• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ನಮ್ಮ ವೈಫೈ ಸೇವೆ ಆರಂಭ

|

ಬೆಂಗಳೂರು, ಜ.25: ಐಟಿ ಸಿಟಿ ಬೆಂಗಳೂರು ಮತ್ತಷ್ಟು ಹೈಟೆಕ್ ಆಗಿದೆ. ನಗರದ ಸಾರ್ವಜನಿಕ ಸ್ಥಳದಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಸದ್ಯ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಉಚಿತ ವೈಫೈ ಸೇವೆ ಲಭ್ಯವಿದೆ.

ರಾಜ್ಯ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಐಸಿಟಿ ಸಂಸ್ಥೆಯು ಡಿ- ವೋಸ್ ಬ್ರಾಡ್‌ಬ್ಯಾಂಡ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಐಟಿ-ಬಿಟಿ ಖಾತೆ ಸಚಿವ ಎಸ್.ಆರ್.ಪಾಟೀಲ್ ನಮ್ಮ ವೈಫೈ ಎಂಬ ಉಚಿತ ವೈಫೈ ಸೇವೆಗೆ ಚಾಲನೆ ನೀಡಿದರು.

ವೈಫೈ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಎಸ್.ಆರ್.ಪಾಟೀಲ್ ಇದು ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು, ಸಾರ್ವಜನಿಕರಿಗೆ ಉಚಿತವಾಗಿ ವೈ ಫೈ ಸೇವೆ ನೀಡುವುದು ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು ಎಂದು ಹೇಳಿದರು. [ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ವೈಫೈ]

ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಉಚಿತ ಸೇವೆ ಒದಗಿಸಲಾಗಿದ್ದು, ಎಲ್ಲ ವರ್ಗದವರು ಇದನ್ನು ಬಳಸಬಹುದಾಗಿದೆ. ಮೊದಲ ಹಂತದಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸಿಎಂಎಚ್ ರಸ್ತೆ, ಶಾಂತಿನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಕೋರಮಂಗಲ ಟಿಟಿಎಂಸಿಯಲ್ಲಿ ಈ ಸೇವೆ ಲಭ್ಯವಿದೆ ಎಂದು ಹೇಳಿದರು.

ಉಚಿತ ವೈಫೈ ಸೇವೆಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ 10 ಸ್ಥಳಗಳಿಗೆ ವಿಸ್ತರಿಸಲಾಗುವುದು. ಹುಬ್ಬಳ್ಳಿ- ಧಾರವಾಡ, ಮಂಗಳೂರು, ಬೆಳಗಾವಿ, ಮಂಗಳೂರು ಮುಂತಾದ ನಗರಗಳಿಗೆ ವಿಸ್ತರಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಬಳಕೆ ಹೇಗೆ : ಸದ್ಯ ಉಚಿತ ವೈಫೈ ಸೇವೆ ಪ್ರತಿ ಸೆಕೆಂಡ್‌ಗೆ 512 ಕೆಬಿ ವೇಗದಲ್ಲಿ ಕಾರ್ಯ ನಿರ್ವಹಿಸಲಿದೆ. ಮೂರು ಗಂಟೆ ನಿರಂತರವಾಗಿ ಉಪಯೋಗಿಸಬಹುದಾಗಿದ್ದು, 50 ಎಂಬಿ ಡೇಟಾ ಬಳಸಬಹುದು. ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಒಮ್ಮೆಗೆ 2,500 ಮಂದಿ ವೈಫೈ ಬಳಸಬಹುದಾಗಿದೆ.

ದುರ್ಬಳಕೆ ಮಾಡಿದರೆ ಪತ್ತೆ : ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಮಾತನಾಡಿ ಈ ಸೇವೆ ಬಳಸುವವರ ಮಾಹಿತಿ, ಯಾವ ವೆಬ್‌ಸೈಟ್ ವೀಕ್ಷಿಸಿದರು, ಏನು ಡೌನ್‌ಲೋಡ್ ಮಾಡಿದ್ದಾರೆ ಎಂಬ ವಿವರಗಳು ದಾಖಲಾಗುತ್ತದೆ. ಅಲ್ಲದೇ ದುರ್ಬಳಕೆಯಾದರೆ ಆ ಮಾಹಿತಿಯೂ ದಾಖಲಾಗುತ್ತದೆ. ಇದರಿಂದ ದುರ್ಬಳಕೆ ಮಾಡಿಕೊಂಡವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಹೇಳಿದರು.

ನಮ್ಮ ವೈಫೈ ಸೇವೆಯನ್ನು ಆರಂಭಿಸಿರುವ ಡಿ-ವೋಸ್ ಬ್ರಾಡ್‌ಬ್ಯಾಂಡ್ ಸಂಸ್ಥೆಯ ನಿರ್ದೇಶಕ ರಮೇಶ್ ಸತ್ಯ ಮಾತನಾಡಿ, ಉಚಿತ ವೈ ಫೈ ಸೇವೆಯಲ್ಲಿ ಸಕಾಲ, ಜಲಮಂಡಳಿ ಸೇರಿದಂತೆ ಸರ್ಕಾರದ ನಾನಾ ಇಲಾಖೆಗಳ ಸೇವೆಯನ್ನು ಬಳಸಬಹುದಾಗಿದೆ. ಭವಿಷ್ಯದಲ್ಲಿ ಪಾರ್ಕಿಂಗ್ ನಿರ್ವಹಣೆ ಹಾಗೂ ತ್ಯಾಜ್ಯ ವಿಲೇವಾರಿಗೂ ಈ ತಂತ್ರಜ್ಞಾನ ಬಳಸಬಹುದಾಗಿದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore has become the first city in the country to provide free Wi-fi services to the people. The “Namma Wifi” service launched on Friday. Now it can be accessed at five different locations. M G Road, Brigade Road, bus stations at Yeshwanthpur, Shanthinagar and Koramangala and CMH Road in Indiranagar are the five locations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more