ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ರಸ್ತೆ ವಿಸ್ತರಣೆ ಇನ್ನಷ್ಟು ವಿಳಂಬ, ಮೆಟ್ರೋ ಕಾಮಗಾರಿಯೇ ಕಾರಣ

|
Google Oneindia Kannada News

ಬೆಂಗಳೂರು, ಜೂನ್ 18: ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ಬನ್ನೇರುಘಟ್ಟ ರಸ್ತೆ ವಿಸ್ತರಣೆ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ.

ಬನ್ನೇರುಘಟ್ಟ ಸುತ್ತ ಮುತ್ತಲು ಈಗ ಸಾಕಷ್ಟು ವಾಹನಗಳು ಸಂಚರಿಸುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ಅನಿವಾರ್ಯವಾಗಿದೆ. ಒಟ್ಟು 4.5 ಕಿ.ಮೀ ಉದ್ದದಷ್ಟು ರಸ್ತೆಯನ್ನು ಮೀನಾಕ್ಷಿ ದೇವಸ್ಥಾನದಿಂದ ವಿಸ್ತರಣೆಗೊಳಿಸಲಾಗುತ್ತಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು? ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು?

ಬನ್ನೇರುಘಟ್ಟ ರಸ್ತೆ ವಿಸ್ತರಣೆ ಕಾಮಗಾರಿಯ ತಪಾಸಣೆ ನಡೆಸಿದ ಅವರು ಮೆಟ್ರೋ ಮತ್ತು ಜಲ ಮಂಡಳಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡಬೇಕು.

Bannerghatta road widening will be delayed

ಜೆಡಿ ಮರ ಜಕ್ಷನ್‌ನಿಂದ ಕೋಳಿಫಾರಂ ಗೇಟ್‌ವರೆಗೆ 7.44 ಕಿ.ಮೀ ಉದ್ದದ ರಸ್ತೆ ವಿಸ್ತರಣೆ ಕಾಮಗಾರಿಯನ್ನು 152 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 18ಮೀ.ನಿಂದ 24 ಮೀನಷ್ಟು ಅಗಲವಿರುವ ರಸ್ತೆಯನ್ನು 45 ಮೀಟರ್‌ವರೆಗೆ ವಿಸ್ತರಿಸಲಾಗುತ್ತಿದೆ.150 ಅಡಿ ಅಗಲದ ಆರು ಪಥದ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ.

ಪ್ರತಿಯೊಂದು ಪಥವೂ 10.5 ಮೀ ಅಗಲವಿರಲಿದೆ. ರಸ್ತೆ ಮಧ್ಯದಲ್ಲಿ 3 ಮೀಟರ್ ಅಗಲದ ವಿಭಜಕಗಳಿದ್ದು, ಇಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ಅಳವಡಿಸಲಾಗುತ್ತದೆ. 7.44 ಕಿ.ಮೀ ಉದ್ದದ ಪೈಕಿ ಸದ್ಯ 4.5 ಕಿ.ಮೀ ಉದ್ದದ ಕಾಮಗಾರಿ ಮುಗಿದಿದೆ.
ಸರ್ವೀಸ್ ರಸ್ತೆಯ ಎರಡೂ ಬದಿಯಲ್ಲಿ 2 ಪಥದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

English summary
Bannerghatta road widening project will be delayed because of Namma metro lane work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X