ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದಲ್ಲಿ ವಿದ್ಯಾರ್ಥಿಗಳ ಜೊತೆ ಬಿಕೆ ಹರಿ ಪ್ರಸಾದ್ ಸಂವಾದ

|
Google Oneindia Kannada News

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ, ಪಾದಯಾತ್ರೆ, ರೋಡ್ ಶೋ ಮೂಲಕ ಮತದಾರರ ಗಮನ ಸೆಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಜಯನಗರದ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಡನೆ ಹರಿಪ್ರಸಾದ್ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಬಿಡಿಎ ಚೇರ್ಮನ್ ಎಸ್ ಟಿ ಸೋಮಶೇಖರ್ ಹಾಗೂ ಮತ್ತಿತರ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಂವಾದದಲ್ಲಿ ಬಿ ಕೆ ಹರಿಪ್ರಸಾದ್ ಮಾತನಾಡಿ, ನಾನಿಲ್ಲಿ ಬಂದಿರುವುದು ನಿಮ್ಮಲ್ಲಿ ಮನವಿ ಮಾಡುವುದಕ್ಕೆ. ನಿಮ್ಮಲ್ಲಿ ಬಹಳಷ್ಟು ಜನರು ಮೊದಲ ಬಾರಿ ವೋಟ್ ಮಾಡಲಿದ್ದೀರಿ. ಏಪ್ರಿಲ್ 18 ರಂದು ಮತ ಚಲಾಯಿಸುವುದು ಬಹಳ ಮುಖ್ಯ. ವಿದ್ಯಾರ್ಥಿಗಳ ಶಕ್ತಿ ಬಹಳಷ್ಟು ಜನರಿಗೆ ಗೊತ್ತಿಲ್ಲ ಎನ್ನಿಸುತ್ತದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ವಿದ್ಯಾರ್ಥಿಗಳ ಪ್ರತಿಭಟನೆಗಳಿಂದ ಸರಕಾರಗಳೇ ಬದಲಾಗುತ್ತಿದ್ದವು.

'65 ವರ್ಷ ಸುಭದ್ರ ಆಡಳಿತ ನೀಡಿದ ಕಾಂಗ್ರೆಸ್ಸಿಗೆ ಮತ ನೀಡಿ' '65 ವರ್ಷ ಸುಭದ್ರ ಆಡಳಿತ ನೀಡಿದ ಕಾಂಗ್ರೆಸ್ಸಿಗೆ ಮತ ನೀಡಿ'

ಆದರೀಗ ನಮಗ್ಯಾಕೆ ನಾವು ಬದುಕಿದ್ರೆ ಸಾಕು ಎನ್ನುವ ಮನೋಭಾವ ಬಂದುಬಿಟ್ಟಿದೆ. ಮೋದಿಯವರಿಗೆ ಈಗ 65 ವರ್ಷ, ಈಗ ಅವರು ಎಲ್ಲೇ ಹೋದರು ಯುವಕರು ಮೋದಿ ಎಂದು ಕೂಗುತ್ತಾರೆ. ಈ 5 ವರ್ಷದಲ್ಲಿ ಮೋದಿಯವರು ಯುವಕರಿಗೆ, ವಿದ್ಯಾರ್ಥಿಗಳಿಗೆ ಏನು ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಲಿ, ಅವರು ಆ ರೀತಿ ಮಾಡಿದರೆ ನಾನು ರಾಜಕೀಯವನ್ನೇ ಬಿಡುತ್ತೇನೆ ಎಂದು ಸವಾಲ್ ಹಾಕಿದರು.

ಉದ್ಯೋಗ ಮಾಡುತ್ತೀನಿ ಅಂತ ಹಾಗಂದ್ರೆ ಪಕೋಡ ಮಾರೋದ?

ಉದ್ಯೋಗ ಮಾಡುತ್ತೀನಿ ಅಂತ ಹಾಗಂದ್ರೆ ಪಕೋಡ ಮಾರೋದ?

ನೀವು ಬದುಕುತ್ತಿರುವುದು ಪ್ರಪಂಚದ ಒಂದು ಅಧ್ಭುತ ನಗರದಲ್ಲಿ, ಸಿಲಿಕಾನ್ ಸಿಟಿ ಇಂದು ತನ್ನದೇ ಆದ ಗೌರವ ಉಳಿಸಿಕೊಂಡು ಬಂದಿದೆ. ಇದೆಲ್ಲಾ ಆಗಿದ್ದು ಕಳೆದ ಐದು ವರ್ಷಗಳಲ್ಲಿ ಅಲ್ಲ. ಮೋದಿ ಹೇಳಿದ್ರೂ, ಉದ್ಯೋಗ ಸೃಷ್ಟಿ ಮಾಡುತ್ತೀನಿ ಅಂತ ಹಾಗಂದ್ರೆ ಪಕೋಡ ಮಾರೋದ? ಗುಜರಾತಿನವರಿಗೆ ಏನಾದ್ರೂ ಮಾಡು ದುಡ್ಡು ಮಾಡುವುದೊಂದೇ ಮುಖ್ಯ ಎನ್ನುವಂತಾಗಿದೆ.

ಮಹಾನ್ ಸುಳ್ಳುಗಾರ ಮೋದಿ, ಸುಳ್ಳು ಹೇಳುವುದೇ ಸಾಧನೆ : ಸಿದ್ದರಾಮಯ್ಯಮಹಾನ್ ಸುಳ್ಳುಗಾರ ಮೋದಿ, ಸುಳ್ಳು ಹೇಳುವುದೇ ಸಾಧನೆ : ಸಿದ್ದರಾಮಯ್ಯ

ಈ ಬಗ್ಗೆ ಪ್ರಶ್ನೆ ಕೇಳಿದ್ರೆ ಮೋದಿ ಹೇಳ್ತಾರೆ ಕೆಲಸ ಸಿಗದಿದ್ರೂ ಪರವಾಗಿಲ್ಲ, ಪಕೋಡಾ ಮಾರಿ ದುಡಿತಾರೆ ಅಂತಾ. ಕೂಲಿ ಕೆಲಸ ಮಾಡಿ ಓದಿಸಿದ ತಂದೆ ತಾಯಿ ಮಕ್ಕಳು ಒಳ್ಳೆ ಹಂತದಲ್ಲಿ ಬರಲಿ ಅಂದ್ರೆ ಇವರು ಪಕೋಡಾ ಮಾರಲು ಹೇಳ್ತಾರೆ?

ಪ್ರಜಾಪ್ರಭುತ್ವ ಹಾಗೂ ಮೀಸಲಾತಿಗೆ ವಿರೋಧಿ ಮೋದಿ

ಪ್ರಜಾಪ್ರಭುತ್ವ ಹಾಗೂ ಮೀಸಲಾತಿಗೆ ವಿರೋಧಿ ಮೋದಿ

ಪಕೋಡಾ ಮಾರುವುದು ತಪ್ಪು ಅಂತಾ ಹೇಳಲ್ಲಾ. ಆದರೆ ಅದರಿಂದ ಎಷ್ಟು ದಿನ ಜೀವನ ನಡೆಸಬಹುದು. ಆ ಹುದ್ದೆಯಲ್ಲಿ ಏನೆಲ್ಲಾ ಅನುಕೂಲಗಳಿವೆ ನೋಡ್ಬೇಕು. ಮಾತು ಬರುತ್ತೆ ಅಂತ ಏನ್ ಬೇಕಾದ್ರೂ ಮಾತಾಡೋದಲ್ಲ. ನಮ್ಮ ಹಿರಿಯರು ಹೇಳಿದ್ದಾರೆ ಹಳೆ ಬೇರು ಹೊಸ ಚಿಗುರು ಅಂತಾ. ಅನುಭವ ನಮಗೆ ಮಾರ್ಕೇಟ್ ನಲ್ಲಿ ಸಿಗೋದಲ್ಲ. ಮೋದಿಯವರು ಪ್ರಜಾಪ್ರಭುತ್ವ ಹಾಗೂ ಮೀಸಲಾತಿಗೆ ವಿರೋಧವಾಗಿ ಮಾತಾಡ್ತಾರೆ.

'ಬಿಜೆಪಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುತ್ತಿದೆ''ಬಿಜೆಪಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುತ್ತಿದೆ'

ಸಂವಿಧಾನ ಅನ್ನೋದು ಯೂನಿವರ್ಸಿಟಿಯಲ್ಲಿ ಬರೆದ ಪುಸ್ತಕವಲ್ಲ

ಸಂವಿಧಾನ ಅನ್ನೋದು ಯೂನಿವರ್ಸಿಟಿಯಲ್ಲಿ ಬರೆದ ಪುಸ್ತಕವಲ್ಲ

ಸಂವಿಧಾನ ಅನ್ನೋದು ಯೂನಿವರ್ಸಿಟಿಯಲ್ಲಿ ಬರೆದ ಪುಸ್ತಕವಲ್ಲ. ಅದು ನಮ್ಮ ದೇಶದ ಪ್ರಜೆಗಳಿಗಾಗಿ ಬರೆದು ಬುಕ್. ನಮಗೆ ಸರ್ವಧರ್ಮ ಸಮಭಾವ ಎಂಬ ತತ್ವದ ಅವಶ್ಯಕತೆ ಇದೆ. ಒಂದೋ ಗಾಂಧಿಯನ್ನು ಫಾಲೋ ಮಾಡ್ಬೇಕು, ಇಲ್ಲಾ ನಾತೂರಾಂ ಗೂಡ್ಸೆಯನ್ನು ಸಪೋರ್ಟ್ ಮಾಡ್ಬೇಕು. ಯೋಚಿಸಿ ನಿಮಗೆ ಯಾರು ಬೇಕು ಅನ್ನುವುದನ್ನ. ಸಂವಿಧಾನ ಉಳಿಯಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದರು ಮನವಿ ಮಾಡಿದರು.

ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ,

ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ,

ನಮ್ಮ ದೇಶದಲ್ಲಿ 35 ವರ್ಷದೊಳಗಿನವರು ಶೇಕಡಾ 65 ರಷ್ಟು ಜನರು ಇದ್ದಾರೆ. ಮತದಾನ ಮಾಡುವುದು ಕೇವಲ ನಮ್ಮ ಹಕ್ಕಲ್ಲ, ನಮ್ಮ ಕರ್ತವ್ಯ. ಜಾತಿಭೇದವಿಲ್ಲದೆ ಎಲ್ಲರನ್ನೂ ಒಗ್ಗಟ್ಟಾಗಿ ಅಭಿವೃದ್ದಿಯತ್ತ ಕೊಂಡೊಯ್ಯುವುದು ಕಾಂಗ್ರೆಸ್ ಪಕ್ಷ. ಈ ಚುನಾವಣೆ ಕೇವಲ ಎರಡು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ. ಇದು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಸ್ಪರ್ಧೆ. ಬಿಜೆಪಿಯವರು ಕೊಟ್ಟ ಆಶ್ವಾಸನೆಗಳನ್ನು ನೆರವೇರಿಸಿದ್ದಾರ ಅನ್ನುವುದನ್ನು ನಾವು ಚಿಂತಿಸಬೇಕು.

ನುಡಿದಂತೆ ನಡೆಯುವ ಸರಕಾರ ನಮ್ಮದಾಗಿದೆ

ನುಡಿದಂತೆ ನಡೆಯುವ ಸರಕಾರ ನಮ್ಮದಾಗಿದೆ

ನುಡಿದಂತೆ ನಡೆಯುವ ಸರಕಾರ ನಮ್ಮದಾಗಿದೆ. ಸಿದ್ದರಾಮಯ್ಯ ಕೂಡಾ ನುಡಿದಂತೆ ನಡೆದಿದ್ರೂ, ಮೈತ್ರಿ ಸರಕಾರ ಕೂಡಾ ಅದೇ ಹಾದಿಯಲ್ಲಿದೆ. ನಮಗೆ ತಲೆಯಲ್ಲಿ ವಿಷ ಬಿತ್ತುವ ಸರಕಾರ ಬೇಕಾ ಚಿಂತಿಸಿ ಎಂದರು. ನಿಮ್ಮಲ್ಲಿ ಹಲವರು ಮೊದಲ ಬಾರಿಗೆ ಮತದಾನ ಮಾಡುವವರಿದ್ದೀರಿ, ನಿಮ್ಮಿಂದ ಈ ದೇಶಕ್ಕೆ ಆಗಬೇಕಾದದ್ದು ಬಹಳಷ್ಟು ಇದೆ.

ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮೋದಿಗಾಗಿ ವೋಟ್ ಕೇಳುತ್ತಾರೆ. ಸಂವಿಧಾನ ಸುಡಲು ಹೇಳುತ್ತಾರೆ, ಮಹಿಳಾ ಮೀಸಲತಿ ಬೇಡ ಅಂತಾರೆ ಇಂತವರು ನಮಗೆ ಬೇಕಾ? ಇದು ನಮ್ಮ ಭವಿಷ್ಯದ ಪ್ರಶ್ನೆ ಹಾಗಾಗಿ ನಿಮ್ಮ ಬೆಂಬಲವನ್ನು ಬಿ ಕೆ ಹರಿಪ್ರಸಾದ್ ಗೆ ನೀಡಿ ಎಂದು ಮನವಿ ಮಾಡಿದರು.

English summary
Bangalore South Loksabha Constituency Congress Candidate Shri B.K Hariprasad Interacted with the Students & Faculty Of Bharat Education Society. Jayanagar MLA Sowmya Reddy, BDA Chairman S.T Somshekhar and others were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X