ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲ್ ಮತಯಂತ್ರಗಳು ನಮೀಬಿಯಾಕ್ಕೆ ಹೊರಟವು

By Srinath
|
Google Oneindia Kannada News

ಬೆಂಗಳೂರು, ಏ.30- ಭಾರತದಲ್ಲಿ 16ನೆಯ ಲೋಕಸಭಾ ಚುನಾವಣೆಯು ಇನ್ನೇನು ಮುಕ್ತಾಯ ಹಂತ ಪ್ರವೇಶಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಯಶಸ್ವಿಯಾಗಿ ಮುಗಿಯುತ್ತಾ ಬಂದಿದೆ. ಇದರ ಯಶಸ್ಸು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಗೆ ಸಲ್ಲುತ್ತದೆ.

ಹೌದು ವಿಶ್ವದ ಯಾವುದೇ ಮೂಲೆಯಲ್ಲಿ ಮತದಾನ ನಡೆಯಲಿ ಅಲ್ಲಿ Bharat Electronic Limited ಸಂಸ್ಥೆಯ ವಿದ್ಯುನ್ಮಾನ ಮತ ಯಂತ್ರಗಳು (EVMs) ಪ್ರತ್ಯಕ್ಷವಾಗುತ್ತವೆ. ಅಷ್ಟರಮಟ್ಟಿಗೆ ಸಂಸ್ಥೆಯ ಯಂತ್ರಗಳು ಯಶಸ್ಸು ಗಳಿಸಿವೆ.

ಈ ಬಾರಿ ಲೋಕಸಭಾ ಚುನಾವಣೆಗೆ 6 ದಶಕಗಳಷ್ಟು ಹಳೆಯದಾದ ಕೇಂದ್ರ ಸರಕಾರಿ ಸ್ವಾಮ್ಯದ BEL ಸಂಸ್ಥೆ ಚುನಾವಣಾ ಆಯೋಗಕ್ಕೆ 8.5 ಲಕ್ಷ EVM ಯಂತ್ರಗಳನ್ನು ಸರಬರಾಜು ಮಾಡಿದೆ.

Bangalore Bharat Electronic Limited EVMs To Be Used in Namibia's Presidential Poll

ಈ ಮಧ್ಯೆ, ಬೆಂಗಳೂರಿನ electronic voting machineಗಳು ತನಗೂ ಬೇಕೆಂದು ನಮೀಬಿಯಾ ಸರಕಾರವೂ ಬೇಡಿಕೆಯಿಟ್ಟಿದ್ದು, ನಮೀಬಿಯಾದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗಾಗಿ 3,400 ಮತಯಂತ್ರಗಳನ್ನು ಖರೀದಿ ಮಾಡಿದೆ.

10 ಮಿಲಿಯನ್ ನಮೀಬಿಯನ್ ಡಾಲರ್ ಗೆ BEL ಅವಷ್ಟೂ ಯಂತ್ರಗಳನ್ನು ಸರಬರಾಜು ಮಾಡಲು ಸಿದ್ಧತೆ ನಡೆಸಿದೆ. 2013ರಲ್ಲಿಯೂ ಮನೀಬಿಯಾ ಇದೇ ರೀತಿ ಬೆಲ್ ಯಂತ್ರಗಳನ್ನು ಖರೀದಿಸಿದ್ದವು.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ನಮೀಬಿಯಾ ತಂಡ, ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಕ್ರಿಯೆನ್ನು ಕಣ್ಣಾರೆ ಮರಾಮರ್ಶಿಸಿ, ಮತಯಂತ್ರಗಳ ಕಾರ್ಯಕ್ಷಮತೆಯನ್ನು ಕಂಡು ಮೆಚ್ಚುಗೆ ಸೂಚಿಸಿತ್ತು. ಅದಾಗುತ್ತಿದ್ದಂತೆ ಯಂತ್ರ ಖರೀದಿ ಪ್ರಕ್ರಿಯೆಗೆ ಅಂತಿಮ ಮುದ್ರೆಯೊತ್ತಿತ್ತು. ಜತೆಗೆ, EVM ಗಳಲ್ಲಿ ನೋಟಾ ಮತ್ತು ಅಂಧರಿಗಾಗಿ ಬ್ರೈಲ್ ಲಿಪಿ ಬಳಕೆ ಮಾಡಿದ್ದು ನಮೀಬಿಯಾ ಸರಕಾರದ ವಿಶೇಷ ಗಮನ ಸೆಳೆದಿದೆ.

English summary
Bangalore Bharat Electronic Limited EVMs To Be Used in Namibia's Presidential Poll. Ahead of its presidential election in November, the Namibian government has purchased 3,400 India-made electronic voting machines (EVMs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X