ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ನಲ್ಲಿ ಆತಂಕ ತೋಡಿಕೊಂಡ ಬೆಂಗಳೂರಿಗರು

By Mahesh
|
Google Oneindia Kannada News

ಬೆಂಗಳೂರು,ಡಿ. 29: ಇದು ರಾಷ್ಟ್ರ ವಿರೋಧಿಗಳ ಕೃತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅಗತ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕದ ಗೃಹ ಸಚಿವ ಕೆ.ಜೆ ಜಾರ್ಜ್ ಭರವಸೆ ನೀಡಿದ್ದಾರೆ. ಆದರೆ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಇನ್ನೂ ಬೆಂಗಳೂರಿನ ಸುರಕ್ಷತೆ ಬಗ್ಗೆ ಜನ ಅತಂಕ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ #BangaloreBlast, #BengaluruBlast, #ChurchStreet ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಆಗಿದೆ. ಗಾಳಿಸುದ್ದಿ ಹರಡುತ್ತಿದೆ ನಂಬಬೇಡಿ ಎಂಬುದರಿಂದ ಹಿಡಿದು ಬಾಂಬ್ ಸ್ಫೋಟದ ತನಿಖೆಯ ಅಪ್ದೇಟ್ ತನಕ ಎಲ್ಲದರ ಬಗ್ಗೆ ಟ್ವೀಟ್ ಗಳು ಹರಿದಾಡುತ್ತಿವೆ.

ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಮೃತ ಮಹಿಳೆ ಭವಾನಿ ಸಾವಿಗೆ ಸಂತಾಪ ಸೂಚಿಸಿದ್ದು, ಇಂಥ ಪರಿಸ್ಥಿತಿಯಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದಿದ್ದಾರೆ. ಮಾಧ್ಯಮಗಳಲ್ಲಿ ಬಾಂಬ್ ಸ್ಫೋಟದ ಬಗ್ಗೆ ಬರುತ್ತಿರುವ ರೋಚಕ ವರದಿ ಬಗ್ಗೆ ಚುಚ್ಚು ನುಡಿಗಳು ಇಲ್ಲಿವೆ.. ಕೆಲವು ಸಂಗ್ರಹಿತ ಟ್ವೀಟ್ ಗಳನ್ನು ಇಲ್ಲಿ ನೋಡಿ

ತನಿಖೆಯ ಅಪ್ಡೇಟ್ ತನಕ ಎಲ್ಲದರ ಬಗ್ಗೆ ಟ್ವೀಟ್

ತನಿಖೆಯ ಅಪ್ಡೇಟ್ ತನಕ ಎಲ್ಲದರ ಬಗ್ಗೆ ಟ್ವೀಟ್

ಗಾಳಿಸುದ್ದಿ ಹರಡುತ್ತಿದೆ ನಂಬಬೇಡಿ ಎಂಬುದರಿಂದ ಹಿಡಿದು ಬಾಂಬ್ ಸ್ಫೋಟದ ತನಿಖೆಯ ಅಪ್ಡೇಟ್ ತನಕ ಎಲ್ಲದರ ಬಗ್ಗೆ ಟ್ವೀಟ್ ಗಳು ಹರಿದಾಡುತ್ತಿವೆ.

ಗಾಳಿಸುದ್ದಿ ಹರಡಿಸುವವರು ಇದ್ದಾರೆ ಎಚ್ಚರ

ಗಾಳಿಸುದ್ದಿ ಹರಡಿಸುವವರು ಇದ್ದಾರೆ ಎಚ್ಚರ, ನಗರದಲ್ಲಿ ಇನ್ನೆರಡು ಕಡೆ ಸ್ಫೋಟವಾಗಿದೆ ಎಂದು ವಾಟ್ಸಪ್ ಸೇರಿದಂತೆ ಎಸ್ ಎಂಎಸ್ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ದಯವಿಟ್ಟು ಯಾರು ನಂಬಬೇಡಿ, ಅನುಮಾನಾಸ್ಪದ ಸಂದೇಶ, ವ್ಯಕ್ತಿ ಕಂಡು ಬಂದರೆ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ

ಜೀವ ಉಳಿಸಲು ಯತ್ನಿಸಿದ ಆಟೋ ಡ್ರೈವರ್

ಬಾಂಬ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದವರ ಜೀವ ಉಳಿಸಲು ಯತ್ನಿಸಿದ ಆಟೋ ಡ್ರೈವರ್ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ. ಆಂಬ್ಯುಲೆನ್ಸ್ ಆಗಿದ್ದರೆ ಬೇಗ ಆಸ್ಪತ್ರೆ ಸೇರಬಹುದಿತ್ತು. ಟ್ರಾಫಿಕ್ ಇದ್ದಾಗ ಆಟೋರಿಕ್ಷಾಗೆ ಯಾರು ಜಾಗ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಅಸ್ಸಾಂನಲ್ಲಿನ ಪ್ರಾಣಹಾನಿಗೆ ಬೆಲೆ ಇಲ್ಲವೇ?

ಅಸ್ಸಾಂನಲ್ಲಿನ ಪ್ರಾಣಹಾನಿಗೆ ಬೆಲೆ ಇಲ್ಲವೇ? ಮಾಧ್ಯಮಗಳು 'ಚರ್ಚ್ ಸ್ಟ್ರೀಟ್' ದಾಳಿ ಬಗ್ಗೆ ಏಕೆ ಅಷ್ಟೋಂದು ಒತ್ತು ನೀಡುತ್ತಿವೆ?

ನ್ಯೂ ಇಯರ್ ಆಚರಣೆಗೆ ಕುತ್ತು

ನ್ಯೂ ಇಯರ್ ಆಚರಣೆಗೆ ಕುತ್ತು ತರಲೆಂದೇ ಈ ರೀತಿ ಕೃತ್ಯ ನಡೆಸಲಾಗಿದೆಯೇ? ಉತ್ತರ ಯಾರ ಬಳಿಯೂ ಇಲ್ಲ

ಭವಾನಿಗೆ ಆಟೋ ಡ್ರೈವರ್ ನೆರವಾದ

ಭವಾನಿಗೆ ಆಟೋ ಡ್ರೈವರ್ ನೆರವಾದ ಅದರೆ, ಹತ್ತಿರದಲ್ಲೇ ಇದ್ದ ಉಳಿದ ಜನರು ಸುಮ್ಮನೆ ತಮಾಷೆ ನೋಡುತ್ತಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ

ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿವೆ

ಟ್ವಿಟ್ಟರ್ ನಲ್ಲಿ ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿವೆ. ಬೆಂಗಳೂರು ಪೊಲೀಸ್ ಕಮಿಷನರ್ ಐಡಿಯಿಂದ ಬಂದ ಟ್ವೀಟ್ ಗಳನ್ನು ರೀ ಟ್ವೀಟ್ ಮಾಡಲಾಗುತ್ತಿದೆ.

ವಿಶೇಷ ತನಿಖಾ ದಳ ರಚನೆ

ವಿಶೇಷ ತನಿಖಾ ದಳ ರಚನೆಯಾಗಿದ್ದರ ಬಗ್ಗೆ ಕೂಡಾ ಟ್ವಿಟ್ಟರ್ ನಲ್ಲಿ ತಕ್ಷಣಕ್ಕೆ ಅಪ್ಡೇಡ್ ಆಗುತ್ತಿದೆ.

ಹಲವು ಗಣ್ಯರಿಂದ ಸಂತಾಪ ವಿಷಾದ

ಕಿರಣ್ ಮಜುಂದಾರ್ ಶಾ, ಸಂಸದ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವಾರು ಗಣ್ಯರು ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಶಾಂತರಾಗಿರಿ ನಮ್ಮ ಬೆಂಗಳೂರು ಬೆಸ್ಟ್

ಶಾಂತರಾಗಿರಿ ನಮ್ಮ ಬೆಂಗಳೂರು ಬೆಸ್ಟ್ ಎಂದು ರೇಡಿಯೋ ಮಿರ್ಚಿ ತನ್ನ ಗಾನಧಾರೆ ಹರಿಸಿದೆ.

English summary
A low-intensity bomb exploded in front of the Coconut Groove restaurant on busy Church Street and one woman was killed and two others were injured. Here are the reaction from people about the #BangaloreBlast #BengaluruBlast #ChurchStreet on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X