ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ದಾಖಲೆ ಸೃಷ್ಟಿಮಾಡುತ್ತಿದ್ದ ಆಸಾಮಿಯ ಬಂಧನ

By Vanitha
|
Google Oneindia Kannada News

ಬೆಂಗಳೂರು, ಜುಲೈ,23 : ಹೊಸ ಉದ್ಯೋಗ ಪಡೆಯುವವರಿಗೆ ಅಸ್ತಿತ್ವದಲ್ಲಿರುವ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ನೀಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮುಖ್ಯ ಅರೋಪಿಯಾದ ಲಕ್ಷ್ಮೀ ಕೃಷ್ಣ ಎಂಬಾತ ನಗರದ ಮುನ್ನೆಕೊಳಾಲ್ ನಿವಾಸಿಯಾಗಿದ್ದು, ಮೂಲತಃ ಆಂಧ್ರಪ್ರದೇಶದ ಗುಂಟೂರಿನವನು. ಈತ ವಿವಿಧ ದಾಖಲೆಗಳಾದ ನೇಮಕಾತಿ, ರಿಲಿವಿಂಗ್, ಅನುಭವ, ವೇತನ ಪ್ರಮಾಣ ಪತ್ರಗಳನ್ನು ಹೊಸಬರಿಗೆ ವಿತರಿಸಿ ಅವರಿಂದ 20,000 ಹಣ ಪಡೆಯುತ್ತಿದ್ದನು.[ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ವಿವರಗಳು]

Bangalore police the arrested fake documents criminal

ವಿವಿಧ ಹುದ್ದೆಗಳಾದ ಸಿಸ್ಟಮ್ ಅನಾಲಿಸ್ಟ್, ಸಾಫ್ಟ್ ವೇರ್ ಟ್ರೈನಿ, ಅಸೋಸಿಯೇಟ್ ಟ್ರೈನಿ, ಸಾಫ್ಟ್ ವೇರ್ ಇಂಜಿನಿಯರ್, ಅಸೋಸಿಯೇಟ್ ಸಾಫ್ಟ್‌ವೇರ್ ಇಮಜಿನಿಯರ್ ಮುಂತಾದ ಹುದ್ದೆಗಳಿಗೆ ಸಂಬಂಧಿಸಿ ನಕಲಿ ಪ್ರಮಾಣ ಪತ್ರಗಳನ್ನು ಸರಷ್ಟಿಸಿಕೊಳ್ಳತ್ತಿದ್ದ ಈತ ಲೆಟರ್ ಹೆಡ್‌ಗಳಲ್ಲಿ ನಿರುದ್ಯೋಗಿಗಳಿಗೆ ಕೆಲಸ ಪಡೆಯಲು ಅವಶ್ಯಕವಾದ ದಾಖಲಾತಿಗಳು ಎಂದು ಈತ ನಂಬಿಸುತ್ತಿದ್ದನು.

ಮಾರುತಿ ನೆಟ್ಸ್ ಸೆಂಟರ್ ಮೇಲೆ ಕಾರ್ಯಚರಣೆ ನಡೆಸಿದ ಪೊಲೀಸರು ಲಕ್ಷ್ಮೀ ಕೃಷ್ಣನನ್ನು ಹಾಗೂ ಅಕ್ರಮಕ್ಕೆ ಸಂಬಂಧಿಸಿದ ನಕಲಿ ದಾಖಲೆ ಪತ್ರ ಹಾಗೂ ಮೊಬೈಲ್, ದ್ವಿ ಚಕ್ರ ವಾಹನ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಈತನಿಗೆ ಸಹಕರಿಸಿದ ಆರೋಪಿ ಕಿರಣ್ ಅರವಟಿ ತಲೆಮರೆಸಿಕೊಂಡಿದ್ದು ಇಬ್ಬರ ವಿರುದ್ಧ ಎಚ್.ಎ.ಎಲ್ ಹಾಗೂ ಬಿಟಿಎಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Bangalore CCB police have arrested fake documents crimial on tuesday. He always created many fake documents like appointment,experience,relieve letters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X