ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನಂಜೆ ಸಂಭ್ರಮ ಹೆಚ್ಚಿಸಿದ 'ಆದಿ ಶಂಕರಾಚಾರ್ಯ'

|
Google Oneindia Kannada News

ಬೆಂಗಳೂರು, ಡಿಸೆಂಬರ್, 23: 'ಬನ್ನಂಜೆ 80ರ ಸಂಭ್ರಮ' ದಲ್ಲಿ ಗುರುವಾರ ಚಲನ ಚಿತ್ರಗಳ ಪ್ರದರ್ಶನ. ಬನ್ನಂಜೆ ಗೋವಿಂದಾಚಾರ್ಯ ಮಾರ್ಗದರ್ಶನದ , ಜಿವ ವಿ ಅಯ್ಯರ್ ನಿರ್ದೇಶನ ಮಾಡಿರುವ ಆದಿ ಶಂಕರಾಚಾರ್ಯ ಚಲನಚಿತ್ರವನ್ನು ಆಧ್ಯಾತ್ಮ ಪ್ರೇಮಿಗಳು ಕಣ್ಣು ತುಂಬಿಕೊಂಡರು.

ಗೋವಿಂದಾಚಾರ್ಯ ವಿರಚಿತ ವಿವಿಧ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಮನಸೆಳೆಯುವ ರಂಗೋಲಿ ದಯಾನಂದ ಸಾಗರ್ ಕಾಲೇಜಿನ ಸಭಾಭವನಕ್ಕೆ ಹೊಸ ಕಳೆ ಕಟ್ಟಿತ್ತು. ಈ ವೇಳೆ ಒನ್ ಇಂಡಿಯಾದೊಂದಿಗೆ ಮಾತನಾಡಿದ ಲೇಖಕಿ, ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ವೀಣಾ ಬನ್ನಂಜೆ, ಜನ ಹೊಸತು ಏನೂ ನೀಡಿದರೂ ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ಉದ್ಘಾಟನೆ ಕಾರ್ಯಕ್ರಮದ ವೇಳೆಯೇ ಗೊತ್ತಾಗಿದೆ ಎಂದು ಹೇಳಿದರು. ['ಬನ್ನಂಜೆ 80ರ ಸಂಭ್ರಮ'ಕ್ಕೆ ಬೆಂಗಳೂರಿನಲ್ಲಿ ಭವ್ಯ ಚಾಲನೆ]

ಬದಲಾದ ಸಮಾಜದಲ್ಲಿ ಆಧ್ಯಾತ್ಮ ಸಂಸ್ಕೃತಿಯನ್ನು ಹೊಸ ರೀತಿಯಲ್ಲಿ ಜನರಿಗೆ ತಲುಪಿಸಬೇಕಿದೆ. ಅದಕ್ಕೆಲ್ಲ ಇಂಥ ಕಾರ್ಯಕ್ರಮಗಳು ವೇದಿಕೆಯಾಗುತ್ತವೆ ಎಂದು ಹೇಳಿದರು. ಬನ್ನಿ ಬನ್ನಂಜೆ 80ರ ಸಂಭ್ರಮ' ದಲ್ಲಿ ನಾವು ಒಂದು ಸುತ್ತು ಹಾಕಿಕೊಂಡು ಬರೋಣ ...

ತೆರೆದ ಪುಸ್ತಕ ಲೋಕ

ತೆರೆದ ಪುಸ್ತಕ ಲೋಕ

'ಬನ್ನಂಜೆ 80ರ ಸಂಭ್ರಮ'ದಲ್ಲಿ ಪುಸ್ತಕಳ ಲೋಕವೇ ಅನಾವರಣಗೊಂಡಿದೆ. ಆಧ್ಯಾತ್ಮ ಮತ್ತು ಸನಾತನ ಸಂಸ್ಕೃತಿ ಬಿಂಬಿಸುವ ಅಸಂಖ್ಯ ಪುಸ್ತಕಗಳಿವೆ.

ಆದಿ ಶಂಕರಾಚಾರ್ಯ ಸಿನಿಮಾ

ಆದಿ ಶಂಕರಾಚಾರ್ಯ ಸಿನಿಮಾ

ಬನ್ನಂಜೆ ಗೋವಿಂದಾಚಾರ್ಯ ಮಾರ್ಗದರ್ಶನದ , ಜಿವಿ ಅಯ್ಯರ್ ನಿರ್ದೇಶನ ಮಾಡಿರುವ ಆದಿ ಶಂಕರಾಚಾರ್ಯ ಚಲನಚಿತ್ರವನ್ನು ಆಧ್ಯಾತ್ಮ ಪ್ರೇಮಿಗಳು ಕಣ್ಣು ತುಂಬಿಕೊಂಡರು.

ಚಿಂತನ ಮಂಥನ

ಚಿಂತನ ಮಂಥನ

ಮುಂದಿನ ಕಾರ್ಯಕ್ರಮ ಯಾವುದು? ಯಾವ ಬಗೆಯ ಚಿಂತನ ಮಂಥನ ನಡೆಯಲಿದೆ ಎಂಬುದನ್ನು ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವ ಧರ್ಮ ಪ್ರಿಯರು.

ಮನಸೆಳೆದ ರಂಗೋಲಿ

ಮನಸೆಳೆದ ರಂಗೋಲಿ

ದಯಾನಂದ ಸಾಗರ ಕಾಲೇಜಿನ ಸಭಾಭವನದ ಆವರಣದಲ್ಲಿ ಹಾಕಿರುವ ರಂಗೋಲಿ ಹಿಂದೂ ಧರ್ಮದ ಏಕತೆಯನ್ನು ಸಾರಿ ಹೇಳುತ್ತಿತ್ತು.

ವೀಣಾ ಭನ್ನಂಜೆ ಮಾತು

ವೀಣಾ ಭನ್ನಂಜೆ ಮಾತು

ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ವೀಣಾ ಬನ್ನಂಜೆ, ಜನ ಹೊಸತು ಏನೂ ನೀಡಿದರೂ ತೆಗೆದುಕೊಳ್ಳುತ್ತಾರ. ಮುಂದಿನ ದಿನಗಳ ಮೇಲೆ ನಮ್ಮ ನಿರೀಕ್ಷೆ ಭಾರ ದೊಡ್ಡದಾಗಿದೆ ಎಂದು ಹೇಳಿದರು.

English summary
Scholar, philosopher, pravachanakara, writer, poet, screen play writer, greatest experts of Madhwa philosophy Padma Shri Bannanje Govindacharya's 80th birthday celebration 2nd day highlights
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X