ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ ಸೂರ್ಯ ಪರ ಪ್ರಚಾರಕ್ಕಿಳಿದ ತೇಜಸ್ವಿನಿ ಅನಂತ್ ಕುಮಾರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಪಕ್ಷದ ನಾಯಕರು ಯಾವುದೇ ನಿರ್ಧಾರ ತಗೆದುಕೊಂಡರೂ ಯೋಚಿಸಿಯೇ ನಿರ್ಧರಿಸಿರುತ್ತಾರೆ. ಅವರ ನಿರ್ಧಾರ ತಪ್ಪಾಗುವುದಿಲ್ಲ. ಎಲ್ಲಕ್ಕಿಂತಾ ದೇಶ ಮೊದಲು ಎಂದು ಡಾ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜಯನಗರದಲ್ಲಿ ಜನ ಮನ ಸಂಸ್ಥೆ ಆಯೋಜಿಸಿದ್ದ ಆಯೋಜಿಸಿದ್ದ ದೇಶ ಮೊದಲು - ಮೋದಿ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ರಾಜಕೀಯ ನಾಯಕರು ತನ್ನ ಬಗ್ಗೆ ಆಡಿರುವ ಮಾತುಗಳ ಬಗ್ಗೆ ನನಗೆ ತಿಳಿದಿಲ್ಲ. ಅವರ ಮಾತುಗಳಿಗೆ ನಾನು ಮಾತನಾಡೋಕೆ ಸಾಧ್ಯವಿಲ್ಲ ಹಾಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?

ಮುಂದಿನ ದಿನಗಳಲ್ಲಿ ನನಗೆ ನೀಡಬೇಕಾದ ಸ್ಥಾನಮಾನಗಳ ಬಗ್ಗೆ ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೆ ನನ್ನದು ಕೇವಲ ಕೆಲಸ ಮಾಡುವುದು ಎಂದರು.

ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ವ್ಯಕ್ತಿಚಿತ್ರ | ಆಸ್ತಿ ವಿವರ

ಕಾರ್ಯಕ್ರಮದಲ್ಲಿ ಡಾ ವಿಜಯಲಕ್ಷ್ಮಿ ದೇಶಮಾನೆ, ಬಿ ಕೆ ಸುಮಿತ್ರಾ, ಡಾ ಜಯಂತ ಮನೋಹರ್ ಭಾಗವಹಿಸಿದ್ದರು.

ದೇಶ ಮೊದಲು - ಮೋದಿ ಮತ್ತೊಮ್ಮೆ ಕಾರ್ಯಕ್ರಮ

ದೇಶ ಮೊದಲು - ಮೋದಿ ಮತ್ತೊಮ್ಮೆ ಕಾರ್ಯಕ್ರಮ

ದೇಶ ಮೊದಲು - ಮೋದಿ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ದೇಶದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ದೇಶ ಸುಭದ್ರ ಹಾಗೂ ಸುರಕ್ಷಿತವಾದ ಭಾವನೆಯನ್ನು ಹೊಂದುವಂತಹ ವಾತಾವರಣವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರಧಾನಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.

ಬಿಎಲ್ ಸಂತೋಷ್ ನೀಡಿದ್ದ ಪ್ರತಿಕ್ರಿಯೆ ಏನು?

ಬಿಎಲ್ ಸಂತೋಷ್ ನೀಡಿದ್ದ ಪ್ರತಿಕ್ರಿಯೆ ಏನು?

ಜೀನ್ಸ್, ಡಿಎನ್‌ಎ ಇರುವ ಮಾತ್ರಕ್ಕೆ ಪಕ್ಷದಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ. ಪಕ್ಷದ ಸದಸ್ಯತ್ವಕ್ಕೆ ಬೆಲೆ ಬೇಕಲ್ಲವೇ? ಡಿಎನ್‌ಎ ಆಧಾರದಲ್ಲಿ ಟಿಕೆಟ್ ಕೊಡಿ ಎಂದರೆ ಹೇಗೆ. ಗೌರವ ಎನ್ನುವುದು ಪ್ರತಿಭೆ, ಟಿಕೆಟ್‌ಗೆ ಸಮ ಅಲ್ಲ. ಅನಂತ್ ಕುಮಾರ್ ಅವರಿಗೆ ಸಲ್ಲುವ ಶ್ರೇಯಸ್ಸನ್ನು ಅವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಬಿಎಲ್ ಸಂತೋಷ್ ಹೇಳಿದ್ದರು. ಹೀಗಾಗಿ, ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ತೇಜಸ್ವಿನಿ ಅವರು ತೇಜಸ್ವಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.

ತೇಜಸ್ವಿನಿ ಟ್ವೀಟ್ ಸಂಚಲನ

ತೇಜಸ್ವಿನಿ ಟ್ವೀಟ್ ಸಂಚಲನ

"ಮೋಡ ಮುರಿದರೆ ಮಳೆ ಬರುತ್ತದೆ. ಮಣ್ಣು ಮುರಿದರೆ ಹೊಲವಾಗುತ್ತದೆ. ಬೆಳೆ ಮುರಿದರೆ ಇಳುವರಿ ಬರುತ್ತದೆ. ಬೀಜ ಮುರಿದರೆ ಗಿಡವಾಗುತ್ತದೆ. ನಮಗೆ ನೋವಾಗುವ ಸನ್ನಿವೇಶ ಎದುರಾದರೆ ಮುಂದೆಲ್ಲೋ ದೇವರು ನಮ್ಮ ಪ್ರಗತಿಗಾಗಿ ಅವಕಾಶ ನೀಡಿದ್ದಾನೆ ಎಂದರ್ಥ. ಶಾಂತಿಯಿಂದ ಬದುಕುವುದನ್ನು ಕಲಿಯೋಣ" ಎಂದು ತೇಜಸ್ವಿನಿ ಟ್ವೀಟ್ ಮಾಡಿದ್ದರು. ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿತ್ತು.

ಯುವಕರಿಗೆ ಅವಕಾಶ ನೀಡುವ ಉದ್ದೇಶ

ಯುವಕರಿಗೆ ಅವಕಾಶ ನೀಡುವ ಉದ್ದೇಶ

ಯುವ ನಾಯಕರನ್ನು ಬೆಳೆಸುವ ಉದ್ದೇಶ ಹೊತ್ತ ಬಿಜೆಪಿ, ತೇಜಸ್ವಿ ಸೂರ್ಯ ಅವರೇ ಬೆಂಗಳೂರು ದಕ್ಷಿಣಕ್ಕೆ ಸೂಕ್ತ ಅಭ್ಯರ್ಥಿ ಎಂದು ಆರಿಸಿತು. ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದರೆ, ಅವರನ್ನು ಸುಲಭವಾಗಿ ಸೋಲಿಸುವುದಕ್ಕೆ ಸಾಧ್ಯ ಎಂದು ಊಹಿಸಿದ ಬಿಜೆಪಿ ತೇಜಸ್ವಿ ಸೂರ್ಯ ಅವರಂಥ ಯುವ ನಾಯಕರನ್ನು ಬೆಳೆಸಲು ಇದೊಂದು ಉತ್ತಮ ಅವಕಾಶ ಎಂದು ಯೋಚಿಸಿ, ಅವರನ್ನು ನಾಯಕರನ್ನಾಗಿ ಘೋಷಿಸಿದಂತಿದೆ.

English summary
Today Adamya Chetana Chairperson Dr Tejaswini Ananth Kumar campaigned in favor of Bangalore South BJP Candidate Tejasvi Surya, in few parks of Jayanagar, Lalbagh & Vidyaranyapura wards. Later she participated in the event Nation First - Modi Again organized by Jana Mana Samsthe at Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X