ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ, 3 ಸಾವು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23; ಬೆಂಗಳೂರಿನ ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ ದುರಂತ ಸಂಭವಿಸಿದ ನೆನಪು ಇರುವಾಗಲೇ ನಗರದಲ್ಲಿ ಮತ್ತೊಂದು ದುರಂತ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Recommended Video

ಬೆಂಗಳೂರು ಸ್ಫೋಟದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ-ಉನ್ನತ ತನಿಖೆ ಮಟ್ಟದ ತನಿಖೆ ನಡೆಯುತ್ತಿದೆ:ಅರಗ ಜ್ಞಾನೇಂದ್ರ

ಗುರುವಾರ ಚಾಮರಾಜಪೇಟೆಯ ರಾಯನ್ ಸರ್ಕಲ್‌ ಬಳಿಯ ನ್ಯೂ ತರಗುಪೇಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರವಾಗಿವೆ. ಇಬ್ಬರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

Breaking News: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಮೂವರು ಸಾವುBreaking News: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಮೂವರು ಸಾವು

Bangalore Cylinder Blast : 3 dead, 2 injured in Chamarajpet

ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲು ಇದೊಂದು ನಿಗೂಢ ಸ್ಫೋಟ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಸಿಲಿಂಡರ್ ಸ್ಫೋಟ ಎಂಬುದು ತಿಳಿದಿದೆ. ಗೋದಾಮಿನಲ್ಲಿ ಸಿಲಿಂಡ್ ಸ್ಫೋಟಗೊಂಡಿದೆ.

ಸೆ.1: ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ ಸೆ.1: ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ

ಗುರುವಾರ ಮಧ್ಯಾಹ್ನ 12.05ರ ಸುಮಾರಿಗೆ ರಾಯನ್ ಸರ್ಕಲ್ ಬಳಿಯ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಗೋದಾಮಿನಿಂದ ದೇಹಗಳು ಛಿದ್ರಗೊಂಡು ಮೇಲೆ ಹಾರಿದ್ದು ರಸ್ತೆಯಲ್ಲಿದ್ದ ಜನರು ಗಾಬರಿಯಿಂದ ಓಡಿದರು.

ದಾವಣಗೆರೆ; ಸಿಲಿಂಡರ್ ಸ್ಫೋಟ, ಬೀದಿಗೆ ಬಿದ್ದ ಕುಟುಂಬದಾವಣಗೆರೆ; ಸಿಲಿಂಡರ್ ಸ್ಫೋಟ, ಬೀದಿಗೆ ಬಿದ್ದ ಕುಟುಂಬ

ಸ್ಫೋಟದ ತೀವ್ರತೆಗೆ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಸಿಲಿಂಡರ್ ಸ್ಫೋಟದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಅಕ್ಕಪಕ್ಕದ ಮನೆ, ಕಟ್ಟಡದ ಗಾಜುಗಳು ಸಹ ಒಡೆದು ಹೋಗಿವೆ. 10ಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ತಗುಲಿದೆ.

ಸ್ಫೋಟದ ತೀವ್ರತೆಗೆ ಗೋದಾಮು ಮುಂದಿನ ಪಂಕ್ಚರ್ ಶಾಪ್‌ನಲ್ಲಿದ್ದ ವ್ಯಕ್ತಿ ಸಹ ಮೃತಪಟ್ಟಿದ್ದಾನೆ. ಶಾಪ್‌ ಮಾಲೀಕ ಅಸ್ಲಮ್, ತಮಿಳುನಾಡು ಮೂಲದ ಮನೋಹರ್, ಸ್ಥಳದಲ್ಲಿ ಟೀ ಕುಡಿಯುತ್ತಿದ್ದ ಫಯಾಜ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸ್ಥಳಕ್ಕೆ ಧಾವಿಸಿದ್ದಾರೆ. "ಗೋದಾಮಿನಲ್ಲಿದ್ದ ಇಬ್ಬರು, ಪಂಕ್ಚರ್ ಶಾಪ್‌ನಲ್ಲಿದ್ದ ಒಬ್ಬ, ಲಾರಿ ಚಾಲಕ ಮತ್ತೊಬ್ಬ ಮೃತಪಟ್ಟಿದ್ದಾರೆ. ಸ್ಫೋಟಕ್ಕೆ ಕಾರಣವೇನು? ಎಂದು ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದರು.

ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಪೋಟಕ್ಕೆ ಕಾರಣವೇನು? ಎಂದು ಅವರು ಸಹ ತನಿಖೆ ನಡೆಸಲಿದ್ದಾರೆ. ಗೋದಾಮಿನಲ್ಲಿ 15 ಬಾಕ್ಸ್ ಪಟಾಕಿ ಇತ್ತು ಎಂಬ ಮಾಹಿತಿ ಇದೆ. ಇದರಲ್ಲಿ 2 ಬಾಕ್ಸ್‌ ಮಾತ್ರ ಸ್ಫೋಟವಾಗಿವೆ.

ಗೃಹ ಸಚಿವರ ಹೇಳಿಕೆ; ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು. "ಲಾರಿ ಗೋದಾಮಿನಲ್ಲಿ ಸ್ಫೋಟ ಆಗಿದೆ. ನಮ್ಮ ಎಫ್‌ಎಸ್‌ಎಲ್ ಅಧಿಕಾರಿಗಳು, ಅಗ್ನಿಶಾಮಕ ದಳ, ಪೋಲಿಸರು ಸ್ಥಳಕ್ಕೆ ಹೋಗಿದ್ದಾರೆ. ಯಾವ ರೀತಿ ಸ್ಫೋಟ ಆಗಿದೆ ಎಂದು ತಪಾಸಣೆಯಾಗುತ್ತಿದೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಇಬ್ಬರು ಸಾವನಪ್ಪಿದ್ದಾರೆ, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದರು.

"ಕಟ್ಟಡ ಮತ್ತು ವಾಹನಕ್ಕೆ ಹಾನಿಯಾಗಿದೆ. ಬಹಳ ದೊಡ್ಡ ಅನಾಹುತವೇ ಆಗಿದೆ. ಇದರ ಬಗ್ಗೆ ವಿಶೇಷ ವರದಿ ತರಿಸಿಕೊಳ್ಳುತ್ತೇನೆ. ನಮ್ಮ ಅಧಿಕಾರಿಗಳ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳುತ್ತಿದ್ದಾರೆ. ಬಹುಶಃ ಅದು ಪಟಾಕಿ ಸ್ಪೋಟದಿಂದ ಆಗಿರಬಹುದಾದ ಅನಾಹುತ. ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಹೀಗಾಗಿ ಸಾಕಷ್ಟು ಪಟಾಕಿಗಳು ಗೋದಾಮಿಗೆ ಬರುತ್ತಿರಬಹುದು. ವರದಿ ಬಂದ ಬಳಕ ಮತ್ತೆ ಮಾತನಾಡುತ್ತೇನೆ" ಎಂದು ಹೇಳಿದರು.

2 ಲಕ್ಷ ಪರಿಹಾರ ಘೋಷಣೆ; "ಸ್ಫೋಟ ನಡೆದ ಸ್ಥಳಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ವೈಯಕ್ತಿಯವಾಗಿ 2 ಲಕ್ಷ ಪರಿಹಾರ ನೀಡುತ್ತೇನೆ. ಸರ್ಕಾರ ಸಹ ಪರಿಹಾರ ನೀಡಲಿ" ಎಂದರು.

"ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇನೆ. ಗೋದಾಮಿನಲ್ಲಿ ಪಟಾಕಿ ಸಂಗ್ರಹ ಮಾಡಿದ್ದರು ಎಂಬ ಮಾಹಿತಿ ಇದೆ. ಗೋದಾಮಿನಲ್ಲಿ ಪಟಾಕಿ ಸಂಗ್ರಹ ಮಾಡಿದ್ದ ಮಾಲೀಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ" ಎಂದು ಹೇಳಿದರು.

English summary
LPG cylinder blast in Rayan circle near Chamarajpet, Bengaluru. Three people dead in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X