ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ಪರಿಹಾರ ನಿಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ದೇಣಿಗೆ

|
Google Oneindia Kannada News

ಬೆಂಗಳೂರು, ಮೇ 18: ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್ ದೇಣಿಗೆ ನೀಡಿದ್ದಾರೆ. ರಾಜ್ಯದಲ್ಲಿನ ಕೋವಿಡ್ 19 ಸಂಕಷ್ಟದ ಪರಿಸ್ಥಿತಿಗೆ ನೆರವು ನೀಡಿದ್ದಾರೆ.

ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್ ಅವರು ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷೇತರ ನೌಕರರ ಒಂದು ದಿನದ ಸಂಬಳದ ಒಟ್ಟು ಮೊತ್ತ ರೂ. 24,62,879 ಮತ್ತು ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್ ಅವರ ಒಂದು ತಿಂಗಳಿನ ವೈಯಕ್ತಿಕ ಸಂಬಳ ರೂ.1,64,998 ಗಳನ್ನು ನೀಡಿದ್ದಾರೆ.

ಈ 4 ರಾಜ್ಯದವರು ಕರ್ನಾಟಕಕ್ಕೆ ಎಂಟ್ರಿಯಾಗುವಂತಿಲ್ಲ!ಈ 4 ರಾಜ್ಯದವರು ಕರ್ನಾಟಕಕ್ಕೆ ಎಂಟ್ರಿಯಾಗುವಂತಿಲ್ಲ!

ಯಡಿಯೂರಪ್ಪರನ್ನು ಭೇಟಿ ಮಾಡಿದ ವಿಶ್ವವಿದ್ಯಾಲಾಯದ ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್ ಅವರು ಮುಖ್ಯಮಂತ್ರಿಯವರಿಗೆ ಮೇಲ್ಕಾಣಿಸಿದ ಮೊತ್ತಗಳ ಚೆಕ್ ಗಳನ್ನು ಹಸ್ತಾಂತರಿಸಿದರು. ಕೋವಿಡ್-19 ಕೊರೊನಾ ವೈರಸ್ ಸೋಂಕು ರೋಗದ ಹತೋಟಿಗಾಗಿ ನೆರವು ನೀಡಿದರು.

 Bangalore University Chancellor Venugopal KR Donated His Salary To Cm Relief Fund

ಇಂದಿಗೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ. ಇಂದು 99 ಪಾಸಿಟಿವ್ ಕೇಸ್‌ಗಳು ಇಂದು ಹೊಸದಾಗಿ ಪತ್ತೆದಾಗಿದೆ. 37 ಸಾವು ಸಂಬವಿಸಿದೆ.

English summary
Bangalore university chancellor Venugopal KR donated his salary to karnataka cm relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X