ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಡಿಗೆಗೆ ಬನ್ನಿ, ಸೆರೆಬ್ರಲ್ ಪಾಲ್ಸಿ ಕಾಯಿಲೆ ಬಗ್ಗೆ ಅರಿವು ಮೂಡಿಸಿ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 05 : ಮೆದುಳಿಗೆ ಸಂಬಂಧಿಸಿದ Cerebral Palsy (ಮಸ್ತಿಷ್ಕ ಪಾರ್ಶ್ವವಾಯು) ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೆಂಗಳೂರು ಇನ್ ಸ್ಟಿಟ್ಯೂಟ್ ಆಫ್ ಮೂಮೆಂಟ್ ರಿಸರ್ಚ್ ಅನಲಿಸಿಸ್ ಸಂಸ್ಥೆ ನಡಿಗೆಯನ್ನು ಹಮ್ಮಿಕೊಂಡಿದೆ. ಈ ನಡಿಗೆಯು ಮಲ್ಲೇಶ್ವರಂನ 18ನೇ ತಿರುವಿನಲ್ಲಿನ ಎಮ್ ಎಲ್ ಎ ಕಾಲೇಜ್ ಆಫ್ ವುಮೆನ್ ಬಳಿಯಿಂದ ಅಕ್ಟೋಬರ್ 6 ರ ಮಂಗಳವಾರದಂದು ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ.

ಅಕ್ಟೋಬರ್ 7ರ 'ವಿಶ್ವ ಸೆರೆಬ್ರಲ್ ಪಾಲ್ಸಿ ದಿನ'ದ ಅಂಗವಾಗಿ 'ಮೇಕ್ ಬೆಂಗಳೂರು ಡಿಫರೆಟ್ಲಿ ಎನೆಬಲ್ಡ್' ಎಂಬ ಸಾಲಿನೊಂದಿಗೆ ಮಂಗಳವಾರ ನಡಿಗೆ ಆಯೋಜನೆಗೊಂಡಿದ್ದು, ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ 7760598121 ಸಂಪರ್ಕಿಸಿ.[ಬಾಲಕನ ಕ್ಯಾನ್ಸರ್ ನೋವು ಮರೆಸಿದ 'ತೇಜಸ್']

Bangalore Institution of Movement Research Analysis organised Walkthon in Malleshwaram, Bengaluru

ಸೆರೆಬ್ರಲ್ ಪಾಲ್ಸಿ ಎಂದರೇನು?

ಇದಕ್ಕೆ ಕನ್ನಡದಲ್ಲಿ 'ಮಸ್ತಿಷ್ಕ ಪಾರ್ಶ್ವವಾಯು' ಎಂದು ಕರೆಯುತ್ತಾರೆ. ಇದು ಮಾನವನ ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಕಾಯಿಲೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಇದಕ್ಕೆ ತುತ್ತಾಗುತ್ತಿದ್ದಾರೆ. ನರ ದೌರ್ಬಲ್ಯ ಇದರ ಮುಖ್ಯ ಲಕ್ಷಣ. ಮೆದುಳಿನಲ್ಲಿ ಬೆಳವಣಿಗೆ ವ್ಯತ್ಯಾಸದಿಂದ ಕೈ ಕಾಲುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.

ಮಕ್ಕಳಲ್ಲಿ ನಡೆಯುವ ಸಾಮರ್ಥ್ಯ, ಬುದ್ಧಿಮಟ್ಟ ಕಡಿಮೆಯಾಗುತ್ತದೆ. 40% ಮಕ್ಕಳಲ್ಲಿ ಪಿಟ್ಸ್ ಕಂಡು ಬರುತ್ತದೆ. ಎರಡು ಮೂರು ವರ್ಷ ತುಂಬುವುದರೊಳಗೆ ಮಕ್ಕಳಲ್ಲಿ ಈ ಲಕ್ಷಣ ಪತ್ತೆ ಹಚ್ಚದಿದ್ದರೆ ವೈಕಲ್ಯ ಜೀವನ ಪೂರ್ತಿ ಕಾಡುತ್ತದೆ. ಜಗತ್ತಿನಾದ್ಯಂತ ಸೆರೆಬ್ರಲ್ ಪಾಲ್ಸಿ ಕಾಯಿಲೆಯಿಂದ 500 ಜನರಿಗೆ ಒಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ 33,000 ಜನರು ಇದರಿಂದ ನರಳುತ್ತಿದ್ದಾರೆ.

English summary
Bangalore Institution of Movement Research Analysis has organised Walkthon in Malleshwaram, Bengaluru on Tuesday, 06th October, to create awareness on Cerebral Palsy. A walkathon is being organized to 'MAKE BENGALURU DIFFERENTLY EABLED'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X