ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್‌ ಗೆ ಬೆಂಗಳೂರಿಗರ ಪ್ರತಿಕ್ರಿಯೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 16: ಬಜೆಟ್‌ನಲ್ಲಿ ಬೆಂಗಳೂರು ನಗರದ ಬಿಬಿಎಂಪಿ, ಜಲಮಂಡಳಿ, ನಮ್ಮ ಮೆಟ್ರೊ, ಬಿಡಿಎಗೆ ನೀಡಿರುವ ಕೊಡುಗೆ, ಜನರು ಬಜೆಟ್‌ಗೆ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ. ಅದಕ್ಕೂ ಮುನ್ನ ಬೆಂಗಳೂರಿಗೆ ಸಿಕ್ಕಿರುವುದೇನು ಎಂಬುದರ ಮುಖ್ಯಾಂಶ ಇಲ್ಲಿದೆ.

* 3,000 ಹೊಸ ಬಸ್‌. ಆ ಪೈಕಿ 1500 ಬಸ್‌ಗಳ ನೇರ ಖರೀದಿ, ಉಳಿದ 1500 ಬಸ್‌ಗಳ ಗುತ್ತಿಗೆ. 150 ಎಲೆಕ್ಟ್ರಿಕ್‌ಬಸ್‌ಗಳ ಖರೀದಿ
* ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಟಿಸಿ ಮೊಬೈಲ್‌ ಅಪ್ಲಿಕೇಷನ್ ನಲ್ಲಿ ಎಸ್‌ ಒಎಸ್‌ ಬಟನ್‌ಮತ್ತು ಟ್ರ್ಯಾಕಿಂಗ್‌ ಸೌಲಭ್ಯ
* ₹ 10 ಕೋಟಿ ವೆಚ್ಚದಲ್ಲಿ ಮಿಂಟೊ ಸೂಪರ್‌ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಅಭಿವೃದ್ಧಿ
* ₹ 10 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಕ್ಷಯರೋಗ ಆಸ್ಪತ್ರೆ ಆವರಣದಲ್ಲಿ ಚರ್ಮರೋಗ ಸಂಸ್ಥೆ ಪ್ರಾರಂಭ
* ₹ 35 ಕೋಟಿ ವೆಚ್ಚದಲ್ಲಿ ಇಂದಿರಾನಗರದಲ್ಲಿ ಕರ್ನಾಟಕ ಇನ್‌ ಸ್ಟಿಟ್ಯೂಟ್‌ ಆಫ್‌ಎಂಡೊಕ್ರೈನಾಲಜಿ ಆಸ್ಪತ್ರೆ ನಿರ್ಮಾಣ
* ಸಂಜಯಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಬೆನ್ನು ಹುರಿಗಾಯ ಹಾಗೂ ಆಘಾತ ಚಿಕಿತ್ಸೆಗೆ 10 ಹಾಸಿಗೆ ಸಾಮರ್ಥ್ಯದ ಐಸಿಯು, 20 ಹಾಸಿಗೆ ಸಾಮರ್ಥ್ಯದ ಪಾಲಿಟ್ರಾಮಾ ಕೇಂದ್ರ ಸ್ಥಾಪನೆ[ಸಾಲ ಮನ್ನಾ ಘೋಷಣೆ ನಿರೀಕ್ಷೆ ಹುಸಿ, ಮಂಡ್ಯದಲ್ಲಿ ಇಬ್ಬರು ರೈತರ ಆತ್ಮಹತ್ಯೆ!]

ಯುವಯುಗದಿಂದ ಉಪಯೋಗ

ಯುವಯುಗದಿಂದ ಉಪಯೋಗ

ವೈದ್ಯಕೀಯ ಕ್ಷೇತ್ರಕ್ಕೆ ಯಾವುದೇ ಮಹತ್ವದ ಕೊಡುಗೆ ಇಲ್ಲ
ವೈದ್ಯಕೀಯ ಕ್ಷೇತ್ರಕ್ಕೆ ಯಾವುದೇ ಮಹತ್ವದ ಕೊಡುಗೆಗಳನ್ನು ನೀಡಿಲ್ಲ. ವಿವಿಧ ಕ್ಷೇತ್ರಗಳ 1.10ಲಕ್ಷ ಮಂದಿಗೆ ತರಬೇತಿ ನೀಡುವ 'ಯುವಯುಗ' ಯೋಜನೆಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಉಪಯೋಗ ಆಗುವ ಭರವಸೆ ಇದೆ
-ಡಾ. ದಿನೇಶ್‌ಗೌಡ, ಚರ್ಮರೋಗ ತಜ್ಞ ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡಿರುವುದು ಒಳ್ಳೆಯ ನಡೆ

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡಿರುವುದು ಒಳ್ಳೆಯ ನಡೆ

ಆಹಾರ ಮತ್ತು ಪೌಷ್ಟಿಕಾಂಶ ವಿಷಯದಲ್ಲಿ ಉತ್ತಮ ಬಜೆಟ್‌. ಕ್ಷೀರಭಾಗ್ಯ ಯೋಜನೆಯನ್ನು ಐದು ದಿನಕ್ಕೆ ಏರಿಸಿದ್ದು, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡಿರುವುದು ಒಳ್ಳೆಯ ನಡೆ
-ಸ್ವಾತಿ ಮೊನಿಷ್ ಶೆಟ್ಟಿ, ಹಿರಿಯ ಆಹಾರ ತಜ್ಞೆ

ಪ್ರಗತಿಪರ ಬಜೆಟ್‌

ಪ್ರಗತಿಪರ ಬಜೆಟ್‌

ಇದೊಂದು ಉತ್ತಮ ಬಜೆಟ್‌. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಇದನ್ನೊಂದು ಪ್ರಗತಿಪರ ಬಜೆಟ್‌ ಎನ್ನಬಹುದು
-ಸಿ.ಎನ್‌. ಗೋವಿಂದ ರಾಜು, ವೈಶಾನಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ

English summary
Bangaloreans respose to Karnataka budget 2017, which was presented by CM Siddaramaiah on Wednesday, March 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X