ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶ ಕಡಿತ!

|
Google Oneindia Kannada News

ಬೆಂಗಳೂರು, ನವೆಂಬರ್ 11 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಮರು ಪರಿಶೀಲನೆ ಮಾಡಲಾಗಿದೆ. 286.96 ಚದರ ಕಿ.ಮೀ. ಇದ್ದ ವಲಯವನ್ನು 168.84 ಚದರ ಕಿ.ಮೀ.ಗೆ ಕಡಿಮೆ ಮಾಡಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕೇಂದ್ರ ಪರಿಸರ ಖಾತೆ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಮರು ವಿಂಗಡನೆ ಮಾಡಿ, ಕರಡು ಪ್ರತಿಯನ್ನು ಹೊರಡಿಸಿದೆ. ಹೊಸ ವಲಯದಲ್ಲಿ ಕೇವಲ 77 ಗ್ರಾಮಗಳು ಸೂಕ್ಷ್ಮ ವಲಯಕ್ಕೆ ಸೇರಲಿವೆ. ಹಿಂದೆ 147 ಗ್ರಾಮಗಳು ಸೇರಿದ್ದವು.

ಬನ್ನೇರುಘಟ್ಟದಲ್ಲಿ ಜಾರಿಗೆ ಬರಲಿದೆ ತಿರುಪತಿ ಮಾದರಿ ವ್ಯವಸ್ಥೆ!ಬನ್ನೇರುಘಟ್ಟದಲ್ಲಿ ಜಾರಿಗೆ ಬರಲಿದೆ ತಿರುಪತಿ ಮಾದರಿ ವ್ಯವಸ್ಥೆ!

ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 168.84 ಚದರ ಕಿ.ಮೀ.ಗೆ ಕಡಿಮೆ ಮಾಡಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸುತ್ತ-ಮುತ್ತ ಉಳಿದಿರುವ ಈ ಹಸಿರು ವಲಯವನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

Bannerghatta park ESZ cuts by 100 sqkm

ಕನಕಪುರ ಮತ್ತು ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಕಡಿತಗೊಳಿಸಲಾಗಿದೆ. ಕಡಿಮೆ ಮಾಡಿರುವ ಪ್ರದೇಶದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಯಬಹುದು ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸರ ಪ್ರೇಮಿಗಳು ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕರಡು ಪ್ರತಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಕೇಂದ್ರ ಸರ್ಕಾರ 60 ದಿನಗಳ ಗಡುವು ನೀಡಿದೆ.

ಬನ್ನೇರುಘಟ್ಟ : ಪ್ರೇಯಸಿ ಮುಂದೆ ಪ್ರಿಯಕರನ ಕೈ ಕಡಿದ ಪ್ರಕರಣಕ್ಕೆ ತಿರುವು!ಬನ್ನೇರುಘಟ್ಟ : ಪ್ರೇಯಸಿ ಮುಂದೆ ಪ್ರಿಯಕರನ ಕೈ ಕಡಿದ ಪ್ರಕರಣಕ್ಕೆ ತಿರುವು!

ಪರಿಸರ ಸೂಕ್ಷ್ಮ ವಲಯ ಕಡಿತಗೊಳಿಸಿರುವ ಹೊಸ ಆದೇಶ ಜಾರಿಗೆ ಬರುವ ತನಕ 2016ರಲ್ಲಿ ನೀಡಲಾಗಿರುವ ಆದೇಶ ಜಾರಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

English summary
Area of the Eco Sensitive Zone (ESZ) of Bannerghatta National Park (BNP) has been reduced from the earlier 268.96 sq km to 168.84 sq km. The draft re-notification shock to many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X