ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುವಾರದಿಂದ ಬನ್ನೇರುಘಟ್ಟ ಮೃಗಾಲಯ, ಸಫಾರಿ ಪುನರಾರಂಭ

|
Google Oneindia Kannada News

ಬೆಂಗಳೂರು, ಜೂನ್ 29: ಕೊರೊನಾ ಎರಡನೇ ಅಲೆ ಕಾರಣವಾಗಿ ಕಳೆದ 91 ದಿನಗಳಿಂದ ಮುಚ್ಚಲಾಗಿದ್ದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇದೇ ಗುರುವಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಕೆಲವು ನಿರ್ಬಂಧಗಳೊಂದಿಗೆ ಮೃಗಾಲಯಕ್ಕೆ ಹಾಗೂ ಸಫಾರಿಗೆ ಅವಕಾಶ ಮಾಡಿಕೊಡಲಾಗಿದೆ. ಸಫಾರಿಗೆ ಬಳಸಲಾಗುವ ವಾಹನ ಎಸಿ ರಹಿತವಾಗಿರಬೇಕು, ಹೊರಗಿನಿಂದ ಆಹಾರ ತರುವಂತಿಲ್ಲ, ಜನರು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ ಎಂಬಿತ್ಯಾದಿ ನಿಯಮಗಳನ್ನು ಹೇರಲಾಗಿದೆ. ಮೃಗಾಲಯದ ಆವರಣದಲ್ಲಿ ಪ್ಯಾಕ್ ಮಾಡಿದ ಆಹಾರ ಸೇವಿಸಲು ಮಾತ್ರ ಅವಕಾಶ ನೀಡಲಾಗಿದೆ.

ಪ್ರವಾಸಿಗರಿಗಾಗಿ ಬಾಗಿಲು ತೆರೆದ ಕರ್ನಾಟಕದ 7 ಮೃಗಾಲಯಗಳುಪ್ರವಾಸಿಗರಿಗಾಗಿ ಬಾಗಿಲು ತೆರೆದ ಕರ್ನಾಟಕದ 7 ಮೃಗಾಲಯಗಳು

ಉದ್ಯಾನ ಹಾಗೂ ಸಫಾರಿಗೆ ಅವಕಾಶ ನೀಡುವಂತೆ ಕೋರಿ ಕಳೆದ ವಾರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ಬನ್ನೇರುಘಟ್ಟ ಮೃಗಾಲಯ ಆಡಳಿತ ಪ್ರಸ್ತಾವ ಸಲ್ಲಿಸಿತ್ತು.

Bannerghatta Zoo, Safari To Open For Visitors From July 1

"ಒಂದು ಬ್ಯಾಚ್‌ನಲ್ಲಿ 2000 ಜನರಿಗೆ ಅನುಮತಿ ನೀಡಲಿದ್ದು, ದಿನಕ್ಕೆ ನಾಲ್ಕು ಬ್ಯಾಚ್‌ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆ ಇದಕ್ಕೆ ಅನುಮತಿ ನೀಡಿದ್ದು, ಇದೇ ಗುರುವಾರ, ಅಂದರೆ ಜುಲೈ 1ರಿಂದ ಉದ್ಯಾನ ತೆರೆಯುತ್ತೇವೆ" ಎಂದು ಮೃಗಾಲಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

Recommended Video

Kumaraswamy ಅವರು ಪ್ರಾದೇಶಿಕ ಪಕ್ಷದ ಮಹತ್ವವನ್ನು ತಿಳಿಸಿದರು | Oneindia Kannada

732 ಎಕರೆ ಪ್ರದೇಶದ ಈ ಉದ್ಯಾನದಲ್ಲಿ ಮೃಗಾಲಯ, ಸಫಾರಿ, ಚಿಟ್ಟೆ ಪಾರ್ಕ್ ಹಾಗೂ ಪ್ರಾಣಿ ಸಂರಕ್ಷಣಾ ಕೇಂದ್ರವಿದೆ. ಏಪ್ರಿಲ್ 28ರಂದು ಕೊರೊನಾ ಕಾರಣವಾಗಿ ಮೃಗಾಲಯವನ್ನು ಮುಚ್ಚಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಉದ್ಯಾನವನ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದೀಗ 91 ದಿನಗಳ ಪುನರಾರಂಭವಾಗುತ್ತಿದೆ.

English summary
Bannerghatta zoo and safari will be open for visitors from july 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X