ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!

By Super Admin
|
Google Oneindia Kannada News

ಬೆಂಗಳೂರು, ಸೆ.3 : ಬೆಂಗಳೂರಿನಿಂದ ಹೊರಟಿದ್ದ ಜೀವಂತ ಹೃದಯ ಚೆನ್ನೈನ ಪೋರ್ಟಿಸ್ ಆಸ್ಪತ್ರೆ ತಲುಪಿದೆ. ಡಾ.ಕೆ.ಆರ್.ಬಾಲಕೃಷ್ಣನ್ ನೇತೃತ್ವದಲ್ಲಿ 8 ಮಂದಿ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಆರಂಭಿಸಿದೆ.

ಹಿಂದಿನ ಸುದ್ದಿ : ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರು ನೂತನ ಸಾಹಸಕ್ಕೆ ಕೈ ಹಾಕಿದ್ದಾರೆ. ಬಿಜಿಎಸ್ ಆಸ್ಪತ್ರೆಯಿಂದ ಜೀವಂತ ಹೃದಯವೊಂದನ್ನು ಚೆನ್ನೈಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮಧ್ಯಾಹ್ನ 3 ಗಂಟೆಗೆ ವಿಮಾನದಲ್ಲಿ ಹೃದಯ ಚೆನ್ನೈಗೆ ತೆರಳಿದೆ.

ಕೆಂಗೇರಿಯಲ್ಲಿರುವ ಬಾಲಗಂಗಾಧರ ಸ್ವಾಮಿ ಆಸ್ಪತ್ರೆಯಲ್ಲಿ ಬ್ರೈನ್ ಡೆಡ್ ಆಗಿದ್ದ ಮಹಿಳೆಯ ಹೃದಯವನ್ನು ದಾನ ಮಾಡಲಾಗಿದೆ. ಚೆನ್ನೈನ ಪೋರ್ಟಿಸ್ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಈ ಹೃದಯವನ್ನು ಅಳವಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿರುವ ಜೀವಂತ ಹೃದಯ 6 ಗಂಟೆಗಳ ಕಾಲ ಜೀವಂತವಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅಷ್ಟರೊಳಗೆ ಹೃದಯ ಅಳವಡಿಕೆ ಶಸ್ತಚಿಕಿತ್ಸೆ ನಡೆಯಬೇಕಾಗಿದೆ.

live heart

ಕೆಂಗೇರಿಯಲ್ಲಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ವಿಶೇಷ ಆಂಬ್ಯುಲೆನ್ಸ್ ಮೂಲಕ ಹೃದಯವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಗ್ರೀನ್ ಕಾರಿಡಾರ್ ಹೆಸರಿನಲ್ಲಿ ಆಂಬ್ಯುಲೆನ್ಸ್ ಸಾಗಲು ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಲಾಗಿದೆ. [ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]

3 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದದಿಂದ ಹೊರಡಲಿರುವ ವಿಮಾನದಲ್ಲಿ ಜೀವಂತ ಹೃದಯ ಚೆನ್ನೈಗೆ ತಲುಪಲಿದೆ. ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡ ಮತ್ತು ಪೊಲೀಸರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ವೈದ್ಯರ ಹೇಳಿಕೆ : ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷರಾದ ವೆಂಕಟರಮಣ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಚೆನ್ನೈನ ಆಸ್ಪತ್ರೆಯಿಂದ ವೈದ್ಯರ ತಂಡ ಆಗಮಿಸಿತ್ತು. ಅವರು ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು. ಅವರು ಸಹ ಹೃದಯದೊಂದಿಗೆ ಚೆನ್ನೈಗೆ ತೆರಳುತ್ತಿದ್ದಾರೆ. ಒಟ್ಟು 8 ಮಂದಿ ತಜ್ಞರ ತಂಡ ಹೃದಯ ತೆಗೆದುಕೊಂಡು ಚೆನ್ನೈಗೆ ಹೊರಟಿದ್ದಾರೆ ಎಂದು ಹೇಳಿದ್ದಾರೆ.

ಆಂಬ್ಯುಲೆನ್ಸ್ ಚಾಲಕನೆ ಹೇಳಿಕೆ : ಇಂದು ಮಧ್ಯಾಹ್ನ 12 ಗಂಟೆಗೆ ಆಂಬ್ಯುಲೆನ್ಸ್ ಬೇಕು ಎಂದು ನನಗೆ ಕರೆ ಬಂತು. ಆಸ್ಪತ್ರೆಗೆ ಸಾಗಿದ ನಂತರ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗುವ ಕಾರ್ಯವಿದೆ ಎಂದು ಹೇಳಲಾಯಿತು. ಪೊಲೀಸರು ಸಹಕಾರ ನೀಡಿದ್ದರಿಂದ ಆದಷ್ಟು ಬೇಗ ಆಸ್ಪತ್ರೆಯಿಂದ ವಿಮಾನ ನಿಲ್ದಾಣ ತಲುಪಲಾಯಿತು, ಇಂತಹ ಕೆಲಸ ಮಾಡಿರುವುದು ಸಂತಸ ತಂದಿದೆ ಎಂದು ಆಂಬ್ಯುಲೆನ್ಸ್‌ ಚಾಲಕ ಮಾಧ್ಯಮಗಳೊಂದಿಗೆ ಸಂಸತ ಹಂಚಿಕೊಂಡಿದ್ದಾರೆ.

ಹೃದಯ ದಾನ ಮಾಡಿದ ಮಹಿಳೆ : ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ ಮಹಿಳೆಯೊಬ್ಬರು ತಮ್ಮ ಹೃದಯವನ್ನು ದಾನ ಮಾಡಿದ್ದಾರೆ. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ಬ್ರೈನ್ ಡೆಡ್ ಆಗಿದೆ. ಬುಧವಾರ ಶಸ್ತ್ರ ಚಿಕಿತ್ಸೆ ಮೂಲಕ ಅವರ ಜೀವಂತ ಹೃದಯವನ್ನು ತೆಗೆದು, ಚೆನ್ನೈಗೆ ತೆಗೆದುಕೊಂಡು ಹೋಗಲಾಗುತ್ತಿದೆ.

ಬಿಜಿಎಸ್ ಆಸ್ಪತ್ರೆಯಿಂದ ವಿಶೇಷ ಪೆಟ್ಟಿಗೆ ಮೂಲಕ ಜೀವಂತ ಹೃದಯವನ್ನು ಆಂಬ್ಯುಲೆನ್ಸ್‌ ಮೂಲಕ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಚೆನ್ನೈ ವಿಮಾನ ನಿಲ್ದಾಣದಿಂದ ಪೋರ್ಟಿಸ್ ಆಸ್ಪತ್ರೆ 13 ಕಿ.ಮೀ.ದೂರದಲ್ಲಿದೆ. ಅಲ್ಲಿ ಸಹ ಹೃದಯ ಜೋಡಿಸುವ ಶಸ್ತ್ರ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

English summary
Bangalore Bgs Global Hospital doctors take live heart to Chennai for implantation. Heart implantation surgery will be held in Fortis Hospital Chennai.32 year old women admitted to Bgs Global Hospital donated her heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X