಿಯವರು ನಿರಂತರ ಸಂಪರ್ಕದಲ್ಲಿದ್ದಾರೆ. ಈ ಪ್ರಕರಣದಲ್ಲಿ ನಾವು ಎನ್ಐಎಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದೇವೆ. ನಮ್ಮ ಕೆಲವು ಕೇಸ್ ಗಳಿಗೆ ಎನ್ಐಎ ಸಹಕರಿಸುತ್ತಿದೆ. ದೇಶದ ವಿರುದ್ಧದ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆಯ ಅವಶ್ಯಕತೆಯಿದೆ ಎಂದು ಹೇಳಿದರು.

Basavaraj Bommai Reaction on NIA arrest of Bengaluru doctor for alleged ISIS links

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕಿರಿಯ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುರ್ ರೆಹಮಾನ್ ನನ್ನು ಎನ್ಐಎ ತಂಡವು ನಿನ್ನೆ(ಆಗಸ್ಟ್ .18) ಬಂಧಿಸಿದೆ.

ಬಸವನಗುಡಿಯ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ 28 ವರ್ಷ ವಯಸ್ಸಿನ ಕಣ್ಣು ವೈದ್ಯ (ophthalmologist) ಅಬ್ದುಲ್ ರೆಹಮಾನ್ 2014ರಿಂದ ಇರಾಕಿನ ಉಗ್ರ ಸಂಘಟನೆ ಐಎಸ್ಐಎಸ್ ಜೊತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿನ್ಸ್ (ಐಎಸ್ ಕೆಪಿ) ಸಂಘಟನೆಯ ಸದಸ್ಯ ಎಂದು ತಿಳಿದು ಬಂದಿದೆ.

ಬಸವನಗುಡಿಯಲ್ಲಿ ಅಬ್ದುರ್ ರೆಹಮಾನ್ ಮನೆಯಿಂದ ಲ್ಯಾಪ್ ಟಾಪ್, ಪುಸ್ತಕ, ಪೆನ್ ಡ್ರೈವ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಇನ್ನು ಎರಡು ಕಡೆ ದಾಳಿ ನಡೆಸಲಾಗಿದೆ. ಗುರಪ್ಪನ ಪಾಳ್ಯದ ನಿವಾಸಿ ಡಾ. ಅಫ್ರೋಜ್ ಅಹ್ಮದ್ ಎಂಬುವರು ಹಾಗೂ ಮತ್ತೊಬ್ಬ ಶಂಕಿತನನ್ನು ಬುಧವಾರದಂದು ಎನ್ಐಎ ತಂಡದವರು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

English summary
Karnataka Home Minister Basavaraj Bommai Reaction on NIA arrest of Bengaluru ophthalmologist Abdur Rehman for alleged ISIS links.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X