ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾನೋ ಅಪ್ಲಿಕೇಷನ್ ಗಳ ಅನಾವರಣಕ್ಕೆ ವೇದಿಕೆ ಸಜ್ಜು!

By Mahesh
|
Google Oneindia Kannada News

ಬೆಂಗಳೂರು, ಫೆ.23: ನ್ಯಾನೊ ಅಪ್ಲಿಕೇಷನ್ ಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು ಮಾಡಿರುವ ಭಾರತದ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ರಮ 'ಬೆಂಗಳೂರು ಇಂಡಿಯಾ ನ್ಯಾನೊ'ದ 8ನೇ ಆವೃತ್ತಿ 'ಬೆಂಗಳೂರು ಇಂಡಿಯಾ ನ್ಯಾನೊ 2016' ಯುವ ಭಾರತಕ್ಕೆ ಇಂಧನವಾಗಲಿದೆ.

ಕರ್ನಾಟಕ ರಾಜ್ಯ ಐಟಿ&ಬಿಟಿ, ಎಸ್&ಟಿ ಇಲಾಖೆ ಪ್ರಾಯೋಜಿತ ಕಾರ್ಯಕ್ರಮ ಅಕಾಡೆಮಿ, ಸಂಶೋಧಕರು ಮತ್ತು ಉದ್ಯಮ ತಜ್ಞರ ಸಮ್ಮಿಲನಕ್ಕೆ ವೇದಿಕೆಯಾಗಲಿದೆ. ಕರ್ನಾಟಕ ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ ಅಧ್ಯಕ್ಷ ಭಾರತ ರತ್ನ ಸಿ.ಎನ್.ಆರ್ ರಾವ್ ಮುಂದಾಳತ್ವದಲ್ಲಿ ಅಭಿವೃದ್ಧಿಗೊಂಡ ಕಾರ್ಯಕ್ರಮಕ್ಕೆ ಎಫ್‍ಆರ್‍ಎಸ್ ಮತ್ತು ರಾಜ್ಯ ಐಟಿ, ಬಿಟಿ ಎಸ್&ಟಿ ಇಲಾಖೆ ಕೈಜೋಡಿಸಿದೆ. ಮಾರ್ಚ್.3 ಮತ್ತು 4, 2016ರಂದು ಕಾರ್ಯಕ್ರಮ ನಡೆಯಲಿದ್ದು ದೇಶದ ನ್ಯಾನೊಟೆಕ್ ಕಾರ್ಯಕ್ರಮ ಬಲ ನೀಡುವ ಯತ್ನವಾಗಿದೆ.

ನ್ಯಾನೊ ತಂತ್ರಜ್ಞಾನದ ನಾನಾ ಆಯಾಮಗಳ ಕುರಿತು ಮಾತನಾಡುತ್ತಾರೆ. ಪ್ರೊ.ಡಾ.ಕ್ಲೆಮೆಂಟ್ ಸ್ಯಾಂಚೆ, ಡಾ. ಯಂಗ್ ಹೀ ಲೀ, ಪ್ರೊ.ಟಿ.ಪ್ರದೀಪ್, ಮಾರ್ಕ್ ಆಂಡಲ್‍ಮನ್, ಪ್ರೊ.ಟೋನಿ ಕಾಸ್, ಪ್ರೊ.ಟೋನಿ ಕಾಸ್, ಪ್ರೊ.ಡಾ.ಶಾಂತಿಕುಮಾರ್ ನಯ್ಯರ್ ಮೊದಲಾದವರು ಪ್ರಮುಖ ಭಾಷಣಕಾರರು. 2 ದಿನಗಳ ಅವಧಿ ಒಂದು ನಿರ್ದಿಷ್ಟ ವಿಚಾರಗಳ ಮೇಲೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ದೊಡ್ಡ ಮಾರ್ಗದರ್ಶನವಾಗಲಿದೆ.

Bangalore India Nano 2016 to inspire young minds

ಜೊತೆಗೆ ಸಮಾವೇಶ ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್ ಗಳು, ಆರೋಗ್ಯ, ಸ್ವಚ್ಛ ನೀರು, ಇಂಧನ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನದ ಕುರಿತು ಚರ್ಚಿಸಲಿದೆ. ನ್ಯಾನೊ ಫ್ಯಾಬ್ರಿಕೇಷನ್ ತಂತ್ರಜ್ಞಾನ, ನ್ಯಾನೊ ಮೆಡಿಸಿನ್, ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಮತ್ತು ನ್ಯಾನೊ ಫೋಟೊನಿಕ್ಸ್ ಮೊದಲಾದ ವಿಚಾರಗಳತ್ತ ಸಮಾವೇಶ ಗಮನಹರಿಸಲಿದೆ.

8ನೇ ಬೆಂಗಳೂರು ಇಂಡಿಯಾ ನ್ಯಾನೊ ಕುರಿತು: ಬೆಂಗಳೂರು ಇಂಡಿಯಾ ನ್ಯಾನೊ, ಭಾರತದ ಬೃಹತ್ ನ್ಯಾನೊ ತಂತ್ರಜ್ಞಾನ ವಾರ್ಷಿಕ ಕಾರ್ಯಕ್ರಮವಾಗಿದೆ. ಕರ್ನಾಟಕ ರಾಜ್ಯ ಐಟಿ, ಬಿಟಿ ಮತ್ತು ಎಸ್‍ಆಂಡ್‍ಟಿ ಇಲಾಖೆ ಅಡಿಯಲ್ಲಿ ಅಭಿವೃದ್ಧಿಗೊಂಡಿತು.

ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಲಜಿ, ಜವಹಾರ್‍ಲಾಲ್ ನೆಹರು ಸೆಂಟರ್ ಆಫ್ ಅಡ್ವಾನ್ಸ್ಡ್ ಸೈಟಿಫಿಕ್ ರಿಸರ್ಚ್, ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ, ಎಂಎಂ ಆಕ್ಟೀವ್ ಸೈನ್ಸ್ ಟೆಕ್ ಕಮ್ಯೂನಿಕೇಷನ್‍ಗಳು ಒಟ್ಟಾಗಿ ನ್ಯಾನೊ ತಂತ್ರಜ್ಞಾನದ ನಾನಾ ಆಯಾಮಗಳತ್ತು ಈ ಸಮಾವೇಶ ದೃಷ್ಟಿ ಹಾಯಿಸಲಿದೆ.

ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರು. ಜೆಎನ್‍ಸಿಎಎಸ್‍ಆರ್‍ನ ಗೌರವಾನ್ವಿತ ಅಧ್ಯಕ್ಷ ಲೀನಸ್ ಪೌಲಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಭೌತಶಾಸ್ತ್ರ ವಿಭಾಗದ ಎ.ಕೆ.ಸೂದ್ ಕಾರ್ಯಕ್ರಮದ ರೂವಾರಿಗಳು. ಸಮಾವೇಶ ಪೂರ್ವ ಸಂವಾದ, ಪ್ರದರ್ಶನ, ಪಾಲುದಾರಿಕೆ ಅವಕಾಶ, 3 ದಿನಗಳ ಪ್ರದರ್ಶನ ಮೊದಲಾವುಗಳನ್ನು ಹೊಂದಿದೆ.

English summary
The 8th edition of the India’s flagship nanotech event to witness impactful applications. Bangalore INDIA NANO is India’s largest annual Nanotechnology Event organised by Department of Information Technology, Biotechnology and Science & Technology, Government of Karnataka; Vision Group on Nanotechnology, Jawaharlal Nehru Centre for Advanced Scientific Research (JNCASR) and MM ActivSci-Tech Communications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X