ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ತಾಂತ್ರಿಕ ವ್ಯವಸ್ಥೆ ಬಲಪಡಿಸಿ; ಬೊಮ್ಮಾಯಿ ಕರೆ

|
Google Oneindia Kannada News

ಬೆಂಗಳೂರು, ಜೂನ್ 30 : "ಹೊಸ ಆಯಾಮ, ಸಂಶೋಧನೆಗಳ ಮೂಲಕ ಬೆಂಗಳೂರಿನಲ್ಲಿ ಶ್ರೇಷ್ಟ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸುವಂತೆ" ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

Recommended Video

Bommai ಹಾಗು Modiಯವರು Bosch ಬಗ್ಗೆ ಹೇಳಿದ್ದೇನು? | Oneindia Kannada

ಆಡುಗೋಡಿಯಲ್ಲಿ ನಿರ್ಮಿಸಿರುವ ಬಾಷ್ ಸ್ಮಾರ್ಟ್ ಕ್ಯಾಂಪ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಆಗಿ ಉದ್ಘಾಟನೆಯನ್ನು ಮಾಡಿದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವೇಳೆ ಬಾಷ್ ಕಂಪನಿಯ ಕಾರ್ಯವೈಖರಿಯನ್ನು ಮತ್ತು ಬಾಷ್ ಕಂಪನಿ ಸಾಧಿಸಬೇಕಿರುವ ಅಂಶವನ್ನು ತಿಳಿಸಿದರು.

ಬಾಷ್‌ನ ಮೊದಲ ಸ್ಮಾರ್ಟ್ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ ಬಾಷ್‌ನ ಮೊದಲ ಸ್ಮಾರ್ಟ್ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ

"ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು ಶಿಕ್ಷಣ, ಆರೋಗ್ಯ, ಉತ್ಪಾದನೆ, ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮುಂದಿನ 25 ವರ್ಷಗಳು ಬಹಳ ಪ್ರಮುಖವಾಗಿದ್ದು, ಅದನ್ನು ಅಮೃತ ಕಾಲ ಎಂದು ಕರೆಯಲಾಗಿದೆ" ಎಂದು ತಿಳಿಸಿದರು.

"ಇನ್ನು ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನಮಟ್ಟ ಸುಧಾರಣೆ, ಉತ್ತಮ ಪರಿಸರ , ಪರಿಸರ ಮತ್ತು ಉದ್ಯಮಗಳ ಸಂಯೋಜನೆಗೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ತನ್ನ ಛಾಪನ್ನು ಮೂಡಿಸಿರುವ ಬಾಷ್ ಸಂಸ್ಥೆ ಮೇಲ್ಪಂಕ್ತಿ ಹಾಕಬೇಕು" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಬಾಷ್ ಸಂಸ್ಥೆಯ 100 ವರ್ಷ ಸಾಧನೆ ಹೇಳುತ್ತದೆ

ಬಾಷ್ ಸಂಸ್ಥೆಯ 100 ವರ್ಷ ಸಾಧನೆ ಹೇಳುತ್ತದೆ

ಬಾಷ್ ಕಂಪನಿ ಯುವ ಇಂಜಿನಿಯರ್ಸ್‍ಗಳ ಕನಸಿನ ಸಂಸ್ಥೆಯಾಗಿದೆ. ನಾನು ಇಂಜಿನಿಯರ್ ಕಾಲೇಜಿನಲ್ಲಿದ್ದಾಗ ಟಾಟಾ ಮೋಟರ್ಸ್, ಬಾಷ್ ನಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದೆ. ಇದು ಕೇವಲ ಉತ್ಪಾದನಾ ಅಥವಾ ಸಾಫ್ಟ್‌ವೇರ್‌ ಕಂಪನಿಯಲ್ಲ, ಬಾಷ್ ಒಂದು ಸಂಸ್ಕೃತಿಯಾಗಿ ಬೆಳೆದಿದೆ. ಬದ್ಧತೆ, ಸಮರ್ಪಣೆ, ಪರಿಶ್ರಮಗಳಿಂದ ಇದು ಸಾಧ್ಯವಾಗಿದೆ. ಬಾಷ್ ಸಂಸ್ಥೆಯ 100 ವರ್ಷಗಳು ತನ್ನ ಸಾಧನೆಯನ್ನು ತಾನೇ ಹೇಳುತ್ತದೆ.

 ಉತ್ತಮ ಉತ್ಪನ್ನಗಳು ತಯಾರಿಕೆ

ಉತ್ತಮ ಉತ್ಪನ್ನಗಳು ತಯಾರಿಕೆ

ಸ್ವಾತಂತ್ರ್ಯದ ಮುಂಚೆಯೇ ಭಾರತವನ್ನು ಆಧುನಿಕ ಆರ್ಥಿಕ ಕೇಂದ್ರವಾಗಿ ಗುರುತಿಸಿ, ಭಾರತಕ್ಕೆ ಪ್ರವೇಶಿಸಿದರು. ಆರ್ಥಿಕ ಸ್ವಾವಲಂಬನೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಕಾರಣವಾಯಿತು. ವಿಶ್ವ ಎರಡು ಮಹಾಯುದ್ಧಗಳನ್ನು ಕಂಡಿದೆ. ಬಾಷ್ ಎರಡೂ ಯುದ್ಧಗಳ ನಡುವೆಯೂ ಬೆಳೆದಿದೆ. ಮಹಾಯುದ್ಧಗಳು ಹೊಸ ತಂತ್ರಜ್ಞಾನ, ಹೊಸ ಉತ್ಪನ್ನಗಳಿಗೆ ನಾಂದಿಯಾಯಿತು. ಬಾಷ್ ನಲ್ಲಿನ ವಿನ್ಯಾಸಗಳ ನಿಖರತೆಯನ್ನು ಅವುಗಳ ಉತ್ತಮ ಉತ್ಪನ್ನಗಳು ನಿರೂಪಿಸುತ್ತವೆ. ಬಾಷ್ ತನ್ನ ಸದೃಢ ಸಾಧನೆಗಳಿಂದ ವಿಶ್ವದಲ್ಲಿ ಖ್ಯಾತಿ ಪಡೆದಿದೆ ಎಂದರು.

 ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ

ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ

ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ. ಹಿಂದಿನಿಂದಿಲೂ ರಾಜ್ಯ ಹಾಗೂ ಕೇಂದ್ರ ಪಿಎಸ್‍ಯುಗಳ ತಾಂತ್ರಿಕತೆ, ಸಂಶೋಧನೆಗಳು, ಬೆಂಗಳೂರು ನಗರವನ್ನು ಐಟಿಬಿಟಿ ನಗರವಾಗಲು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಜೆನಿಟಿಕ್ಸ್ ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. 400 ಫಾರ್ಚೂನ್ ಕಂಪನಿಗಳು ಇಲ್ಲಿವೆ. ಏರೋಸ್ಪೇಸ್, ನವೀಕರೀಸಬಹುದಾದ ಇಂಧನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೈಡ್ರೋಜನ್ ಇಂಧನದ ಉತ್ಪಾದನೆಗೆ ಒತ್ತು ನೀಡಲಾಗಿದ್ದು, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

 ಬಾಷ್‍ನ ಸ್ಮಾರ್ಟ್ ಕ್ಯಾಂಪಸ್ ಪರಿಸರ ಸ್ನೇಹಿ

ಬಾಷ್‍ನ ಸ್ಮಾರ್ಟ್ ಕ್ಯಾಂಪಸ್ ಪರಿಸರ ಸ್ನೇಹಿ

ಬಾಷ್ ಸಂಸ್ಥೆಯ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಗಲಿಗೆ ಹೆಗಲು ನೀಡಲಿದೆ. ಬಾಷ್ ಸಂಸ್ಥೆಯ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಸಲಹೆ ನೀಡಿದರು. ಬಾಷ್‍ನ ಸ್ಮಾರ್ಟ್ ಕ್ಯಾಂಪಸ್ ಪರಿಸರ ಸ್ನೇಹಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

English summary
Appreciating Bosch for its technological excellence and innovations Karnataka chief minister Basavaraj Bommai called bosch to set up strong technical support system in Bengaluru, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X