ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಷಕರಿಗೆ ಸುಳ್ಳು ಮಾಹಿತಿ ನೀಡಿದ ವಿಬ್‌ಗಯಾರ್‌ ಶಾಲೆ

By Ashwath
|
Google Oneindia Kannada News

ಬೆಂಗಳೂರು, ಜು.23: ಒಂದನೇ ತರಗತಿ ವಿದ್ಯಾರ್ಥಿ‌ನಿ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಬ್‌ಗಯಾರ್‌ ಶಾಲೆಯ ಒಂದೊಂದೆ ಅಕ್ರಮ ಇದೀಗ ಬೆಳಕಿಗೆ ಬರತೊಡಗಿದೆ.

ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಐಸಿಎಸ್‌ಇ) ಶಿಕ್ಷಣ ಕ್ರಮದಲ್ಲಿ ಪಾಠ ಮಾಡಲು ವಿಬ್‌ಗಯಾರ್‌ ಸಂಸ್ಥೆಗೆ ಕಳೆದ ವರ್ಷ ಪ್ರಮಾಣ ಪತ್ರ ಸಿಕ್ಕಿದ್ದು, ಏಳು ವರ್ಷದಿಂದ ಪೋಷಕರಿಗೆ ಸುಳ್ಳು ಐಸಿಎಸ್‌ಇ ಮಾನ್ಯತೆಯ ಪ್ರಮಾಣಪತ್ರ ತೋರಿಸಿ ವಿದ್ಯಾರ್ಥಿ‌ಗಳನ್ನು ಶಾಲೆಗೆ ದಾಖಲು ಮಾಡಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

vibgyar
ವಿಬ್‌ಗಯಾರ್‌ ಸಂಸ್ಥೆ 2007 ಜೂನ್‌ನಿಂದ ಕಾರ್ಯಾರಂಭಗೊಂಡಿದ್ದು ಈ ಸಂದರ್ಭದಲ್ಲಿ ಪೋಷಕರಿಗೆ ಈ ಶಾಲೆಯಲ್ಲಿ ಐಸಿಎಸ್‌ಇ ಶಿಕ್ಷಣ ಕ್ರಮದಲ್ಲಿ ಬೋಧಿಸಲಾಗುತ್ತದೆ ಎಂದು ದಾಖಲೆ ತೋರಿಸಿದ್ದರು. ಈ ದಾಖಲೆ ನಂಬಿದ ಪೋಷಕರು ವಿಬ್‌ಗಯಾರ್‌ ಶಾಲೆಗೆ ಮಕ್ಕಳನ್ನು ಸೇರಿಸಿದ್ದಾರೆ.

ಆದರೆ ಐಸಿಎಸ್‌ಇ ಪಠ್ಯದಲ್ಲಿ ಪಾಠಮಾಡಲು ಕೌನ್ಸಿಲ್‌ ಫಾರ್‌‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೆಷನ್‌‌(ಸಿಐಎಸ್‌‌ಸಿಇ) ನೀಡುವ ಪ್ರಮಾಣ ಪತ್ರ ಅಗತ್ಯವಾಗಿದ್ದು, ಈ ಪ್ರಮಾಣ ಪತ್ರವನ್ನು ಸಿಐಎಸ್‌‌ಸಿಇ ನೀಡಿದ ಮುಂದಿನ ವರ್ಷದಿಂದ ಪ್ರಮಾಣ ಪತ್ರ ಪಡೆದ ಶಾಲೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಬೋಧನೆ ಮಾಡಬೇಕಾಗುತ್ತದೆ.

ಆದರೆ ವಿಬ್‌ಗಯಾರ್‌ ಶಾಲೆಗೆ ಅಕ್ಟೋಬರ್‌ 9, 2013ರಂದು ಸಿಐಎಸ್‌‌ಸಿಇ ಪ್ರಮಾಣ ಪತ್ರ ನೀಡಿದೆ. ಈ ಪ್ರಮಾಣ ಪತ್ರ ದೊರೆತ ಒಂದು ವರ್ಷದ ಬಳಿಕ, ಅಂದರೆ 2014ರಲ್ಲಿ ಐಸಿಎಸ್‌ಇ ಪಠ್ಯಕ್ರಮದಲ್ಲಿ ಶಿಕ್ಷಣ ಆರಂಭಿಸಿಬೇಕಿದ್ದ ವಿಬ್‌ಗಯಾರ್‌ 2007ರಿಂದಲೇ ಸುಳ್ಳು ದಾಖಲೆ ಹೇಳಿ ಪೋಷಕರಿಗೆ ಮೋಸ ಮಾಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ವಿಬ್‌ಗಯಾರ್‌ ಸಿಐಸಿಎಸ್‌ಇ ನಿಮಯವನ್ನು ಉಲ್ಲಂಘಿಸಿದೆ. ಸಿಐಸಿಎಸ್‌ಇ ಪ್ರಮಾಣ ಪತ್ರವಿಲ್ಲದೇ ಯಾವುದೇ ಶಾಲೆ ಐಸ್‌ಎಸ್‌ಇ ಪಠ್ಯ ಕ್ರಮದಲ್ಲಿ ಬೋಧಿಸುವ ಹಾಗಿಲ್ಲ ಎಂದು ಸಿಐಸಿಎಸ್‌ಇ ಮುಖ್ಯಸ್ಥ, ಡಾ. ಜೋಸ್‌ ಐಕರ ಪ್ರತಿಕ್ರಿಯೆ ನೀಡಿದ್ದಾರೆ.[ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]

ಸಿಐಎಸ್‌‌ಸಿಇ ನಿಮಮವನ್ನು ಉಲ್ಲಂಘಿಸಿದ ಜೊತೆಗೆ ವಿಬ್‌ಗಯಾರ್‌ ಶಾಲೆ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮವನ್ನು ಸಹ ಉಲ್ಲಂಘಿಸಿದೆ.

2006-07ರಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಶಾಲೆಯಲ್ಲಿ ಕನ್ನಡ ಮಾಧ್ಯಮಲ್ಲಿ ಶಿಕ್ಷಣ ನೀಡುತ್ತೇವೆ ಎಂದು ಬಿಇಒರಿಂದ ಅನುಮತಿ ಪಡೆದಿದ್ದ ಆಡಳಿತ ಮಂಡಳಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡದೇ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ.

ಕರ್ನಾಟಕ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಶಾಲೆ ನೋಂದಣಿಯಾಗಿದ್ದರೂ ಕನ್ನಡವನ್ನು ಮಾಧ್ಯಮ ಬಿಡಿ ಕನ್ನಡ ಭಾಷೆಯನ್ನು ಬೋಧನೆಯಲ್ಲಿ ಸೇರಿಸದೇ ನಿಯಮವನ್ನು ಉಲ್ಲಂಘನೆ ಮಾಡಿರುವ ಅಂಶವು ಇದೀಗ ಬೆಳಕಿಗೆ ಬಂದಿದೆ.

ಶಾಲೆಯ ಶೈಕ್ಷಣಿಕ ವಿಭಾಗದ ನಿರ್ದೇಶಕಿ ಕವಿತಾ ಸಾಹಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಲೆ 2007ರಿಂದ ಬೆಂಗಳೂರಿನಲ್ಲಿ ಕಾರ್ಯಾರಂಭಗೊಂಡಿದ್ದು, ಮೂರು ಅಥವಾ ನಾಲ್ಕು ವರ್ಷದ ಹಿಂದೆ ಐಸಿಎಸ್‌ಇ ಸದಸ್ಯತ್ವವನ್ನು ಪಡೆದಿದ್ದೇವೆ ಎಂದು ಹೇಳಿದ್ದಾರೆ.

English summary
Even as parents of children studying at the east Bangalore school where 6-year-old Rhea (name changed) was sexually assaulted on July 2 want it to reopen so that their kids can continue with their studies, a TOI investigation shows that the school has committed several violations since its inception.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X