ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎಂಜಿನಿಯರ್, ಮೆಡಿಕಲ್ ವಿದ್ಯಾರ್ಥಿಗಳೇ ಟಾರ್ಗೆಟ್!

|
Google Oneindia Kannada News

ಬೆಂಗಳೂರು, ಡಿಸೆಂಬರ್.26: ಸಿಲಿಕಾನ್ ಸಿಟಿಗೆ ಮಕ್ಕಳನ್ನು ಓದಲು ಕಳಿಸುವ ಪೋಷಕರೇ ಎಚ್ಚರ ಎಚ್ಚರ. ಏಕೆಂದರೆ ಇಲ್ಲಿ ಓದುವ ವಿದ್ಯಾರ್ಥಿಗಳ ದಾರಿ ತಪ್ಪಿಸುವುದಕ್ಕಾಗಿ ಕೆಲವರು ಸಂಚು ರೂಪಿಸಿಕೊಂಡು ಕುಳಿತಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ವಿದ್ಯಾರ್ಥಿಗಳಿಗೆ ಅಡ್ಡದಾರಿ ತೋರುತ್ತಿದ್ದ ಭೂಪನನ್ನು ಪೊಲೀಸರು ಹಿಡಿದು ಮುದ್ದೆ ಮುರಿಯಲು ಬಿಟ್ಟಿದ್ದಾರೆ. ಹಗಲು-ರಾತ್ರಿ ಖದೀಮನ ಮೇಲೆ ಕಣ್ಣಿಟ್ಟಿದ್ದ ಖಾಕಿ ಪಡೆ ಇಂದು ಐನಾತಿ ಆಸಾಮಿಯನ್ನು ಬಲೆಗೆ ಕೆಡವಿದೆ.

ವಿಧಾನಸೌಧದ ಸಿಬ್ಬಂದಿಗೆ ಗ್ರಹಣದ ಭೀತಿವಿಧಾನಸೌಧದ ಸಿಬ್ಬಂದಿಗೆ ಗ್ರಹಣದ ಭೀತಿ

ಹೌದು, ಅಷ್ಟಕ್ಕೂ ಬಂಧಿತ ಆರೋಪಿ ಮಾಡುತ್ತಿದ್ದ ಕಾರ್ಯ ಎಂಥದ್ದು ಗೊತ್ತೇ. ಬೇರೆ ರಾಜ್ಯಗಳಿಂದ ಅಥವಾ ಬೇರೆ ಊರುಗಳಿಂದ ಬೆಂಗಳೂರಿಗೆ ಓದಲು ಆಗಮಿಸಿದ ವಿದ್ಯಾರ್ಥಿಗಳೇ ಈ ಆರೋಪಿಯ ಟಾರ್ಗೆಟ್ ಆಗಿದ್ದರು. ರಾಜಸ್ತಾನದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ತನ್ನ ಜೇಬು ತುಂಬಿಸಿಕೊಳ್ಳಲು ತಪ್ಪು ದಾರಿಯಲ್ಲಿ ತುಳಿದಿದ್ದನು.

 Bangalore Police Arrest The Man Who Supply The Drugs For Students

ಕೆಪಿ ಅಗ್ರಹಾರ ಪೊಲೀಸರ ಕೈಗೆ ಸಿಕ್ಕಬಿದ್ದ ಆರೋಪಿ:

ಉತ್ತರ ಭಾರತದಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು ಬೆಂಗಳೂರಿನ ಇಂಜಿನಿಯರ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಹಲವು ವರ್ಷಗಳಿಂದಲೂ ರಾಜಸ್ತಾನ ಮೂಲದ ಆರೋಪಿ ಬಿವರಿ ಲಾಲ್ ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು.

ಗುರುವಾರ ಕಾರ್ಯಾಚರಣೆಗೆ ಇಳಿದ ಕೆಪಿ ಅಗ್ರಹಾರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 15 ಲಕ್ಷ ರುಪಾಯಿ ಮೌಲ್ಯದ ಅಫೀಲು ವಶಕ್ಕೆ ಪಡೆದುಕೊಳಅಳಲಾಗಿದೆ.

English summary
Bangalore K P Agrahara Police Arrest The Man Who Supply The Drugs For Medical Students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X