ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಚಾ.ನಗರ ನಡುವೆ ವೋಲ್ವೋ ಬಸ್

|
Google Oneindia Kannada News

ksrtc
ಬೆಂಗಳೂರು, ಅ.9 : ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿ ಮರಳಿದ ನಂತರ ಜಿಲ್ಲೆಗೆ ಕೆಎಸ್ಆರ್ ಟಿಸಿ ಬಂಪರ್ ಕೊಡುಗೆ ನೀಡಿದೆ. ಬೆಂಗಳೂರು-ಚಾಮರಾಜನಗರ ನಡುವೆ ವೋಲ್ವೋ ಬಸ್ ಸಂಚಾರ ಪ್ರಾರಂಭಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ಚಾಮರಾಜನಗರ ನಡುವಿನ ನೇರ ವೋಲ್ವೋ ಬಸ್ ಸಂಚಾರ ಪ್ರಾರಂಭಿಸಿದೆ. ಬೆಂಗಳೂರಿನಿಂದ ಮದ್ದೂರು, ಕೊಳ್ಳೆಗಾಲ ಮೂಲಕ ಈ ಬಸ್ ಚಾಮರಾಜನಗರ ತಲುಪಲಿದೆ.

ಬೆಂಗಳೂರಿನಿಂದ ಪ್ರತಿನಿತ್ಯ ಬೆಳಗ್ಗೆ ಬಸ್ 6.30ಕ್ಕೆ ಹೊರಟು 10.30ಕ್ಕೆ ಚಾಮರಾಜನಗರ ತಲುಪಲಿದೆ. ಹಾಗೆಯೇ ಬೆಳಗ್ಗೆ 6 ಗಂಟೆಗೆ ಚಾಮರಾಜನಗರದಿಂದ ಹೊರಟು ಬೆಳಗ್ಗೆ 10ಕ್ಕೆ ಬೆಂಗಳೂರು ತಲುಪಲಿದೆ.

ಅದೇರೀತಿ ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಡುವ ಬಸ್, 9 ಗಂಟೆಗೆ ಚಾಮರಾಜನಗರ ತಲುಪಲಿದೆ. ಚಾಮರಾಜನಗರದಿಂದ ಮಧ್ಯಾಹ್ನ 1 ಗಂಟೆಗೆ ಹೊರಡುವ ಬಸ್ ಸಂಜೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರು-ಚಾಮರಾಜನಗರ ನಡುವಿನ ಸಂಚಾರಕ್ಕೆ 190 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಬಸ್ ನಲ್ಲಿ ಪ್ರಯಾಣಿಸಲು ಮುಂಗಡ ಟಿಕೆಟ್ ಕಾಯ್ದಿರಿಸಲು www.ksrtc.in ವೆಚ್ ಸೈಟ್ ಗೆ ಭೇಟಿ ನೀಡಬಹುದು ಎಂದು ಕೆಎಸ್ಆರ್ ಟಿಸಿ ತಿಳಿಸಿದೆ.

40 ತನಿಖಾ ತಂಡ : ಕೆಎಸ್ಆರ್ ಟಿಸಿ ದಸರಾ ಪ್ರಯುಕ್ತ ಹೆಚ್ಚುವರಿಯಾಗಿ ವಿವಿಧ ಜಿಲ್ಲೆಗಳಿಂದ ಮೈಸೂರಿಗೆ ಬಸ್ ಸೌಲಭ್ಯ ಒದಗಿಸಿದೆ. ಈ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ತಪಾಸಣೆಗಾಗಿ 40 ತನಿಖಾ ತಂಡಗಳನ್ನು ರಚಿಸಿದೆ.

ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು, ತುಮಕೂರು, ಹಾಸನ, ಪುತ್ತೂರು ಮತ್ತು ಮಂಗಳೂರಿನಲ್ಲಿ ತಡರಾತ್ರಿ, ಬೆಳಗಿನ ಜಾವ ಹಾಗೂ ಅಂತರರಾಜ್ಯ ಬಸ್‌ಗಳಲ್ಲಿ ತನಿಖಾ ತಂಡಗಳು ತಪಾಸಣೆ ನಡೆಸಲಿವೆ. ಟಿಕೆಟ್ ರಹಿತರು ಸಿಕ್ಕಿಬಿದ್ದರೆ ಪ್ರಯಾಣ ದರದ 10 ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

English summary
Karnataka State Road Transport Corporation (KSRTC) begins Volvo bus service for Bangalore to Chamarajanagar. 190 ticket fare fixed for traveling. for advanced booking passengers can visit www.ksrtc.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X