ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರ ಬೀದಿಯಲ್ಲೂ ಸಿಗುತ್ತೆ ಬ್ರೆಜಿಲ್ ಕರೆನ್ಸಿ

|
Google Oneindia Kannada News

ಬೆಂಗಳೂರು, ಅ, 14 : ಬೆಂಗಳೂರಿನಲ್ಲೂ ಬ್ರೆಜಿಲ್‌ ಕರೆನ್ಸಿ ಸಿಗುತ್ತದೆ. ರಿಯಾಲ್ (ಬ್ರೆಜಿಲ್ ದೇಶದ ಕರೆನ್ಸಿ) ತರಲು ಯಾವ ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಖೋಟಾ ನೋಟುಗಳ ಹಾವಳಿ ಜತೆಗೆ ಈಗೀಗ ವಿದೇಶಿ ಕರೆನ್ಸಿ ಮಾರಾಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹಮೀದ್ ಷಾ ಕಾಂಪ್ಲೆಕ್ಸ್ ಬಳಿ ಬ್ರೆಜಿಲ್ ದೇಶದ ರಿಯಾಲ್ ನೋಟುಗಳನ್ನು ಕಡಿಮೆ ಬೆಲೆಗೆ ಮಾರಲು ಯತ್ನಿಸುತ್ತಿದ್ದ 5 ಜನ ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದ್ದು ಅವರಿಂದ 63.5 ಲಕ್ಷ ರೂ. ಮೌಲ್ಯದ ರಿಯಾಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.[ಅತ್ಯಾಚಾರ ಮಾಡಲು ಹೋದವನ 'ಅದನ್ನೇ' ಕತ್ತರಿಸಿದರು]

brizal

ಒಂದು ರಿಯಾಲ್ 25 ರೂ. ಮೌಲ್ಯ ಹೊಂದಿದೆ. ಆದರೆ ಆರೋಪಿಗಳು ರಿಯಾಲ್ ನ್ನು 15 ರೂ. ಗೆ ಮಾರಾಟ ಮಾಡುತ್ತಿದ್ದರು. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹಣ ಯಾವ ಮೂಲದಿಂದ ಬಂದಿದೆ? ಅಸಲಿಯೋ? ನಕಲಿಯೋ? ಎಂಬ ಸಂಗತಿಗಳು ತನಿಖೆಯ ನಂತರವೇ ತಿಳಿಯಲಿದೆ.

ಕಾರ್ಯಾಚರಣೆಯಲ್ಲಿ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿದ್ದರಾಮಯ್ಯ, ರವಿ ಪಾಟೀಲ್, ಜಿ.ಎಂ.ನವೀನ್ ಸಿಬ್ಬಂದಿ ಗಂಗಾಧರ್, ಬಸವರಾಜ್, ಚಂದ್ರಶೇಖರ್, ಚನ್ನಪ್ಪ ಭಾಗವಹಿಸಿದ್ದರು.

English summary
Bangalore: Police arrested 5 peoples who are trying to sell Brazil currency 'Real' near Halasur gate limits Hamid Shaw complex and seized 63.5 lack worth ruppes of Brazil currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X