ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಇಬ್ಬಾಗ: ಯಾವ್ಯಾವ ಅಸೆಂಬ್ಲಿ ಯಾವ ವಿವಿ ವ್ಯಾಪ್ತಿಗೆ

ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿವಿಯಾಗಿ ವಿಭಜಿಸಿ ಸರಕಾರ ಗುರುವಾರ (ಜೂ 30) ಆದೇಶ ಹೊರಡಿಸಿದೆ, ಜುಲೈ ಒಂದರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ.

|
Google Oneindia Kannada News

ಬೆಂಗಳೂರು, ಜುಲೈ 2: ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ವಿಶ್ವವಿದ್ಯಾಲಯದ ವಿಭಜಿಸುವ ಪ್ರಕ್ರಿಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ವಿಶ್ವವಿದ್ಯಾಲಯವನ್ನು ಮೂರು ವಿವಿಯಾಗಿ ವಿಭಜಿಸಿ ಗುರುವಾರ (ಜೂ 30) ಸರಕಾರ ಆದೇಶ ಹೊರಡಿಸಿದೆ, ಜುಲೈ ಒಂದರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ.

658 ಕಾಲೇಜನ್ನು ಹೊಂದಿರುವ ಏಷ್ಯಾದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ವಿವಿಯನ್ನು, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ ಮತ್ತು ಬೆಂಗಳೂರು ವಿವಿಯನ್ನಾಗಿ (ಜ್ಞಾನಭಾರತಿ)
ವಿಭಜಿಸಲಾಗಿದೆ.

ಮೂರೂ ವಿವಿಗಳ ಪ್ರಸಕ್ತ ವರ್ಷದ ಪ್ರವೇಶಾತಿ ಪ್ರಕ್ರಿಯೆಯನ್ನು ಬೆಂಗಳೂರು ವಿವಿ ನಡೆಸಲಿದೆ ಎಂದು ಸರಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿಭಜನೆಗೊಂಡ ಸೆಂಟ್ರಲ್ ಮತ್ತು ಉತ್ತರ ವಿವಿಗಳಿಗೆ ಕುಲಪತಿ ಮತ್ತು ಹೊಸ ಕಟ್ಟಡ ಮುಂತಾದ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿದೆ.

1886ರಲ್ಲಿ ಆರಂಭವಾಗಿದ್ದ ಸೆಂಟ್ರಲ್ ಕಾಲೇಜ್ ಅನ್ನು 1964ರಲ್ಲಿ ಬೆಂಗಳೂರು ವಿವಿಯಾಗಿ ಪರಿವರ್ತಿಸಲಾಗಿತ್ತು. 1973ರಲ್ಲಿ ಜ್ಞಾನಭಾರತಿ ಆವರಣದಲ್ಲಿ ವಿವಿ ಕ್ಯಾಂಪಸ್ ಆರಂಭವಾಗಿತ್ತು. ಬೆಂಗಳೂರು ವಿವಿಯ ಸಿಬ್ಬಂದಿಗಳು,ವಿದ್ಯಾರ್ಥಿಗಳು ಮತ್ತು ಇತರರಿಗೆ ವಿವಿ ವಿಭಜನೆಯ ಮಾಹಿತಿಯನ್ನು ಸರಕಾರ ನೀಡಲಿಲ್ಲ.

ಬೆಂಗಳೂರು ವಿಶ್ವವಿದ್ಯಾಲಯದ ವಿಭಜಿಸುವ ಸಲುವಾಗಿ 2009ರಲ್ಲಿ ಸಮಿತಿ ರಚಿಸಲಾಗಿತ್ತು ಮತ್ತು 2015ರಲ್ಲಿ ವಿಭಜನೆಗೆ ವಿಧಾನಮಂಡಲ ಮತ್ತು ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿತ್ತು. ಯಾವ್ಯಾವ ಅಸೆಂಬ್ಲಿ ಕ್ಷೇತ್ರ ಯಾವ ವಿಶ್ವವಿದ್ಯಾಲದ ವ್ಯಾಪ್ತಿಗೆ, ಮುಂದೆ ಓದಿ..

ಬೆಂ. ಉತ್ತರ ವಿವಿ ವ್ಯಾಪ್ತಿಗೆ -1

ಬೆಂ. ಉತ್ತರ ವಿವಿ ವ್ಯಾಪ್ತಿಗೆ -1

ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು.

ಬೆಂ. ಉತ್ತರ ವಿವಿ ವ್ಯಾಪ್ತಿಗೆ -2

ಬೆಂ. ಉತ್ತರ ವಿವಿ ವ್ಯಾಪ್ತಿಗೆ -2

ಶ್ರೀನಿವಾಸಪುರ,ಕೋಲಾರ, ಮಾಲೂರು, ಕೆ ಆರ್ ಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ ವಿ ರಾಮನ್ ನಗರ, ಮಹಾದೇವಪುರ.

ಬೆಂ. ಸೆಂಟ್ರಲ್ ವಿವಿ ವ್ಯಾಪ್ತಿಗೆ

ಬೆಂ. ಸೆಂಟ್ರಲ್ ವಿವಿ ವ್ಯಾಪ್ತಿಗೆ

ರಾಜಾಜಿನಗರ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಚಾಮರಾಜಪೇಟೆ, ಗಾಂಧಿನಗರ, ಶಿವಾಜಿನಗರ.

ಬೆಂ ವಿವಿ -1 ವ್ಯಾಪ್ತಿಗೆ

ಬೆಂ ವಿವಿ -1 ವ್ಯಾಪ್ತಿಗೆ

ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ನೆಲಮಂಗಲ, ಆನೇಕಲ್, ಬೆಂಗಳೂರು ಗ್ರಾಮಾಂತರ.

ಬೆಂ ವಿವಿ -2 ವ್ಯಾಪ್ತಿಗೆ

ಬೆಂ ವಿವಿ -2 ವ್ಯಾಪ್ತಿಗೆ

ಬೆಂ. ದಕ್ಷಿಣ, ಬೊಮ್ಮನಹಳ್ಳಿ, ವಿಜಯನಗರ, ಪದ್ಮನಾಭನಗರ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮೀಪುರ, ಗೋವಿಂದರಾಜ ನಗರ.

English summary
Bangalore University to operate as three varsities from July 1.The State government on Thursday (June 30) issued a notification stating that Bengaluru Central University and Bengaluru North University will function as separate entities from 2017-2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X