ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಷ್ಟಕಷ್ಟ: ಟೆಕ್ಕಿಗಳ ಸಂಬಳ 15 ವರ್ಷಗಳಲ್ಲಿ ಕನಿಷ್ಠ ಕನಿಷ್ಠ

By Srinath
|
Google Oneindia Kannada News

ಬೆಂಗಳೂರು, ನ.27: ಅತ್ಯಾಕರ್ಷಕ ಸಂಬಳಗಳು, ಕ್ಷಿಪ್ರ ಭಡ್ತಿಗಳು, ವಿದೇಶಕ್ಕೆ ಹಾರುವ ಭಾಗ್ಯ, ವೃತ್ತಿಜೀನವದಲ್ಲಿ ಎತ್ತರೆತ್ತರಕ್ಕೆ ಜಿಗಿಯುವ ಅದ್ಭುತ ಅವಕಾಶ... ಯುವ ಇಂಜಿನಿಯರುಗಳನ್ನು ಮರುಳು ಮಾಡಲು ಇಷ್ಟು ಸಾಕಿತ್ತು. ಜಾಗತಿಕ ಮಟ್ಟದಲ್ಲಿಯೂ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ಭಾರತ ಹಿತ್ತಲು ಮನೆಯಾಯಿತು. ಆದರೆ ಎಷ್ಟು ಕಾಲ?

ಆ ಸಂತಸದ ಕ್ಷಣಗಳು ಇತ್ತೀಚೆಗೆ ಕರಗುತ್ತಿರುವಂತೆ ತೋರುತ್ತಿದೆ. ಜಾಗತಿಕ ಅರ್ಥವ್ಯವಸ್ಥೆ ಇಳಿಜಾರುತ್ತಾ ಸಾಗಿದಂತೆ ಎಚ್ಚರಿಕೆಯ ಮೋಡ್ ಗೆ ಶಿಫ್ಟ್ ಆದ ಭಾರತೀಯ ಐಟಿ ಕಂಪನಿಗಳು ನಿಜಕ್ಕೂ ಎಚ್ಚೆತ್ತುಕೊಂಡವು. ಜಾಗತಿಕ ಅರ್ಥವ್ಯವಸ್ಥೆ ಒಂದಷ್ಟು ಸುಧಾರಿಸತೊಡಗಿದರೂ ಭಾರತೀಯ ಐಟಿ ಕಂಪನಿಗಳು ಇನ್ನೂ ಎಚ್ಚರಿಕೆಯ ಮೋಡ್ ನಲ್ಲಿಯೇ ಇವೆ. ಮೊದಲಿನ ತರಹ ತನ್ನ ಉದ್ಯೋಗಿಗಳನ್ನು ಪ್ಯಾಂಪರ್ ಮಾಡುತ್ತಿಲ್ಲ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)

ಅದರಲ್ಲೂ ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳುವಾಗಲೇ ಐಟಿ ಕಂಪನಿಗಳು ಭಾರಿ ಚೌಕಾಸಿಗೆ ಇಳಿಸಿವೆ. ಬಿಗಿಪಟ್ಟನ್ನು ಸಾಧಿಸಿರುವ ಕಂಪನಿಗಳು ಹೊಸ ಟೆಕ್ಕಿಗಳಿಗೆ ಚೌಕಾಶಿಗೆ ಅವಕಾಶವನ್ನೇ ನೀಡುತ್ತಿಲ್ಲ. ಕಳೆದ 15 ವರ್ಷಗಳಿಂದ ಗರಿಷ್ಠ ಪ್ರಮಾಣದಲ್ಲಿ ಸಂಬಳಗಳನ್ನು ಕೊಡಲು ನಾಮುಂದು ತಾಮುಂದು ಎಂದು ತುದಿಗಾಲಲ್ಲಿ ನಿಂತಿದ್ದ ಕಂಪನಿಗಳು ಇಂದು 'ನಾವು ಕೊಡೋದೆ ಇಷ್ಟು. ಬೇಕಾದ್ರೆ ಬಂದು ಕಂಪ್ನಿ ಸೇರಿಕೊಳ್ಳಿ, ಇಲ್ಲಾಂದ್ರೆ ಬಿಡಿ' ಎಂದು ಧಮ್ಕಿ ಮೋಡ್ ಗೆ ಶಿಫ್ಟ್ ಆಗಿವೆ. ಈ ಸಂಬಂಧ ವಿಶ್ವ ಹೂಡಿಕೆ ಬ್ಯಾಂಕ್ Credit Suisse ನಡೆಸಿರುವ ಸಮೀಕ್ಷಾ ವರದಿಯ ವಿವರ ಹೀಗಿದೆ:

Tata Consultancy Services (TCS):

Tata Consultancy Services (TCS):

ದೇಶದ ಅಗ್ರಮಾನ್ಯ ಟೆಕ್ ಕಂಪನಿಯನ್ನೇ ಮೊದಲು ಸ್ಟಡಿ ಮಾಡುವುದಾದರೆ ವಿದೇಶಗಳಲ್ಲಿರುವ ಕಂಪನಿಯ ಟೆಕ್ಕಿಗಳು ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದ ಹೈಕ್ ಪಡೆದಿರಲಿಲ್ಲ. 2013-24ರಲ್ಲಿ ಟಿಸಿಎಸ್ ಟೆಕ್ಕಿಗಳು ಪಡೆದಿರುವ ಹೈಕು ಸರಾಸರಿ ಶೇ. 7 ರಷ್ಟು ಮಾತ್ರ. ಕಂಪನಿಯಲ್ಲಿ ಒಟ್ಟು 3 ಲಕ್ಷ ಉದ್ಯೋಗಿಗಳು ಇದ್ದಾರೆ.

1996-97ರಲ್ಲಿ ಹೊಸ ಇಂಜಿನಿಯರುಗಳಿಗೆ 1.45 ಲಕ್ಷ

1996-97ರಲ್ಲಿ ಹೊಸ ಇಂಜಿನಿಯರುಗಳಿಗೆ 1.45 ಲಕ್ಷ

ಇನ್ನು Entry-levelನಲ್ಲಿಯೇ ಅಂದರೆ ಟೆಕ್ಕಿಗಳನ್ನು ಕಂಪನಿಗೆ ಸೇರಿಸಿಕೊಳ್ಳುವಾಗಲೇ TCS ನೀಡಿರುವ ಸಂಬಳಗಳು ಅತ್ಯಂತ ಕಡಿಮೆಯದ್ದಾಗಿವೆ. 15 ವರ್ಷಗಳಲ್ಲೇ ಇದು ಕನಿಷ್ಠತಮವಾಗಿದೆ.

1996-97ರಲ್ಲಿ TCS, ಹೊಸ ಇಂಜಿನಿಯರುಗಳಿಗೆ 1.45 ಲಕ್ಷ ರೂ. ನೀಡಿತ್ತು. ಈ ಬಾರಿಯೂ 3.16 ಲಕ್ಷ ರೂ. ನೀಡಿದೆ. ಆದರೆ ಹಣದುಬ್ಬರಗಳನ್ನೆಲ್ಲಾ ತುಲನೆ ಮಾಡಿ ಅಂದಿನ ಮೌಲ್ಯದಲ್ಲಿ ಲೆಕ್ಕ ಹಾಕಿದರೆ ಅದು 1.15 ಲಕ್ಷ ರೂ. ಗೆ ಸಮವಾಗುತ್ತದೆ.

ಇದಕ್ಕೆ ಕಾರಣಗಳಾದರೂ ಏನು?

ಇದಕ್ಕೆ ಕಾರಣಗಳಾದರೂ ಏನು?

* 2006-07ರಲ್ಲಿದ್ದ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ 6 ಲಕ್ಷ ಈಗ, 2013-14ರಲ್ಲಿ 15 ಲಕ್ಷ ಇಂಜಿನಿಯರಿಂಗ್ ಕಾಲೇಜುಗಳಿವೆ.
* ಭಾರತದ ಅರ್ಥ ವ್ಯವಸ್ಥೆ 2013-14ನೇ ಸಾಲಿನಿಂದ ಇನ್ನು 10 ವರ್ಷ ಕಾಲ ತೆವಳುತ್ತಾ ಸಾಗುತ್ತದೆ. ಇದರಿಂದ ಐಟಿ ಇಂಜಿನಿಯರಿಂಗ್ ಕಾಲೇಜುಗಳ ಕಡೆಗಿರುವ ಆಕರ್ಷಣೆ ಸಹಜವಾಗಿಯೇ ಕುಗ್ಗಲಿದೆ.
* ಇತ್ತೀಚಿನ ವಲಸೆ ಮತ್ತು ವೀಸಾ ವಿವಾದಗಳನ್ನು ಗಮನದಲ್ಲಿಟ್ಟುಕೊಂಡಿರುವ IT ಕಂಪನಿಗಳು ಗ್ರಾಹಕ ರಾಷ್ಟ್ರಗಳಲ್ಲೇ ಇರುವ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವ ಬಗ್ಗೆ ಆಲೋಚಿಸುವಂತಾಗಿದೆ. ಹಾಗಾಗಿ ಭಾರತೀಯ ಪ್ರತಿಭೆಗಳಿಗೆ ಮಣೆ ಹಾಕುವುದಕ್ಕೆ ಹಿಂಜರಿಯುತ್ತಿವೆ.

software development ಸಾಮಾನ್ಯ ಪದವೀಧರರಿಗೂ ಸಾಧ್ಯ

software development ಸಾಮಾನ್ಯ ಪದವೀಧರರಿಗೂ ಸಾಧ್ಯ

* ವಹಿವಾಟು ಸ್ವರೂಪದಲ್ಲಿಯೂ ಬದಲಾವಣೆಗಳು ನಡೆಯುತ್ತಿವೆ. ಒಂದು ಕಡೆಯಿಂದ automation ಅಪ್ಪಿಕೊಳ್ಳುತ್ತಾ ಮತ್ತೊಂದೆಡೆ ಇಂಜಿನಿಯರಿಂಗ್ ವಿಷಯವನ್ನು ಬಿಟ್ಟು ಬೇರೆ ವಿಷಯಗಳಲ್ಲಿ ಪದವಿ ಪಡೆದವರಿಗೆ (non-engineering graduate) IT ಕಂಪನಿಗಳಲ್ಲಿ ಉದ್ಯೋಗ ಭಾಗ್ಯ ಪ್ರಾಪ್ತಿಯಾಗುತ್ತಿದೆ. ಕೆಲವು ನಿರ್ದಿಷ್ಟ ವಿಭಾಗಗಳಲ್ಲಿ software development ಪ್ರಕ್ರಿಯೆಯು ಮೊದಲಿನಷ್ಟು ಕಗ್ಗಂಟಾಗಿರದೆ ಸಾಮಾನ್ಯ ಪದವೀಧರರೂ ಅದನ್ನು ಸುಲಲಿತವಾಗಿ ಪರಿಹರಿಸುವಂತಾಗಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ.
* ಇದೆಲ್ಲರ ಪರಿಣಾಮ/ ಪ್ರಭಾವ ಸಾಫ್ಟ್ ವೇರ್ ಉದ್ಯೋಗಕ್ಕಾಗಿ ಎಡತಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸುಸ್ಥಿರ ಬೆಳವಣಿಗೆ ಕಾಣದ ಹೊರತು ಈ ಪರಿಸ್ಥಿತಿ ಇನ್ನೂ ಶೋಚನೀಯವಾಗಲಿದೆ ಎಂದು Credit Suisse ಎಚ್ಚರಿಸಿದೆ.

English summary
Bangalore techies real salaries lowest in 15 years- Credit Suisse. The lure of attractive salaries, quick promotions, foreign posting and job mobility attracted lakhs of young students to India's top outsourcers, making India the back office of the global IT requirements. The global investment bank conducted a detailed research on employment and salary patterns of TCS employees and concluded that the average wage hike (7 per cent) for offshore employees in 2013-14 was at multi-year low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X