ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ಉದ್ಯಾನ: ಮರಿ ಆನೆಗೆ 'ಸುಧಾಮೂರ್ತಿ' ಹೆಸರು

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಇನ್ಫೋಸಿಸ್ ನೀಡಿರುವ ಕೊಡುಗೆ ಸ್ಮರಿಸುತ್ತಾ ಮರಿ ಆನೆಯೊಂದಕ್ಕೆ ಸುಧಾ ಎಂದು ನಾಮಕರಣ ಮಾಡಲಾಗಿದೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಎಕ್ಸಿಕ್ಯೂಟಿವ್ ಡೈರೆಕ್ಟರ್ ವನಶ್ರೀ ವಿಪಿನ್ ಸಿಂಗ್ ಅವರು ಮಾತನಾಡಿ, ವನ್ಯ ಪ್ರಾಣಿಗಳ ಕುರಿತು ಸುಧಾಮೂರ್ತಿಯವರಿಗೆ ಪ್ರೀತಿ ಇದೆ. ಸುಧಾಮೂರ್ತಿಯವರು ಈ ಮನವಿಗೆ ಒಪ್ಪಿದ್ದಾರೆ ಎಂದರು.

ಕೋವಿಡ್ 19: ಸರ್ಕಾರಕ್ಕೆ 100 ಕೋಟಿ ನೀಡಿದ ಇನ್ಫೋಸಿಸ್ ಫೌಂಡೇಷನ್‌ಕೋವಿಡ್ 19: ಸರ್ಕಾರಕ್ಕೆ 100 ಕೋಟಿ ನೀಡಿದ ಇನ್ಫೋಸಿಸ್ ಫೌಂಡೇಷನ್‌

ಸುವರ್ಣ ಎಂಬ 45 ವರ್ಷದ ಆನೆ ಆಗಸ್ಟ್ 17 ರಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಇದರಿಂದ ಉದ್ಯಾನದಲ್ಲಿ ಆನೆಗಳ ಸಂತತಿ 25ಕ್ಕೆ ಏರಿದಂತಾಗಿದೆ.

Bannerughatta Biological Park Names Elephant Calf After Sudha Murthy

ಇನ್ಫೋಸಿಸ್ ಪ್ರತಿಷ್ಠಾನವು ಜೈವಿಕ ಉದ್ಯಾನದಲ್ಲಿ ಹುಲಿ, ಝೀಬ್ರಾ, ಜಿರಾಫೆ ಇರುವ ಪ್ರದೇಶಗಳಲ್ಲಿ ಬೇಲಿಯ ವ್ಯವಸ್ಥೆ ಮಾಡಿದ್ದು, ಬೋರ್‌ವೆಲ್ ತೆಗೆಸಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ಸೇರಿದಂತೆ ಹಲವರು ಸುಧಾ ಅವರ ಹೆಸರನ್ನು ಇಡುವಂತೆ ಸೂಚಿಸಿದ್ದರು.

ಉದ್ಯಾನದಲ್ಲಿ 101 ಬಗೆಯ ಸುಮಾರು 2300 ಪ್ರಾಣಿಗಳಿವೆ, ಒಟ್ಟು 731.88 ಎಕರೆ ವ್ಯಾಪ್ತಿಯನ್ನು ಒಳಗೊಂಡಿದೆ. ಚಿಟ್ಟೆ ಪಾರ್ಕ್ ಕೂಡ ಇದೆ, ಸಫಾರಿಗೂ ಅವಕಾಶವಿದೆ.

English summary
Bengaluru Bannerghatta Biological Park announced on Wednesday that an elephant calf will be named as 'Sudha' to acknowledge the contribution of Infosys Foundation Chairperson Sudha Murthy towards the cause of wildlife conservation. Executive Director of BBP, Vanashree Vipin Singh said Sudha Murthy has consented to the proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X