India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್ ಗೆಳತಿಗೆ 5.7 ಕೋಟಿ ಕೊಟ್ಟ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್!

|
Google Oneindia Kannada News

ಬೆಂಗಳೂರು, ಜೂನ್ 26: ಸಿಲಿಕಾನ್ ಸಿಟಿ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಬಳಕೆ ಆಗುತ್ತಿರುವ ಈ ಸೋಷಿಯಲ್ ಮೀಡಿಯಾ ಅನ್ನೋ ಸಾಗರವೇ ಒಂದು ವಂಚನೆಗಳ ಖೆಡ್ಡಾ ಆಗುತ್ತಿದೆ. ಆನ್‌ಲೈನ್ ಅಂದಗಾತಿಗೆ ಬೆರಗಾದ ಬ್ಯಾಂಕ್ ಮ್ಯಾನೇಜರ್ ಕಥೆ ಅದಕ್ಕೊಂದು ಉದಾಹರಣೆ ಆಗುತ್ತದೆ.

ಆನ್‌ಲೈನ್ ಅಂಗಳದಲ್ಲಿ ಸೌಂದರ್ಯದ ಸೆರಗು ಹಿಡಿದು ಹೊರಟ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್ ನೇರವಾಗಿ ಖಾಕಿ ಕೈಗೆ ತಗ್ಲಾಕೊಂಡಿದ್ದಾನೆ. ಡೇಟಿಂಗ್ ಅಪ್ಲಿಕೇಷನ್ ಪರಿಚಯವೇ ಮ್ಯಾನೇಜರ್ ಪಾಲಿಗೆ ಮುಳುವಾಗಿದೆ.

ಇವಳೂ ಇರಲಿ, ಅವಳೂ ಬರಲಿ: ಒಂದೇ ಮಂಟಪದಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ..! ಇವಳೂ ಇರಲಿ, ಅವಳೂ ಬರಲಿ: ಒಂದೇ ಮಂಟಪದಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ..!

ಬೆಂಗಳೂರಿನ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಈ ವಾರದ ಕ್ರೈಂ ಪ್ರಪಂಚದ ಅತಿಥಿ ಆಗಿದ್ದಾನೆ. ಡೇಟಿಂಗ್ ಅಪ್ಲಿಕೇಷನ್‌ನಲ್ಲಿ ಪರಿಚಯವಾದ ಗೆಳತಿಗೆ ಕೋಟಿ ಕೋಟಿ ಹಣವನ್ನು ಟ್ರಾನ್ಸಫರ್ ಮಾಡಿದ ಮ್ಯಾನೇಜರ್ ಈಗ ಅಂದರ್ ಆಗಿದ್ದಾನೆ. ಸೋಷಿಯಲ್ ಮೀಡಿಯಾದ ಸಂಬಂಧವನ್ನು ನೆಚ್ಚಿಕೊಳ್ಳುವ ಮೊದಲು, ಹುಡುಗಿಯರ ಹುಚ್ಚು ಹಚ್ಚಿಕೊಳ್ಳುವ ಮೊದಲು ಈ ವರದಿಯನ್ನೊಮ್ಮೆ ಓದಿ.

ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು? ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?

ಸೋಷಿಯಲ್ ಮೀಡಿಯಾದ ಸಿಕ್ಕ ಐನಾತಿ ಸುಂದರಿ

ಸೋಷಿಯಲ್ ಮೀಡಿಯಾದ ಸಿಕ್ಕ ಐನಾತಿ ಸುಂದರಿ

ಬೆಂಗಳೂರು ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹರಿ ಶಂಕರ್ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದಿದ್ದರೆ ಇವತ್ತು ಹೀಗೆ ಸುದ್ದಿ ಮಾಡುತ್ತಿರಲಿಲ್ಲ. ಟೈಮ್ ಪಾಸ್ ಮಾಡುವುದಕ್ಕೆ ಅಂತಾ ಸೋಷಿಯಲ್ ಮೀಡಿಯಾವನ್ನು ಬಳಸಿದ ಹರಿಶಂಕರ್, ಆನ್‌ಲೈನ್ ಅಂಗಳದಲ್ಲಿ ಅಂದಗಾತಿಯೊಬ್ಬಳನ್ನು ಪರಿಚಯ ಮಾಡಿಕೊಂಡರು. ಸೋಷಿಯಲ್ ಮೀಡಿಯದಲ್ಲಿ ಪರಿಚಯವಾದ ಸುಂದರಿ ಜೊತೆ ಕಷ್ಟ-ಸುಖ ಹಂಚಿಕೊಂಡ ಮ್ಯಾನೇಜರ್ ಈಗ ಕಷ್ಟಕ್ಕೆ ಸಿಲುಕುವಂತಾಗಿದೆ. ಅದಕ್ಕೆ ಕಾರಣವಾಗಿದ್ದೇ ಝಣಝಣ ಕಾಂಚಣ.

ಸುಂದರಿ ನೆಚ್ಚಿಕೊಂಡ ಮ್ಯಾನೇಜರ್ ಈಗ ಪಾಪರ್

ಸುಂದರಿ ನೆಚ್ಚಿಕೊಂಡ ಮ್ಯಾನೇಜರ್ ಈಗ ಪಾಪರ್

ಬೆಂಗಳೂರು ಹನುಮಂತನಗರದ ಇಂಡಿಯನ್ ಬ್ಯಾಂಕ್ ಶಾಖಾ ಮ್ಯಾನೇಜರ್ ಆಗಿದ್ದ ಹರಿ ಶಂಕರ್ ಸುಂದರಿಯ ಸೊಂಪಾದ ಮಾತುಕತೆಗೆ ಮರುಳಾಗಿದ್ದಾರೆ. ಡೇಟಿಂಗ್ ಅಪ್ಲಿಕೇಷನ್ ಅಂದಗಾತಿಗೆ ಒಂದಲ್ಲ ಎರಡಲ್ಲ ಎಂದು ಬರೋಬ್ಬರಿ 5.7 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆ ಮೂಲಕ ಅಧಿಕಾರ ದುರುಪಯೋಗದ ಜೊತೆಗೆ ತಮ್ಮ ಖಾತೆಯಲ್ಲಿದ್ದ ಹಣವನ್ನೂ ಕಳೆದುಕೊಂಡು ಪಾಪರ್ ಆಗಿದ್ದಾರೆ.

ಒಟ್ಟು 28 ಖಾತೆಗಳಿಂದ ಕಾಸು ಆಗಿತ್ತು ಟ್ರಾನ್ಸ್‌ಫರ್

ಒಟ್ಟು 28 ಖಾತೆಗಳಿಂದ ಕಾಸು ಆಗಿತ್ತು ಟ್ರಾನ್ಸ್‌ಫರ್

ಇಂಡಿಯನ್ ಬ್ಯಾಂಕಿನಲ್ಲಿ ಮಹಿಳೆಯೊಬ್ಬರು 1.3 ಕೋಟಿ ರೂಪಾಯಿ ಹಣ ಎಫ್‌ಡಿ ಮಾಡಿದ್ದರು. ಈ ಸ್ಥಿರ ಠೇವಣಿಯ ಮೇಲೆ ಆ ಮಹಿಳೆ 75 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದರು. ಈ ಮಹಿಳೆ ನೀಡಿರುವ ದಾಖಲೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅದೇ ಮಹಿಳೆ ದಾಖಲೆಗಳನ್ನು ಬಳಸಿಕೊಂಡು ಮೇ 13 ರಿಂದ 19ರ ನಡುವೆ 28 ಬ್ಯಾಂಕ್ ಖಾತೆಗಳಿಂದ ಎರಡು ಖಾತೆಗಳಿಗೆ 136 ಬಾರಿ ಹಣ ವರ್ಗಾವಣೆ ಮಾಡಲಾಗಿದೆ. ಒಟ್ಟು 5.7 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಮ್ಯಾನೇಜರ್ ತನ್ನ ಆನ್‌ಲೈನ್ ಗೆಳತಿ ಖಾತೆಗೆ ವರ್ಗಾವಣೆ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಸುಂದರಿ ನೆಚ್ಚಿಕೊಂಡು ಕಂಬಿ ಹಿಂದೆ ಸೇರಿದ ಮ್ಯಾನೇಜರ್

ಸುಂದರಿ ನೆಚ್ಚಿಕೊಂಡು ಕಂಬಿ ಹಿಂದೆ ಸೇರಿದ ಮ್ಯಾನೇಜರ್

ಬೆಂಗಳೂರು ಅಷ್ಟೇ ಅಲ್ಲದೇ ಪಶ್ಚಿಮ ಬಂಗಾಳದ ಬ್ಯಾಂಕ್ ಶಾಖೆಗಳಿಂದಲೂ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಮ್ಯಾನೇಜರ್‌ಗೆ ಬ್ಯಾಂಕಿನ ಸಹಾಯಕ ಮ್ಯಾನೇಜರ್ ಕೌಸಲ್ಯ ಮತ್ತು ಕ್ಲರ್ಕ್ ಮುನಿರಾಜು ಸಾಥ್ ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆರೋಪಿ ಹರಿಶಂಕರ್ ವಿರುದ್ಧ ಇಂಡಿಯನ್ ಬ್ಯಾಂಕ್ ವಲಯ ವ್ಯವಸ್ಥಾಪಕರು ದೂರು ದಾಖಲಿಸಿದ್ದು, ನ್ಯಾಯಾಲಯವು ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸ್ ವಿಚಾರಣೆ ವೇಳೆ ಹರಿಶಂಕರ್ 12.5 ಲಕ್ಷ ರೂಪಾಯಿಗಳ ವೈಯಕ್ತಿಕ ಹಣವನ್ನು ಖಾತೆಗಳಿಗೆ ವರ್ಗಾಯಿಸಿರುವುದು ಮತ್ತು ಈ ವ್ಯವಹಾರಗಳು ನಡೆದಿವೆ ಎಂದು ತಿಳಿದು ಬಂದಿದೆ. 7 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡುವ ಸಾಧ್ಯತೆಯಿದೆ.

ಡೇಟಿಂಗ್ ಸುಂದರಿ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಹೇಳಿಕೆ?

ಡೇಟಿಂಗ್ ಸುಂದರಿ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಹೇಳಿಕೆ?

ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಮಹಿಳೆಯಿಂದ ತಾನು ಎಲ್ಲಾ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಶಂಕರ್ ಹೇಳಿಕೊಂಡಿದ್ದಾರೆ. ಈ ಸಂಬಂಧ ಆಡಿಯೋ ಸಂಭಾಷಣೆಗಳನ್ನು ಸಹ ನಡೆಸಿದ್ದಾನೆ ಎಂದು ತಿಳಿಸಿದ್ದಾನೆ. ಆದರೂ ಪೊಲೀಸರು ಅವನನ್ನು ನಂಬುತ್ತಿರುವುದಕ್ಕೆ ಸಾಧ್ಯವಿಲ್ಲ. ಬ್ಯಾಂಕ್ ಮ್ಯಾನೇಜರ್ ಆಗಿರುವ ಹರಿಶಂಕರ್, ಸೈಬರ್ ವಂಚನೆಗಳ ಬಗ್ಗೆ ತಿಳಿದಿರುವುದರಿಂದ, ನಾವು ಅವರ ವಾದವನ್ನು ನಂಬುವುದಿಲ್ಲ. ನಾವು ಅವರ ಮೊಬೈಲ್ ಫೋನ್ ಅನ್ನು ಸಂಗ್ರಹಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Bank Manager Transferred 5.7 crore rupees to girlfriend he met on dating app in Bengaluru. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X