ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉದ್ಯಮಿ ದೋಚಿದ್ದ 6 ಜನರ ಬಂಧನ

|
Google Oneindia Kannada News

ಬೆಂಗಳೂರು, ಸೆ. 12 : ಉದ್ಯಮಿಯಿಂದ 5.5 ಲಕ್ಷ ರೂ. ಅಪಹರಿಸಿ ಪರಾರಿಯಾಗಿದ್ದ 6 ಜನ ಆರೋಪಿಗಳನ್ನು ಕೋರಮಂಗಲ ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ 2 ನೇ ಹಂತದ ಸೋಮೇಶ್ವರ ನಗರದ ಉಮಾಕಾಂತ(29), ಬನ್ನೇರುಘಟ್ಟ ರಸ್ತೆ ವಿವರ್ಸ್ ಕಾಲನಿ ನಿವಾಸಿ ಶಬರಿ ಗಿರೀಶ (22), ಆನೆಕಲ್‌ ತಾಲೂಕು ಕಲ್ಕೆರೆ ವಾಸಿ ಶಿವಕುಮಾರ(20), ಆನೇಪಾಳ್ಯದ ಅರುಣ್ ಕುಮಾರ (22), ಅನಿಲ್ ಕುಮಾರ್ (22) ಮತ್ತು ಆಸ್ಟಿನ್ ಟೌನ್‌ನ ಪ್ರವೀಣ್ ಕುಮಾರ್ (22) ಬಂಧಿತ ಆರೋಪಿಗಳು.(ಚಾರ್ಟರ್ಡ್ ಅಕೌಂಟೆಂಟ್ ಮನೆಯಲ್ಲಿ ಭಾರೀ ದರೋಡೆ)

 robbery

ಆರೋಪಿಗಳನ್ನು ಬಂಧಿಸಿ 4.05 ಲಕ್ಷ ರೂ. ನಗದು ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಮೇಲೆ ಈ ಹಿಂದೆಯೂ ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವಿರ
ಆಗಸ್ಟ್ 1 ರಂದು ಕೋರಮಂಗಲ ಒಂದನೇ ಬ್ಲಾಕ್ ನಲ್ಲಿ ವೋಡಾ ಪೊನ್‌ ಶೋ ರೂಮ್‌ನಿಂತ ತಂದ 5.5 ಲಕ್ಷ ರೂ.ಗಳನ್ನು ಉದ್ಯಮಿ ಉಮೇಶ್‌ ತೆಗೆದುಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಬೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು.

ಉಪ ಪೊಲೀಸ್‌ ಕಮೀಷನರ್ ಡಾ. ರೋಹಿಣಿ ಮಾರ್ಗದರ್ಶನದಲ್ಲಿ ಮಡಿವಾಳ ಉಪ ವಿಭಾಗದ ಸಹಾಯಕ ಕಮೀಷನರ್ ಬಿ.ಎಸ್. ಶಾಂತಕುಮಾರ್, ಕೋರಮಂಗಲ ಇನ್ಸ್‌ಪೆಕ್ಟರ್ ಡಿ.ಎಂ.ಪ್ರಶಾಂತ ಬಾಬು, ಆಡುಗೋಡಿ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮೀ ನಾರಾಯಣ, ಪಿಎಸ್‌ಐ ಭರತ್‌, ನಟರಾಜ್, ರಾಮರೆಡ್ಡಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಮನೆ ದೋಚಿದ್ದವನ ಬಂಧನ
ಯಜಮಾನ ವಿದೇಶಕ್ಕೆ ತೆರಳಿದ್ದ ಸಂದರ್ಭ ಮನೆ ದರೋಡೆ ಮಾಡಿ ಪರಾರಿಯಾಗಿದ್ದ ಒರಿಸ್ಸಾ ಮೂಲದ ಮನೆಕೆಲಸದಾಳು ಕರುಣಾಕರ್ ಬೆಹರಾ(35) ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿ ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲದ ಉದ್ಯಮಿಯೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಕರುಣಾಕರ್ ಯಜನಮಾಜ ಹೊರದೇಶಕ್ಕೆ ತರಳಿದ್ದಾಗ ಮನೆಯಲ್ಲಿದ್ದ ವಸ್ತುಗಳನ್ನು ದೋಚಿದ್ದ. ಈ ಬಗ್ಗೆ ಉದ್ಯಮಿ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

English summary
Bangalore police arrested 6 robbers in a robbery case in the Koramangala station limits. Who cheated a industrialist near koramangala on september first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X