ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಗೂ ಮೊರೆಯಿಟ್ಟ ಅರ್ಕಾವತಿ ನಿವೇಶನದಾರರು!

By Srinath
|
Google Oneindia Kannada News

ಬೆಂಗಳೂರು, ಜೂನ್ 5: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಅಹವಾಲೊಂದು ನೂತನ ಪ್ರಧಾನಿ ನರೆಂದ್ರ ಮೋದಿ ಅವರನ್ನು ತಲುಪಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆದವರು ಅನ್ಯ ಮಾರ್ಗ ಕಾಣದೆ ನೇರವಾಗಿ ದೇಶದ ಪ್ರಧಾನ ಮಂತ್ರಿಗೇ ಮೊರೆಯಿಟ್ಟಿದ್ದಾರೆ.

'ಕಳೆದ 8 ವರ್ಷಗಳ ಹಿಂದೆಯೇ ತಮಗೆ ನಿವೇಶನ ಹಂಚಿಕೆಯಾಗಿದ್ದರೂ ಅದನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಬಡಾವಣೆಯ ಭೂಮಿಯು ಡಿನೋಟಿಫಿಕೇಶನ್ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಬಡಾವಣೆ ರಚಿಸಲು ಬಿಡಿಎ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದು ನಿವೇಶನ ಹಂಚಿಕೆಯಾಗಿರುವ 8813 ಮಂದಿಯ ದುಃಸ್ಥಿತಿ. ಇವರ ಪೈಕಿ 200 ಮಂದಿ ತಮ್ಮ ಕನಸಿನ ಸೂರು ಕಟ್ಟಿಕೊಳ್ಳುವ ಮುನ್ನವೇ ಅಸುನೀಗಿದ್ದಾರೆ' ಎಂದು ಅರ್ಕಾವತಿ ಬಡಾವಣೆ ನಿವೇಶನದಾರರ ಒಕ್ಕೂಟವು ತಮ್ಮ ಪಡಿಪಾಟಲು/ ವಾಸ್ತವತೆಯನ್ನು ಪ್ರಧಾನಿಯ ಗಮನಕ್ಕೆ ತಂದಿದ್ದಾರೆ.

bangalore-bda-arkavathy-allottees-send-post-to-pmo-modi-facebook
ನಿವೇಶನದಾರರು ಅರ್ಜಿ ರೂಪದ ಈ ಪೋಸ್ಟ್ ಅನ್ನು ಪ್ರಧಾನಿ ಕಚೇರಿಯ ಫೇಸ್ ಬುಕ್ ಗೆ ಬುಧವಾರ ಲಗತ್ತಿಸಿದ್ದಾರೆ. ಈ ಫೇಸ್ ಬುಕ್ ಪೋಸ್ಟ್ ನಲ್ಲಿ ಇನ್ನೂ ಏನೇನಿದೆ ಅಂದರೆ... 2006ರಲ್ಲಿಯೇ ನಾವೆಲ್ಲಾ ನಿವೇಶನದ ದರವನ್ನು ಪಾವತಿ ಮಾಡಿದ್ದೇವೆ. 4000 ನಿವೇಶನಗಳು ನೋಂದಾವಣೆಗೊಂಡಿವೆ. ನಿವೇಶನದ ಮಾಲೀಕರು ಪ್ರತಿವರ್ಷ ಆಸ್ತಿ ತೆರಿಗೆಯನ್ನೂ ಕಟ್ಟುತ್ತಾ ಬಂದಿದ್ದಾರೆ.

ದೇಶದಲ್ಲಿ ಇದೊಂದೇ ಬಡಾವಣೆ ಎಲ್ಲ ಕೋರ್ಟು, ಕಚೇರಿಗಳನ್ನು ಕಂಡಿರುವುದು. ಎಲ್ಲ ಕಡೆಯೂ ನಮ್ಮ ಅಹವಾಲಿಗೆ ಮಾನ್ಯತೆ ಸಿಕ್ಕಿದೆ. ಆದರೂ ಸ್ಥಳೀಯ ಆಡಳಿತ ಬಡಾವಣೆಯನ್ನು ರಚಿಸಿ, ನಮಗೆ ಇನ್ನೂ ನಿವೇಶನ ಹಂಚಿಕೆ ಮಾಡಿಲ್ಲ. ನಮಗಿನ್ನೂ ನ್ಯಾಯ ದಕ್ಕಿಲ್ಲ. ಕೊನೆಗೆ Write of Mandamus ಅನುಸಾರ ಕರ್ನಾಟಕ ಹೈಕೋರ್ಟಿಗೂ ಮೊರೆ ಹೋಗಿದ್ದೇವೆ. ಮಾರ್ಚ್ 31ಕ್ಕೆ ಈ ಬಗ್ಗೆ ನಿರ್ಣಯ ಹೊರಬೀಳಬೇಕಿತ್ತು. ಆದರೆ ಇದುವರೆಗೂ ಏನೂ ಆಗಿಲ್ಲ. (ಅರ್ಕಾವತಿ ಲೇಔಟ್ ಗೆ ಭಾರಿ ವಿರೋಧ, ಪ್ರತಿಭಟನೆ)

ಅಂತಿಮವಾಗಿ ಅನ್ಯ ಮಾರ್ಗ ಕಾಣದೆ ಸಾಮಾಜಿಕ ಜಾಲತಾಣದ ಮೂಲಕ ನಮ್ಮ ದುಸ್ಥಿತಿ ನಿಮ್ಮ ಗಮನಕ್ಕೆ ಬರುವುದೆಂಬ ಆಶಯದೊಂದಿಗೆ ನಿಮ್ಮ ಮುಂದಿಡುತ್ತಿದ್ದೇವೆ. ಪ್ರಧಾನಿ ಕಾರ್ಯಾಲಯ ನಮ್ಮ ಮನವಿಗೆ ಸ್ಪಂದಿಸಿ, ನಮಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುತ್ತದೆ ಎಂಬ ಆಶಯ ನಮ್ಮದಾಗಿದೆ ಎಂದು Facebook post ಹೇಳುತ್ತಿದೆ.

English summary
Bangalore BDA Arkavathy allottees send post to PMO Modi's Facebook account. Arkavathy Layout allottees' association has sent a post on PMO's Facebook's account on Wednesday. The post details about how the 8813 allottees have been waiting to see their dream home coming shaping out on this layout for eight years, the denotification tangle and how Bangalore Development Authority has been delaying the formation of the layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X