ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಪಸಂದ್ರದಲ್ಲಿ ಪರದೇಶಿಗಳ ಕಾಟ; ಯುವತಿಯರ ಬಂಧನ

By Srinath
|
Google Oneindia Kannada News

bangalore-bhupasandra-foreign-students-immoral-activities-13-arrested
ಬೆಂಗಳೂರು, ಡಿ.7: ಸಂಜಯನಗರದ ಭೂಪಸಂದ್ರದಲ್ಲಿ ಸ್ಥಳೀಯ ನಿವಾಸಿಗಳಿಗೆ ಕಂಟಕಪ್ರಾಯವಾಗಿದ್ದ ಪರರಾಜ್ಯಗಳ ಯುವಕ/ಯುವತಿಯರನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಏನಾಗಿತ್ತೆಂದರೆ 'ಭೂಪಸಂದ್ರದ ಮಾಣಿಕ್ ಷಾ ನಗರದಲ್ಲಿ ಉತ್ತರ ಭಾರತದವರು ಮತ್ತು ಸೌದಿ ಅರೇಬಿಯಾದಿಂದ ವ್ಯಾಸಂಗಕ್ಕೆಂದು ಬಂದವರು ಇಲ್ಲಿನ ದೊಡ್ಡ ಬಂಗಲೆಯಲ್ಲಿ ವಾಸವಾಗಿದ್ದರು. ಆದರೆ ಇವರೆಲ್ಲಾ ವ್ಯಾಸಂಗ ಬಿಟ್ಟು ಮತ್ತೆಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

ಇಲ್ಲಿ ಅನೈತಿಕ ಚಟುವಟಿಕೆಗಳು ಯಾವುದೇ ಎಗ್ಗುಸಿಗ್ಗು ಇಲ್ಲದೆ ನಡೆದಿತ್ತು. ಕೈಯಲ್ಲಿ ಬೀರ್ ಬಾಟಲಿಗಳನ್ನಿಟ್ಟುಕೊಂಡು, ಅರೆಬರೆ ಬಟ್ಟೆ ತೊಟ್ಟು ಬೀದಿಯಲ್ಲೇ ಸ್ವಚ್ಚಂದವಾಗಿ ವಿಹರಿಸುತ್ತಿದ್ದರು' ಎಂಬುದು ಸ್ಥಳೀಯರ ಆರೋಪ.

ಇಂತಿಪ್ಪ ಪರದೇಶಿಗಳ ಚಲನವಲನ ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತಿತ್ತು. ಮನೆ ಓನರಿಗೆ ಹೇಳಿದರೆ ಏನೂ ಪ್ರಯೋನವಾಗಿರಲಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ ಸ್ಥಳೀಯ ಗೃಹಿಣಿ ಫಿರ್ದೋಸ್. ಅಂದಹಾಗೆ ಈ ಮನೆ ಸಾಹೇಬ್ ಲಾಲ ಎಂಬುವವರಿಗೆ ಸೇರಿದ್ದಾಗಿದೆ.

'ಆದರೆ ನಿನ್ನೆ ಶುಕ್ರವಾರ ರಾತ್ರಿ ಈ ಪರದೇಶಿಗಳ ಉಪಟಳ ಎಲ್ಲೆ ಮೀರಿತ್ತು. ಅದೆಂಥದ್ದೋ ಪಾರ್ಟಿ ಎಂದು ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಅನೈತಿಕ ರೀತಿಯಲ್ಲಿ ವರ್ತಿಸುತ್ತಿದ್ದರು. ಇದರಿಂದ ರೋಸಿ ಹೋದೆವು. ಪೊಲೀಸರಿಗೆ ಸುದ್ದಿ ಮುಟ್ಟಿಸಿದೆವು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಂಜಯನಗರ ಪೊಲೀಸರು ಉಪಟಳ ಕೊಡುತ್ತಿದ್ದ ಯುವಕ/ಯುವತಿಯರನ್ನು ಎತ್ಹಾಕಿಕೊಂಡು ಹೋಗಿದ್ದಾರೆ' ಎಂದು ಸ್ಥಳೀಯ ಯುವಕ ರೆಹಮಾನ್ ಪಾಷಾ ತಿಳಿಸಿದ್ದಾರೆ.

ಭೂಪಸಂದ್ರದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ ಯುವಕ/ಯುವತಿಯರು ಸ್ಥಳೀಯರಿಗೆ ಕಿರುಕುಳ ಕೊಡುವ ರೀತಿಯಲ್ಲಿ ವರ್ತಿಸುತ್ತಿದ್ದರಂತೆ. ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ 8 ಮಂದಿ ಯುವತಿಯರು ಮತ್ತು 5 ಮಂದಿ ಯುವಕರನ್ನು ಬಂಧಿಸಿ, ಠಾಣೆಗೆ ಕರೆತಂದಿದ್ದೇವೆ. ಇಂದು ಅವರನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಗುವುದು ಎಂದು ಸಂಜಯನಗರ ಪೊಲೀಸರು ತಿಳಿಸಿದ್ದಾರೆ.

ಇನ್ನು, ಪೊಲೀಸರ ಜೀಪು ಹತ್ತುತ್ತಿದ್ದ ಬಂಧಿತ ಯುವಕನೊಬ್ಬ ಮಾಧ್ಯಮಗಳೊಂದಿಗೆ ಮಾತನಾಡಿ, 'ನಾವೇನೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿರಲಿಲ್ಲ. ಗೆಳತಿಯೊಬ್ಬಳ ಬರ್ಥ್ ಡೇ ಪಾರ್ಟಿ ಆಚರಿಸುತ್ತಿದ್ದೆವು. ಅದು ಸ್ವಲ್ಪ ಜೋರಾಗಿಯೇ ನಡೆದಿತ್ತು. ನಾವೇನೂ ದಿನಾ ಹೀಗೆಲ್ಲಾ ಮಾಡುತ್ತಿರಲಿಲ್ಲ' ಎಂದು ಅಲವತ್ತುಕೊಂಡಿದ್ದಾನೆ.

ಆದರೆ ಇದಕ್ಕೆ ವ್ಯತಿರಿಕ್ಯವಾಗಿ ಹೇಳಿಕೆ ನೀಡಿರುವ ಮತ್ತೊಬ್ಬ ಯುವಕ ಸೌದಿ ಅರೇಬಿಯಾದಿಂದ ಬಂದವರು ಶಿಕ್ಷಣ ಮುಗಿಸಿ, ಮನೆಗಳಿಗೆ ವಾಪಸಾಗುತ್ತಿದ್ದರು. ಅವರಿಗೆ ಸೆಂಡ್ ಆಫ್ ಪಾರ್ಟಿ ಇಟ್ಟುಕೊಂಡಿದ್ದೆವು, ಅಷ್ಟೇ. ಅಷ್ಟಕ್ಕೆಲ್ಲಾ ನೆರೆಹೊರೆಯವರು ಇಷ್ಟೆಲ್ಲಾ ರಂಪಾರಾಮಾಯಣ ಮಾಡಿದ್ದಾರೆ ಎಂದು ದೂರಿದ್ದಾನೆ.

ಆದರೆ ನೆರೆಹೊರೆ ಹೆಣ್ಣುಮಕ್ಕಳು, ಗೃಹಿಣಿಯರು ಮಾತನಾಡಿ ಈ ಪರದೇಶಿಗಳ ಕಾಟ ವಿಪರೀತವಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Bangalore Sanjaynagar police have arrested 13 students who were indulged in immoral activities according to lecalites. Most of the students are from Saudi Arebia and some are from North India. The incident happend at Bhupasandra in Sanjayanagar police sration limits on Dec 6th mid night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X