ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ : ಗಣವೇಷಧಾರಿಯಾಗಿ ಅಭ್ಯರ್ಥಿಯಿಂದ ಮತಯಾಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ನಗರದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡ ಅಭ್ಯರ್ಥಿಯೊಬ್ಬ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಎನ್ ಹನುಮೇಗೌಡ ಅವರು ಆರ್ ಎಸ್ ಎಸ್ ಗಣವೇಷಧಾರಿಯಾಗಿ ಮಲ್ಲೇಶ್ವರಂನಲ್ಲಿ ಮತಯಾಚನೆ ನಡೆಸಿದರು.

Bangalore North Candidate N Hanumegowda Campaigned wearing the attire of RSS worker

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಧ ಪ್ರಮುಖ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಪ್ರಾಮಾಣಿಕತೆ ಹಾಗೂ ದೇಶ ನಿಷ್ಠೆಯನ್ನು ಕಲಿಸುತ್ತದೆ. ಆರ್ ಎಸ್ ಎಸ್ ಹಿನ್ನಲೆಯ ಅನೇಕ ರಾಜಕಾರಣಿಗಳು ಇಂದು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ.

Bangalore North Candidate N Hanumegowda Campaigned wearing the attire of RSS worker

ಇಂತಹ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಜನರ ಗಮನ ಸೆಳೆಯಲು ನಾನು ಕಣಕ್ಕೆ ಇಳಿದಿದ್ದೇನೆ. ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಅನೇಕ ಹಗರಣಗಳನ್ನು ಬಯಲಿಗೆ ಎಳೆದಿದ್ದೇನೆ. ಇದೇ ಮುನ್ನಲೆಯಲ್ಲಿ ನಾನು ನನ್ನ ಹೋರಾಟವನ್ನು ಮುಂದುವರೆಸಲಿದ್ದೇನೆ ಎಂದು ಅಭ್ಯರ್ಥಿ ಹನುಮೇಗೌಡ ಹೇಳಿದರು.

Bangalore North Candidate N Hanumegowda Campaigned wearing the attire of RSS worker

ಮಲ್ಲೇಶ್ವರಂ ವೃತ್ತದಲ್ಲಿರುವ ಕುವೆಂಪು ಪ್ರತಿಮೆಗೆ ನಮಸ್ಕರಿಸಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ ಅವರು, ಮಲ್ಲೇಶ್ವರಂ ಪ್ರಮುಖ ಬೀದಿಗಳಲ್ಲಿ ಸ್ವತಂತ್ರ ಹಾಗೂ ಪ್ರಾಮಾಣಿಕ ವ್ಯಕ್ತಿಗೆ ಮತ ನೀಡುವಂತೆ ಮನವಿ ಮಾಡಿದರು.

English summary
Lok Sabha Elections 2019: Today as the last day of the public campaign a special campaign by independent candidate of Bangalore north attracted all attention. Candidate N Hanumegowda wearing a RSS Ganavesha was attractive to public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X