ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷದ ಸಂಭ್ರಮಕ್ಕೆ ಮತ್ತೇರಿಸುವ ಸುದ್ದಿ!

|
Google Oneindia Kannada News

ಬೆಂಗಳೂರು, ಡಿ. 22 : ಹೊಸ ವರ್ಷದ ಸ್ವಾಗತಕ್ಕೆ ಹಂಬಲಿಸುವವರಿಗೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಒಂದು ವಾರಕ್ಕೆ ಮೊದಲೇ ಮತ್ತೇರಿಸುವ ಸುದ್ದಿ ನೀಡಿದ್ದಾರೆ. ಡಿ.31 ರಂದು ತಡರಾತ್ರಿ 1 ಗಂಟೆವರೆಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ.

ಈ ಕುರಿತು ಪ್ರಕರಣೆ ಹೊರಡಿಸಿರುವ ಪೊಲೀಸರು ಡಿ.31ರಿಂದ ಜನವರಿ 1ರ 1 ಗಂಟೆ ವರೆಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಆದೇಶ ಎಲ್ಲ ಹೋಟೆಲ್, ತಿಂಡಿ ತಿನಿಸು ಮಾರಾಟ ಮಳಿಗೆಗಳಿಗೂ ಅನ್ವಯವಾಗುತ್ತದೆ ಎಂದು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Raghavendra Auradkar

ಬೆಂಗಳೂರು ನಗರ ವ್ಯಾಪ್ತಿಗೆ ಒಳಪಡುವ ಬಾರ್, ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರು ಅಬಕಾರಿ ಇಲಾಖೆಯಿಂದ ರಾತ್ರಿ 1 ಗಂಟೆವರೆಗೆ ತೆರೆದಿರಲು ಸೂಕ್ತ ಅನುಮತಿ ಪಡೆಯಬೇಕೆಂದು ಇಲಾಖೆ ತಿಳಿಸಿದೆ. ಹೊಸ ವರ್ಷದ ಸ್ವಾಗತಕ್ಕೆ ಜನರು ಸಜ್ಜಾಗುತ್ತಿದ್ದರೆ, ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎಂದು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಹೊಸ ವರ್ಷದ ಸ್ವಾಗತ ನೆಪದಲ್ಲಿ ಅಕ್ಕಪಕ್ಕದವರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸರು ಬಾರ್, ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಹೊಸ ವರ್ಷದ ಸ್ವಾಗತಿಸಲು ಒಂದು ವಾರಕ್ಕು ಹೆಚ್ಚು ಕಾಲ ಬಾಕಿ ಇದ್ದು, ಸಿಲಿಕಾನ್ ಸಿಟಿ ಬೆಂಗಳೂರು, ಹ್ಯಾಪಿ ನ್ಯೂ ಇಯರ್ ಹೇಳಲು ಸಜ್ಜಾಗುತ್ತಿದೆ.

English summary
Police Commissioner Raghavendra H.Auradkar has permitted bars and restaurants in the Bangalore to remain open till 1 am on January 1, in view of the New Year celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X