ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಫೋಟಕ ಪತ್ತೆ ಪ್ರಕರಣ ಆರೋಪಿ ಬಂಧನ: ಎಚ್‌ಡಿಕೆಗೆ ಬೊಮ್ಮಾಯಿ ತಿರುಗೇಟು

|
Google Oneindia Kannada News

ಬೆಂಗಳೂರು, ಜನವರಿ 22: ಮಂಗಳೂರು ಸ್ಫೋಟಕ ಪತ್ತೆ ಪ್ರಕರಣದಲ್ಲಿ ನಾವು ಮೊದಲಿನಿಂದಲೂ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಬಗ್ಗೆ ಮಾತಾಡಿರಲಿಲ್ಲ. ತಪ್ಪಿತಸ್ಥರನ್ನು ಹಿಡಿಯುತ್ತೇವೆ ಎಂದು ಹೇಳಿದ್ದೆವು, ಹಿಡಿದಿದ್ದೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Recommended Video

ಕಾಶ್ಮೀರ ವಿಚಾರದಲ್ಲಿ ಟ್ರಂಪ್ ಮಧ್ಯಸ್ತಿಕೆ | Donald Trump | Kashmir | India | Oneindia kannada

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೋಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಆತನ ಸುತ್ತಮುತ್ತಲಿನವರನ್ನು ಸೇರಿ ಎಲ್ಲಾ ಹಂತದಲ್ಲೂ ವಿಚಾರಣೆ ಮಾಡಿದಾಗ ವಿಧಿಯಿಲ್ಲದೇ ಬಂದು ಶರಣಾಗಿದ್ದಾನೆ ಎಂದರು.

ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?

ಪೊಲೀಸರ ಬಗ್ಗೆ ಯಾರೂ ಕೂಡಾ ಹಗುರವಾಗಿ ಮಾತಾಡಬಾರದು. ಕುಮಾರಸ್ವಾಮಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆಡುವ ಮಾತುಗಳು ದುಷ್ಕೃತ್ಯಗಳಿಗೆ ಪ್ರಚೋದನೆ ಆಗದಂತೆ ಅವರು ಎಚ್ಚರಿಕೆ ವಹಿಸಬೇಕು. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸಬೇಕೇ ಹೊರತು ಕುಂದಿಸುವುದನ್ನು ನಾವು ಅಪೇಕ್ಷೆ ಪಡುವುದಿಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

Basavaraj Bommai Mangaluru Explosive Accuse Arrest

ಆದಿತ್ಯ ರಾವ್ ನಿರಾಸೆ ಹೊಂದಿದ ಎಂಜಿನಿಯರಿಂಗ್ ಪದವೀಧರ. ಹಿಂದೆ ಕೆಐಎಎಲ್ ನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಹುಸಿ ಕರೆ ಮಾಡಿ ಸಿಕ್ಕಿಹಾಕಿಕೊಂಡು ಸೆರೆವಾಸ ಅನುಭವಿಸಿದ್ದಾನೆ. ಆದಿತ್ಯ ರಾವ್ ವಿರುದ್ಧ ಕೆಐಎಎಲ್ ನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.

ಮಂಗಳೂರು ಬಾಂಬ್ ಪ್ರಕರಣವನ್ನು ಮಂಗಳೂರು ಬಾಂಬ್ ಪ್ರಕರಣವನ್ನು "ಬಿಜೆಪಿ ಪ್ರಹಸನ" ಎಂದು ನಗೆಯಾಡಿದ ಎಚ್ ಡಿಕೆ

ಎಫ್‌ಎಸ್‌ಎಲ್ ವರದಿ ಆಧರಿಸಿ ಮುಂದಿನ ತನಿಖೆ ನಿರ್ಧಾರ ಆಗುತ್ತದೆ. ಸ್ಫೋಟಕ ಪತ್ತೆಯಾದ ಕೂಡಲೇ ಸಹಜವಾಗಿ ಕೇಂದ್ರ ಗೃಹ ಇಲಾಖೆಗೆ ವರದಿ ರವಾನೆಯಾಗಿದೆ. ಮುಂದಿನ ತನಿಖೆ ಬಳಿಕ ಹೆಚ್ಚಿನ ವರದಿ ಕಳುಹಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

English summary
Home Minister Basavaraj Bommai slammed JDS leader HD Kumaraswamy for his statement against police on Mangaluru explosive case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X