ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಆಟೋ ಡ್ರೈವರುಗಳಿಬ್ರು ಏನ್ಮಾಡಿದ್ದಾರೆ ನೋಡಿ

By Srinath
|
Google Oneindia Kannada News

ಬೆಂಗಳೂರು, ಮೇ 11: ನಮ್ಮ ಟ್ರಾಫಿಕ್ ಪೊಲೀಸರು ಬೆಂಗಳೂರು ಸಿಲಿಕಾನ್ ಸಿಟಿ ಖ್ಯಾತಿಗೆ ತಕ್ಕಂತೆ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಾವುದೋ ಕಾಲವಾಗಿದೆ. ಅದರಲ್ಲೂ ಫೇಸ್ ಬುಕ್ ಮೂಲಕ ಪರಿಣಾಮಕಾರಿಯಾಗಿ ಜನಮನ ತಲುಪಿದ್ದಾರೆ.

ಆದರೆ ಇತ್ತೀಚೆಗೆ ಬೆಂಗಳೂರು ನಗರ ಜನಸಮುದ್ರವಾಗಿದ್ದು, ಅಪರಾಧಗಳಿಗೆ ಪ್ರಶಸ್ತ ಸ್ಥಳವಾಗಿದೆ ಎಂಬ ಕುಖ್ಯಾತಿಯನ್ನೂ ಸಂಪಾದಿಸಿದೆ. ಎಲ್ಲಿ ನೋಡಿದರೂ ಮೋಸ, ಅನ್ಯಾಯ, ಅಕ್ರಮ, ವಂಚನೆ ಬರೀ ಇವೇ ಆಗಿದೆ. ಬೆಂಗಳೂರಿನ ಜನರಂತೂ ಇದರಿಂದ ರೋಸಿಹೋಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ಜನರ ವಿಶ್ವಾಸವನ್ನು ಗಟ್ಟಿಗೊಳಿಸುವ ಪ್ರಸಂಗಗಳೂ ಆಗಾಗ ನಡೆಯುತ್ತಿರುತ್ತವೆ.

ಅದರಲ್ಲೂ ಬೆಂಗಳೂರು ಸಂಚಾರ ವ್ಯವಸ್ಥೆಯ ಜೀವನಾಡಿಯಾದ ಆಟೋಗಳ ಬಗ್ಗೆ ಸದಾ ದೂರು ದುಃಖ ದುಮ್ಮಾನ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ಆಟೋ ಚಾಲಕರು ಆಗಾಗ ಪ್ರಾಮಾಣಿಕತೆ ಮೆರೆದು ನಮ್ಮಂಥವರು ಬೆಂಗಳೂರಿನಲ್ಲಿ ಇನ್ನೂ ಇದ್ದಾರೆ ಎಂದು ನಿರೂಪಿಸುತ್ತಿರುತ್ತಾರೆ. ತಾಜಾ ಆಗಿ ಇಬ್ಬರು ಆಟೋ ಡ್ರೈವರುಗಳು ಪ್ರಾಮಾಣಿಕತೆ ಮೆರೆದು ಜನರಿಂದ ಅದೂ ಫೇಸ್ ಬುಕ್ ಗೆಳೆಯರಿಂದ ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ. ಆ ಎರಡೂ ಪ್ರಸಂಗಗಳು ನಡೆದಿದ್ದು ಹೀಗೆ:

ಅರವಿಂದ್ ಅನ್ನುವರರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ:

ಗುರುವಾರ ರಾತ್ರಿ ವೇಳೆ ಏನಾಯಿತೆಂದರೆ ಆಟೋದಲ್ಲಿ ಪ್ರಯಾಣಿಸುವಾಗ ನಾನೊಂದು ಬ್ಯಾಗ್ ಕಳೆದುಕೊಂಡಿದ್ದೆ. ಅದರಲ್ಲಿ ಒಂದು ಮೊಬೈಲು, 55 ಸಾವಿರ ರೂ ಕ್ಯಾಷು, ಗೋಲ್ಡ್ ಚೈನ್, ಗೋಲ್ಡ್ ರಿಂಗ್, ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್ ಮತ್ತು ಇನ್ನೂ ಅನೇಕ ಮುಖ್ಯ ದಾಖಲೆಗಳು ಇದ್ದವು. ಆದರೆ ಅದು ವಾಪಸ್ ಸಿಗುತ್ತದೆ ಎಂಬ ನಂಬಿಕೆ ಕಳೆದುಕೊಂಡು ತಲೆಯ ಮೇಲೆ ಕೈಹೊತ್ತು ಕುಳಿತಿದ್ದೆ.

ಆದರೆ ಮಾರನೆಯ ದಿನ ಬೆಳಗ್ಗೆಯೇ ಸಯ್ಯದ್ ಪಾಷಾ ಎಂಬ ಮಹಾನುಭಾವ ನಗುನಗುತಾ ನನ್ನ ಕಡೆಗೆ ಬಂದಿದ್ದ. ವಿವೇಕನಗರದ ಸಯ್ಯದ್ ಪಾಷಾ ಸುಮಾರು 2 ಗಂಟೆ ಕಾಲ ಹುಡಕಾಡಿ ಕೊನೆಗೂ ನನ್ನ ಮನೆ ಪತ್ತೆ ಹಚ್ಚಿದ್ದ. ಮನೆಗೆ ಬಂದನವೇ ಪಾಷಾ ನನ್ನ ಬ್ಯಾಗನ್ನು ಮರಳಿಸಿದ. ಆತನ ಎದುರೇ ಬ್ಯಾಗನ್ನು ತೆರೆದು ನೋಡಿದಾಗ ಅದರಲ್ಲಿದ್ದ ಎಲ್ಲ ವಸ್ತಗಳೂ ಯಥಾಸ್ಥಿತಿಯಲ್ಲಿದ್ದುದ್ದು ಕಂಡು ನಾನು ಸ್ತಂಭೀಭೂತನಾದೆ. ಏನಪ್ಪಾ ಈ ಕಾಲಲ್ಲೂ ನಿನ್ನಂಥವರಿದ್ದಾರಲ್ಲಾ ಎಂದು ಆತನನ್ನೇ ಕೇಳುತ್ತಾ, ಆತನ ಕೈ ಹಿಡಿದೆ. ಯಸ್ ಬೆಂಗಳೂರಿನಲ್ಲಿ ಇನ್ನೂ ಇಂತಹ ಪ್ರಮಾಣಿಕತೆ ಮತ್ತು ಪ್ರಮಾಣಿಕ ಆಟೋ ಡ್ರೈವರುಗಳು ಇದ್ದಾರೆ. ಇಂತಹವರ ಸಂಖ್ಯೆ ಹೆಚ್ಚಾಗಲಿ.

ಆಟೋ ಡ್ರೈವರುಗಳು ಬಗೆಗಿನ ವಿಶ್ವಾಸ ಮರಳಿಸಿದ ಮೋಹನ್!

bangalore-traffic-police-facebook-2-honest-auto-driver-mohan
ನಾನು (ಫಿಡೆಲ್ ಡಿಸೋಜಾ) ಮೇ 8 ರಂದು ಆಟೋದಲ್ಲಿ ಪ್ರಯಾಣಿಸಿದ್ದೆ. ಆದರೆ ಕೆಳಗಿಳಿಯುವಾಗ ನನ್ನ ಬ್ಯಾಗ್ ಮರೆತಿದ್ದೆ. ಆದರೆ ಮೇ 10ರಂದು ನನಗೊಂದು ಆರ್ಶರ್ಯ ಕಾದಿತ್ತು. ಮೋಹನ್ ಎಂಬ ಮಹಾನುಭಾವ ನನ್ನ ಬಳಿ ಬಂದು 'ತಗೊಳ್ಳಿ ಅಂದು ನೀವು ನನ್ನ ಆಟೋದಲ್ಲಿ ಮರೆತು ಬಿಟ್ಟಿದ್ದ ಬ್ಯಾಗು' ಎಂದು ನನ್ನ ಬ್ಯಾಗನ್ನು ವಾಪಸ್ ಮಾಡಿದ್ದ. ಅದಕ್ಕಿಂತ ಹೆಚ್ಚಾಗಿ, ಬೆಂಗಳೂರಿನ ಆಟೋ ಡ್ರೈವರುಗಳು ಬಗೆಗಿನ ವಿಶ್ವಾಸವನ್ನು ಮರಳಿಸಿದ್ದ. ನಮೋ ಮೋಹನ್!
English summary
Bangalore Traffic Police face book finds 2 honest auto drivers in Mohan and Syed pasha. Arvind Boss had lost his bag in auto on Thursday night which had one mobile, 55 thousand cash, gold chain, gold ring credit cards, passport and many important papers. But the honest auto driver Syed pasha from viveknagar returned it promptly. Also another gracious auto driver Mohan K returned Fidel Dsouza a bag that he had forgotten in his auto on May 8th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X