ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶೋತ್ಸವ: ಸ್ಪೂರ್ತಿಮತ್ತು ರಾಹುಲ್ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ

|
Google Oneindia Kannada News

ಬೆಂಗಳೂರು ,ಆಗಸ್ಟ್ 26:ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಆನ್ ಲೈನ್ ನಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವವನ್ನು ಪ್ರದರ್ಶಿಸುತ್ತಿರುವ ಬೆಂಗಳೂರು ಗಣೇಶ ಉತ್ಸವ 6ನೇ ದಿನದತ್ತ ಹೆಜ್ಜೆ ಇಡುತ್ತಿದೆ.

Recommended Video

JEE ,NEET ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳ ಪರ ನಿಂತ Greta Thunberg | Oneindia Kannada

58ನೇ ಬೆಂಗಳೂರು ಗಣೇಶೋತ್ಸವದ ಪ್ರಯುಕ್ತ 6ನೇ ದಿನದಂದು ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 27 2020ರಂದು ಸಂಜೆ 6.30ರಿಂದ ವರ್ಚುವಲ್ ವೇದಿಕೆಯಲ್ಲಿ ನಡೆಯಲಿದ್ದು ಸಂಗೀತಾಭಿಮಾನಿಗಳ ಮನಗೆಲ್ಲಲಿದೆ. ಸ್ಪೂರ್ತಿ ರಾವ್ ಮತ್ತು ರಾಹುಲ್ ವೆಲ್ಲಾಲ್ ಅವರ ಕಂಠ ಸಿರಿಯಲ್ಲಿ ಮೂಡಿ ಬರಲಿ ರುವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಲಿದೆ.

ಸಂಗೀತ ದಿಗ್ಗಜ ಕಿಶೋರ್ ಕುಮಾರ್ ಸಮರ್ಪಣೆ ವಿಶೇಷ ಸಂಗೀತ ದಿಗ್ಗಜ ಕಿಶೋರ್ ಕುಮಾರ್ ಸಮರ್ಪಣೆ ವಿಶೇಷ

ಸ್ಪೂರ್ತಿ ರಾವ್ ಯುವ ಕರ್ನಾಟಕ ಗಾಯಕಿ ಮತ್ತು ಸಂಗೀತದ ಉತ್ಸಾಹಿ ವಿದ್ಯಾರ್ಥಿನಿ. ಸೂಪರ್ ಸಿಂಗರ್ ಜೂನಿಯರ್ 4 ಪ್ರಶಸ್ತಿ ವಿಜೇತೆ. ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ಸುಶ್ರಾವ್ಯದಿಂದ ಹಾಡಿ ಸಂಗೀತ ಪ್ರಿಯರ ಮನಗೆದ್ದವರು. ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ಕಡೆ ಒಲವು ತೋರಿದ ಸ್ಪೂರ್ತಿಗೆ ತಾಯಿಯೇ ಮೊದಲ ಗುರು. ಲಘು ಸಂಗೀತ, ತಬಲಾ,ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರವಾದ ಆಸಕ್ತಿ ಬೆಳೆಸಿಕೊಂಡ ಸ್ಪೂರ್ತಿ ಮಧುರ ಧ್ವನಿಯಿಂದ ಮೋಡಿ ಮಾಡಬಲ್ಲರು. ಯೂ ಟ್ಯೂಬ್ ನಲ್ಲಿಯೂ ಇವರ ಹಾಡುಗಳಿಗೆ ಲಕ್ಷಾಂತರ ವೀಕ್ಷಕರಿದ್ದಾರೆ.

Bangalore Ganesh Utsav: Spoorthi Rao and Rahul Vellal Carnatic vocal concert

ರಾಹುಲ್ ವೆಲ್ಲಾಲ್ ಅವರು ಸಣ್ಣ ವಯಸ್ಸಿನಲ್ಲಿಯೇ ಸಂಗೀತದ ಮೂಲಕ ದೇಶ-ವಿದೇಶಗಳಲ್ಲಿ ಪ್ರಸಿದ್ಧರಾದವರು. ಸಾಕಷ್ಟು ಗೌರವಗಳು ಇವರನ್ನು ಅರಸಿ ಬಂದಿವೆ. ೪ನೇ ವಯಸ್ಸಿನಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು.

ಈ ಬಾರಿ ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ ಈ ಬಾರಿ ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ

ಮೃದಂಗ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದು, ಪಾಶ್ಚಾತ್ಯ ಪಿಯಾನೋ ವಾದನದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಚೆನ್ನೈಯ ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ನಾರದ ಗಾನ ಸಭಾ, ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿ, ಗಾಯನ ಸಮಾಜ ಸಹಿತ ದೊಡ್ಡ ದೊಡ್ಡ ಗಾನ ಸಭಾಗಳಲ್ಲಿ ಕಛೇರಿ ನಡೆಸಿದ ಹೆಮ್ಮೆ ಇವರದು. ದಿನಕ್ಕೆರಡು ಗಂಟೆ ಸಂಗೀತಾಭ್ಯಾಸವೇ ಇವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಲು ಸಹಕಾರಿಯಾಗಿದೆ. ಯೂಟ್ಯೂಬ್ ನಲ್ಲಿಯೂ ಈ ಪುಟಾಣಿ ಬಾಲಕನ ಹಾಡು ಎಲ್ಲರನ್ನು ಆಕರ್ಷಿಸಿದೆ.

ಸೆಪ್ಟೆಂಬರ್ 1ರ ತನಕ ಜರುಗಲಿರುವ ಬೆಂಗಳೂರು ಗಣೇಶ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಬುಕ್ , ಯೂ ಟ್ಯೂಬ್ , ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ಮೂಡಿ ಬರುತ್ತಿದೆ.

English summary
58th Bangalore Ganesh Utsav: Spoorthi Rao and Rahul Vellal Carnatic vocal concert on August 27,2020 via virtual live concert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X