ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

OMG! ಟಿಕೆಟ್ ಸಿಕ್ಕಿದ್ದಕ್ಕೆ ತೇಜಸ್ವಿ ಸೂರ್ಯ ಭಾವುಕ ಟ್ವೀಟ್

|
Google Oneindia Kannada News

"OMG OMG!!! ನನಗೆ ಇದನ್ನು ನಂಬೋಕೆ ಸಾಧ್ಯವೇ ಆಗುತ್ತಿಲ್ಲ. 28 ವರ್ಷ ವಯಸ್ಸಿನ ಯುವಕನ ಮೇಲೆ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಮತ್ತು ರಾಜಕೀಯ ಪಕ್ಷ ನಂಬಿಕೆ ಇಟ್ಟಿದ್ದಕ್ಕೆ ನಾನು ಋಣಿ" ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೋಮವಾರ ತಡರಾತ್ರಿಯವರೆಗೂ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭಯೆಲ್ಲಿ ತೇಜಸ್ವಿ ಸೂರ್ಯ ಅವರ ಹೆಸರನ್ನು ಅಂತಿಮಗೊಳಿಸಲಾಯ್ತು.

ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ

ಈ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಡೆದ ಬೆಳವಣಿಗೆಯಲ್ಲು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಯ್ತು.

ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ!

ದೇಬವರೇ, ನನಗೆ ಇದನ್ನು ನಂಬುವುದಕ್ಕೇ ಆಗುತ್ತಿಲ್ಲ. ಈ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಮತ್ತು ಪಕ್ಷ 28 ವರ್ಷ ವಯಸ್ಸಿನ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ದಕ್ಷಿಣದಂಥ ಘನವೆತ್ತ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ, ಇದು ನವಭಾರತದಲ್ಲಿ ಮಾತ್ರ ಸಾಧ್ಯ- ತೇಜಸ್ವಿ ಸೂರ್ಯ

ಮೋದಿಯವರಿಗೆ ನಾನು ಮಾತುಕೊಡುತ್ತೇನೆ

ನನಗೆ ಇಂಥ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಮದ್ರ ಮೋದಿ ಅವರಿಗೆ ನಾನು ಋಣಿಯಾಗಿರುತ್ತೇನೆ. ನಾನು ನಿಮಗೆ ಇನ್ನೂ ಹೆಚ್ಚು ಧನ್ಯವಾದ ಹೇಳುವುದಕ್ಕೆ ಸಾಧ್ಯವಿಲ್ಲ ಮೋದೀಜಿ. ನಾನು ನಿಮಗೆ ಒಂದು ಮಾತು ಕೊಡುತ್ತೇನೆ, ನಾನು ನನ್ನ ತಾಯ್ನೆಲಕ್ಕಾಗಿ ಕೊನೆ ಉಸಿರಿರುವರೆಗೂ ಹೋರಾಡುತ್ತೇನೆ. ಈ ಋಣ ತೀರಿಸುವುದಕ್ಕೆ ನನಗಿರುವ ದಾರಿ ಅದೊಂದೇ- ತೇಜಸ್ವಿ ಸೂರ್ಯ

ಬೆಂಗಳೂರು ಗ್ರಾಮಾಂತರದಿಂದ ಅಶ್ವತ್ಥ್ ನಾರಾಯಣ್ ಕಣಕ್ಕೆಬೆಂಗಳೂರು ಗ್ರಾಮಾಂತರದಿಂದ ಅಶ್ವತ್ಥ್ ನಾರಾಯಣ್ ಕಣಕ್ಕೆ

ಅನಂತ್ ಕುಮಾರ್ ಅವರಿಗೂ ಧನ್ಯವಾದ

ಅನಂತ್ ಕುಮಾರ್ ಜೀ. ಅವರು ಸಾರ್ವಜನಿಕ ಬದುಕಿನಲ್ಲಿ ನನ್ನ ಮೊದಲ ಗುರು. ನಾನು ಹೈಸ್ಕೂಲ್ ದಿನದಲ್ಲಿದ್ದಾಗಿನಿಂದಲೂ ಅವರನ್ನು ನೋಡುತ್ತಿದ್ದೇನೆ. ಅವರಿಂದ ನಾನು ಸಾಕಷ್ಟನ್ನು ಕಲಿತಿದ್ದೇನೆ. ಅವರು ಕರ್ನಾಟಕದ ಒಬ್ಬ ಮಹಾನ್ ನಾಯಕ. ನಾನು ಎಂದಿಗೂ ಅವರಿಗೆ ಋಣಿಯಾಗಿರುತ್ತೇನೆ.

ಪಕ್ಷ ಏನೇ ನಿರ್ಧಾರ ಕೈಗೊಳ್ಳಲಿ, ದೇಶಕ್ಕಾಗಿ ದುಡಿಯೋಣ : ತೇಜಸ್ವಿನಿಪಕ್ಷ ಏನೇ ನಿರ್ಧಾರ ಕೈಗೊಳ್ಳಲಿ, ದೇಶಕ್ಕಾಗಿ ದುಡಿಯೋಣ : ತೇಜಸ್ವಿನಿ

ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಋಣಿ

ನಾನು ಹೈಸ್ಕೂಲಿನಲ್ಲಿದ್ದಾಗಿನಿಂದಲೂ ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡವರು ಅನಂತ್ ಕುಮಾರ್ ಜೀ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಮೇಡಂ. ಅನಂತ್ ಕುಮಾರ್ ಅವರೊಂದಿಗೆ ಜನ ಚೇತನ ಯಾತ್ರೆಗೆ ಹೋಗುತ್ತೇನೆಂದು ಹಠ ಮಾಡುತ್ತಿದ್ದಾಗ ಅನಂತ್ ಕುಮಾರ್ ಅವರ ಮನವೊಲಿಸಿ, ನನ್ನನ್ನೂ ಅವರೊಂದಿಗೆ ಕರೆದೊಯ್ದಿದ್ದು ತೇಜಸ್ವಿನಿ ಮೇಂಡ ಅವರು. ಇಂದು ನಾನೇನಾಗಿದ್ದೀನೋ ಅದಕ್ಕೆ ನೀವೇ ಕಾರಣ -ತೇಜಸ್ವಿ ಸೂರ್ಯ

ಆರೆಸ್ಸೆಸ್ ಗೆ ನಮನ

ನಾನು ಆರೆಸ್ಸೆಸ್ ಮತ್ತು ಅದರ ನಿಸ್ವಾರ್ಥ ನಾಯಕರಿಗೆ ಧನ್ಯವಾದ ಅರ್ಪಿಸುವುದನ್ನು ಮರೆಯುವುದಿಲ್ಲ. ನನ್ನನ್ನು ಆರಿಸಿ, ಆಶೀರ್ವದಿಸಿದ ಅವರಿಗೆ ನಮನ. ನನ್ನ ತಪ್ಪುಗಳನ್ನು ತಿದ್ದಿ ಎಲ್ಲ ರೀತಿಯಿಂದಲೂ ನನ್ನನ್ನು ಬೆಂಬಲಿಸಿದ್ದೀರಿ. ಮುಕುಂದ್ ಜೀ ಮತ್ತು ಸಂತೋಷ್ ಜೀ ಅವರಂತ ಮನುಷ್ಯರು ನೈಜ ಬದುಕಿನಲ್ಲೂ ಇರಲು ಸಾಧ್ಯ ಎಂದರೆ ನಂಬುವುದು ಕಷ್ಟ. ನಾನು ನಿಮ್ಮಂತೆ ಆಗಲು ಬಯಸುತ್ತೇನೆ- ತೇಜಸ್ವಿ ಸೂರ್ಯ

ಅಪ್ಪ-ಅಮ್ಮರಿಗೆ ಕೃತಜ್ಞ

ಅಪ್ಪ ಮತ್ತು ಅಮ್ಮ, ನಾನು ನೀವಿಲ್ಲದೆ ಇಲ್ಲ. ಅಪ್ಪಾ, ನೀವು ನನ್ನ ಹೀರೋ. ನೀವು ನೋವು ಉಂಡು ನನ್ನನ್ನು ಇಂದು ಬೆಳೆಸಿದ್ದೀರಿ. ನಿಮ್ಮ ಪ್ರಾಮಾಣಿಕತೆ ನನ್ನ ಬದುಕಿನ ಪಾಠ. ಅಮ್ಮ, ಎಲ್ಲದಕ್ಕೂ ಧನ್ಯವಾದ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮಗೆ ನನ್ನಿಂದ ಹೆಮ್ಮೆ ಆಗಿದೆ ಎಂದು ಭಾವಿಸುತ್ತೇನೆ- ತೇಜಸ್ವಿ ಸೂರ್ಯ

English summary
BJP's Tejaswi Surya expresses his feelings for selecting him as BJP candidate for Bangalore South constituency. He thanks PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X