ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

250 ಲೀಟರ್ ಅಕ್ರಮ ಮದ್ಯ ವಶ, ಮೂವರ ಬಂಧನ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 14 : ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ನಗರದ ಮೂವರು ವ್ಯಕ್ತಿಗಳು ಮಂಗಳವಾರ (ನವೆಂಬರ್ 14) ರಂದು ಪೊಲೀಸರ ಬಲಗೆ ಬಿದ್ದಿದ್ದಾರೆ.

ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಬಂಧಿಸಿರುವ ನಗರದ ಅಬಕಾರಿ ಪೊಲೀಸರು, 250 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.

Bangalore excise officers sieze 250 ltr liqueur

ಬಂಧಿತರನ್ನು ಪ್ರವೀಣ್ ನಾಯಕ್, ಮುಕುಂದದತ್ತ ಖಂಡೇಕರ್, ನಾರಾಯಣ ಎಂದು ಗುರುತಿಸಲಾಗಿದೆ. ಇವರು ಬಹಳ ವರ್ಷಗಳಿಂದ ಈ ದಂದೆಯಲ್ಲಿ ತೊಡಗಿದ್ದರು.

ಆರೋಪಿಗಳು ಹಲವು ವರ್ಷಗಳಿಂದ ಈ ಕೃತ್ಯ ಎಸಗುತ್ತಿದ್ದರು, ಗೋವಾದಲ್ಲಿ ಕಡಿಮೆ ಬೆಲೆಗೆ ಮದ್ಯ ಖರೀದಿಸಿ ತಂದು ನಗರದಲ್ಲಿ ಪರವಾನಗಿ ರಹಿತವಾಗಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು' ಎಂದು ನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಅಂಕೋಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆತಂದಿದ್ದ ಖಾಸಗಿ ಕಂಪೆನಿಯ ಬಸ್‌ನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಗಾಂಧಿನಗರದ ಸೀಬರ್ಡ್ ಟ್ರಾವೆಲ್ಸ್ ಕಚೇರಿಯ ಮುಂಭಾಗದಲ್ಲಿ ನಿಂತಿದ್ದ ಬಸ್‌ನಲ್ಲಿ ತಪಾಸಣೆ ನಡೆಸಿದಾಗ ಮದ್ಯ ಸಿಕ್ಕಿದೆ.

English summary
Bangalore excise officers sieze 250 ltr liqueur and arrest three people. Praveen Nayak, Mukundadatha, Narayana were alleged that they brought liquer from goa and sell it here in the city to higher price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X