• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲಯಾಳಂ ವಂಚಕ ನಿರ್ಮಾಪಕ ಪರಪ್ಪನ ಜೈಲಿಗೆ

By Srinath
|

ಬೆಂಗಳೂರು, ಮೇ 8: ತಾನು ಬಾಡಿಗೆಗೆ ಪಡೆದಿರುವ ಮನೆಗಳನ್ನೇ ಬೇರೊಬ್ಬರಿಗೆ ಮತ್ತೆ ಭೋಗ್ಯಕ್ಕೆ ನೀಡಿ (sub leasing) ಹಣ ಮಾಡುವ ಕಾರ್ಯತಂತ್ರ ಅಳವಡಿಸಿಕೊಂಡಿದ್ದ ವಂಚಕನೊಬ್ಬನ್ನು ಜೀವನ್‌ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ಆರೋಪಿಯು ಮಲಯಾಳಂ ಸಿನಿ ನಿರ್ಮಾಪಕ ಸಹ. ಆತನ ನಾಮಧೇಯ ಸದಾನಂದ ರಂಗೋರಾತ್ (Sadananda Rangorath)‌. ಈತ ಕೇರಳ ರಾಜ್ಯ ಪ್ರಶಸ್ತಿಗೆ ಪಾತ್ರವಾದ ಮಲೆಯಾಳಂನ ಸೂಪರ್ ಹಿಟ್ 'ಸಾಲ್ಟ್ ಅಂಡ್ ಪೆಪ್ಪರ್' ಚಿತ್ರದ ನಿರ್ಮಾಪಕ. ಕುತೂಹಲದ ಸಂಗತಿಯೆಂದರೆ ಕಳೆದ ವರ್ಷ ಮುಂಬೈನಲ್ಲೂ ಸದಾನಂದ ಇಂತಹುದೇ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಲ್ಲೂ ಆತನ ವಿರುದ್ಧ ವಂಚನೆ ದೂರು ದಾಖಲಾಗಿದೆ.

ಈ ಸದಾನಂದ ರಂಗೋರಾತ್‌ ಎಂಬ ಪಾಕಡ ಏನು ಮಾಡಿದ್ದನೆಂದರೆ ಇಂದಿರಾನಗರದ ಎಚ್ಎಎಲ್ 2ನೇ ಹಂತದಲ್ಲಿರುವ ಓಸಾರಾ ರೆಸಿಡೆನ್ಸಿಯಲ್ಲಿ ಸುಮಾರು ಎಂಟು ಫ್ಲಾಟ್‌ ಗಳನ್ನು ಮೂರು ವರ್ಷಗಳ ಅವಧಿಗೆ ಲೀಸಿಗೆ ನೀಡಿ 70 ಲಕ್ಷ ರೂ ಹಣ ಮಾಡಿಕೊಂಡಿದ್ದ ಎಂದು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆರೋಪಿ ಸದಾನಂದನ ಜಾತಕ ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ಸದಾನಂದ ಪರಪ್ಪನ ಅಗ್ರಹಾರ ಜೈಲು ಕಂಬಿ ಎಣಿಸುತ್ತಿದ್ದಾರೆ.

ವಾಸ್ತವವಾಗಿ ಸದರಿ ಅಪಾರ್ಟ್‌ ಮೆಂಟ್‌ ಸಹದೇವ ರೆಡ್ಡಿ ಎಂಬುವವರಿಗೆ ಸೇರಿದ್ದಾಗಿದೆ. ಇವರು ನಿರ್ವಹಣೆಗಾಗಿ ಐದು ವರ್ಷಗಳ ಕಾಲ ರಿಯಾಲಿಟಿ ಕಾಟ್‌ ಸಂಸ್ಥೆಗೆ ನೀಡಿದ್ದಾರೆ. ಜೋ ಎಂಬುವರರು ಇಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆತನ ಸಹಾಯದಿಂದ ರಂಗೋರಾತ್‌ ಮತ್ತು ಆತನ ಪತ್ನಿ ಹೀರಾ ರಾಣಿ ಜನರಿಗೆ ಭಾರಿ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಪಾರ್ಟ್‌ ಮೆಂಟ್‌ ಮಾಲೀಕ ತಾನೇ ಎಂದು ಹೇಳಿಕೊಂಡು 6-10 ಲಕ್ಷ ರೂ.ವರೆಗೆ ಹಣ ಪಡೆದು ಮೂರು ವರ್ಷಗಳ ಲೀಸ್‌ ಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಈ ವಿಷಯ ರಿಯಾಲಿಟಿ ಕಾಟ್‌ ಸಂಸ್ಥೆಗೆ ಗೊತ್ತಾಗಿ ಲೀಸ್‌ ನಲ್ಲಿದ್ದವರನ್ನು ಮನೆ ಖಾಲಿ ಮಾಡುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ. ವಂಚನೆಗೊಳಗಾದ 7 ಮಂದಿ ದೂರು ನೀಡಿದ್ದರಿಂದ ಸದಾನಂದ ರಂಗೋರಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore- Malayalam Film Producer Sadananda Rangorath Detained. The Jeevan Bima Nagar police have detained Malayalam film producer Sadananda Rangorath of Lucsam Creations following several complaints of cheating against him. According to complaints, he had taken money from people promising to lease out flats, but escaped with the money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more