ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಿಧಾನನಕ್ಕೆ ಕಾರಣಗಳು

|
Google Oneindia Kannada News

ಬೆಂಗಳೂರು, ಜೂನ್ 25: ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣ ಇಲ್ಲಿದೆ.

ಬನ್ನೇರುಘಟ್ಟ ರಸ್ತೆಯಲ್ಲಿ 7.5 ಕಿ.ಮೀ ಉದ್ದದ ಮೆಟ್ರೋ ಎಲಿವೇಟೆಡ್ ಸ್ಟ್ರೆಚ್ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಗುಂಡಿಗಳಿಂದಾಗಿ ನಾಗಸಂದ್ರ-ಗೊಟ್ಟಿಗೆರೆ ಮೆಟ್ರೋ ಮಾರ್ಗ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ಜೊತೆಗೆ ಜಲಮಂಡಳಿ ನೀರಿನ ಪೈಪ್‌ ಅಳವಡಿಕೆಗಾಗಿ ತೆಗೆದಿರುವ ರಸ್ತೆಗುಂಡಿಗಳೊಂದುಕಡೆ, ವಾಹನಗಳ ಓಡಾಟ, ಕಳಪೆ ಕಾಮಗಾರಿಯಿಂದಾಗಿ ಆಗಿರುವ ರಸ್ತೆಗುಂಡಿ ಇನ್ನೊಂದು ಕಡೆಗಿದೆ.

 Bannerghatta metro work may further delay

ಸ್ವಾಗತ ರಸ್ತೆ ಕ್ರಾಸ್ ಮೆಟ್ರೋ ಸ್ಟೇಷನ್‌ ಹಾಗೂ ಗೊಟ್ಟಿಗೆರೆ ಮೆಟ್ರೋ ಸ್ಟೇಷನ್ ನಡುವೆ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

ನಾಗವಾರ ಗೊಟ್ಟಿಗೆರೆ ಮಾರ್ಗದಲ್ಲಿ ಐದು ಸುರಂಗ ಮೆಟ್ರೋ ನಿಲ್ದಾಣಗಳು ಬರಲಿವೆ. ಜೆಪಿನಗರ, ಸ್ವಾಗತ ಕ್ರಾಸ್, ಹುಳಿಮಾವು ಹಾಗೂ ಗೊಟ್ಟಿಗೆರೆ ಮಾರ್ಗದಲ್ಲಿ ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದೆ.

ಈಗಾಗಲೇ ಮೂರು ನಿಲ್ದಾಣ ಕಾರ್ಯ ಮುಕ್ತಾಯಗೊಂಡಿದ್ದು, ಇನ್ನೂ ಎರಡು ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ. ನಿತ್ಯ ಆ ರಸ್ತೆಯಲ್ಲಿ ಓಡಾಡುವವರಿಂದ ರಸ್ತೆ ಗುಣಮಟ್ಟವೂ ಹಾಳಾಗಿದೆ, ಈ ರಸ್ತೆಗುಂಡಿಗಳಿಂದಾಗಿ ಮೆಟ್ರೋ ಕಾಮಗಾರಿಯೂ ನಿಧಾನ ಸಾಗುತ್ತಿದೆ.

ಅರಕೆರೆ ಸಿಗ್ನಲ್‌ನಿಂದ ಜನಾರ್ಧನ ಟವರ್ ವರೆಗೆ ರಸ್ತೆಯನ್ನು ಗಮನಿಸಿದರೆ ಎಲ್ಲೆಂದರಲ್ಲಿ ಮ್ಯಾನ್‌ಹೋಲ್‌ಗಳು ಬಾಯಿ ತೆರೆದುಕೊಂಡಿವೆ, ರಸ್ತೆಯ ಮಧ್ಯೆಯೇ ಚರಂಡಿ ತುಂಬಿ ಹರಿಯುತ್ತಿದೆ.ಇಂತಹ ಕಾಮಗಾರಿಗಳ ಮಧ್ಯೆ ಕೆಲಸವನ್ನು ಚುರುಕಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

English summary
Bannerghatta metro work may further delay ,Nagavara-Gottigere line is facing problems from overflowing of sewage water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X