ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇವಿಎಂ ಬಗ್ಗೆ ಅನುಮಾನ: ನಾಯಕರಿಗೆ ತೇಜಸ್ವಿ ಸೂರ್ಯ ಸವಾಲು

|
Google Oneindia Kannada News

ಬೆಂಗಳೂರು, ಮೇ 21: ಎಕ್ಸಿಟ್ ಪೋಲ್ ಸಮೀಕ್ಷೆ ಹೊರಬೀಳುತ್ತಿದ್ದಂತೆಯೇ ವಿರೋಧಪಕ್ಷಗಳ ನಾಯಕರು ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸತೊಡಗಿದ್ದಾರೆ. ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ಪರವಾಗಿ ಸಮೀಕ್ಷೆ ನೀಡುವ ಮೂಲಕ ಮೂಡ್ ಸೃಷ್ಟಿಸಲಾಗುತ್ತದೆ. ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಗೆ ಮತ ಚಲಾವಣೆಯಾಗುವಂತೆ ಮಾಡಿರುವುದರಿಂದ ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಜವಾಗುವಂತಹ ಫಲಿತಾಂಶ ಸಿಗುತ್ತದೆ ಎಂದು ವಿವಿಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ವಿಪಕ್ಷಗಳ ನಾಯಕರ ಆರೋಪಕ್ಕೆ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ವಿರೋಧಪಕ್ಷಗಳ ನಾಯಕರಿಗೆ ಒಂದು ಸವಾಲನ್ನು ಒಡ್ಡಿದ್ದಾರೆ. ನಿಜಕ್ಕೂ ಇವಿಎಂಗಳ ಮೇಲೆ ನಿಮಗೆ ಅನುಮಾನವಿದ್ದರೆ, ಇದೇ ಇವಿಎಂಗಳಿಂದ ಚುನಾಯಿತರಾಗಿರುವ ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ.

'ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಎಲ್ಲರಿಗೂ ನನ್ನ ಸವಾಲು...

ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಇವಿಎಂಗಳ ಬಗ್ಗೆ ನಿಮ್ಮ ಪ್ರಶ್ನೆಯನ್ನು ಎತ್ತುವ ಮುನ್ನ, ಈಗ ನೀವು ಪ್ರಶ್ನಿಸುತ್ತಿರುವ ಇದೇ ಇವಿಎಂಗಳಿಂದಲೇ ಫಲಿತಾಂಶ ಘೋಷಣೆಯಾಗಿದ್ದರಿಂದ ನಿಮ್ಮ ಪ್ರಸ್ತುತದ ಸ್ಥಾನಗಳಿಗೆ ರಾಜೀನಾಮೆ ನೀಡುವ ನೈತಿಕ ಮತ್ತು ಬೌದ್ಧಿಕ ಧೈರ್ಯವನ್ನು ಪ್ರದರ್ಶಿಸುತ್ತೀರಾ?' ಎಂದು ತೇಜಸ್ವಿ ಸೂರ್ಯ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ವಿವಿಪ್ಯಾಟ್ ಹೆಚ್ಚಳದಿಂದ ಲೋಕಸಭೆ ಚುನಾವಣೆ ಫಲಿತಾಂಶ ವಿಳಂಬವಿವಿಪ್ಯಾಟ್ ಹೆಚ್ಚಳದಿಂದ ಲೋಕಸಭೆ ಚುನಾವಣೆ ಫಲಿತಾಂಶ ವಿಳಂಬ

ಇದೇ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿಂದಿನ ಮಿತ್ರ ಪಕ್ಷವಾದ ಟಿಡಿಪಿ ಮುಖಂಡ ಎನ್. ಚಂದ್ರಬಾಬು ನಾಯ್ಡು ಅವರ ಆರು ವರ್ಷಗಳ ಹಳೆಯ ಟ್ವೀಟನ್ನು ರೀಟ್ವೀಟ್ ಮಾಡಿದ್ದಾರೆ.

bangalore south tejeasvi sury challenge who questions evm credibility

ಒಂದು ವರ್ಷ ಇವಿಎಂ ಕೊಡಿ, ದೋಷ ಕಂಡು ಹಿಡಿತೀವಿ: ಪಿತ್ರೋಡಾ ಒಂದು ವರ್ಷ ಇವಿಎಂ ಕೊಡಿ, ದೋಷ ಕಂಡು ಹಿಡಿತೀವಿ: ಪಿತ್ರೋಡಾ

ಆಗ ಕಾಂಗ್ರೆಸ್ ವಿರುದ್ಧ ಸಿಡಿದಿದ್ದ ಚಂದ್ರಬಾಬು ನಾಯ್ಡು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರು. 2013ರ ಡಿಸೆಂಬರ್‌ನಲ್ಲಿ ಅವರು ಎಕ್ಸಿಟ್ ಪೋಲ್‌ಗಳ ಕುರಿತಾಗಿ ಟ್ವೀಟ್ ಮಾಡಿದ್ದರು. 'ಎಕ್ಸಿಟ್ ಪೋಲ್ ದೇಶದ ಮೂಡ್‌ಅನ್ನು ಸೂಚಿಸುತ್ತವೆ. ಕಾಂಗ್ರೆಸ್‌ಗೆ ಭಾರತದ ಸಂದೇಶವೇನೆಂದರೆ 'ಭಾರತ ಬಿಟ್ಟು ತೊಲಗು'! ಎಂದು' ಎಂಬುದಾಗಿ ನಾಯ್ಡು ಟ್ವೀಟ್ ಮಾಡಿದ್ದರು. ಈ ಹಳೆಯ ಟ್ವೀಟ್ ಈಗ ಎಲ್ಲೆಡೆ ಹರಿದಾಡುತ್ತಿದೆ.

English summary
Bangalore South Lok Sabha constituency BJP candidate Tejasvi Surya made a challenge to the opposition parties who question the credibility of EVM's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X