ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋಂ ಬಾಂಬ್: ದೀಪಾವಳಿಗೆ ದರ ಏರಿಕೆ ಕೊಡುಗೆ

By Srinath
|
Google Oneindia Kannada News

Bangalore auto rickshaw fare price to increase,
ಬೆಂಗಳೂರು, ನ.2: ದೀಪಾವಳಿ ಹಬ್ಬದ ಸಂಭ್ರದಲ್ಲಿರುವ ರಾಜಧಾನಿ ಮಂದಿಗೆ ಆಟೋ ಮಂದಿ ಶಾಕ್ ನೀಡಿದ್ದಾರೆ. ಪ್ರಯಾಣ ದರ ಏರಿಕೆ ಕೊಡುಗೆಯಾಗಿ ಭಾರಿ ಆಟೋಂ ಬಾಂಬ್ ಸಿಡಿಸಿದ್ದಾರೆ.

ಏನಪ್ಪಾ ಅಂದರೆ ಡೀಸೆಲ್ ದರ ಏರಿತು, ಆಟೋ ವಾಹನದ ಬೆಲೆಯೂ ಏರಿತು, ಆಟೋ ಬಿಡಿ ಭಾಗಗಳ ದರವೂ ಏರಿದೆ. ಪರಿಸ್ಥಿತಿ ಹೀಗಿರುವಾಗ ಆಟೋ ಪ್ರಯಾಣ ದರವನ್ನು ಏರಿಸದೆ ಗತ್ಯಂತರವಿಲ್ಲ. ಹಾಗಾಗಿ ನಮ್ಮ ಮನವಿಯನ್ನು ಆಲಿಸಿ ಎಂದು Regional Transportation Authority ಮೂಲಕ ಆಟೋ ಚಾಲಕರು ಪ್ರಯಾಣಿಕರ ಮೊರೆಹೋಗಿದ್ದಾರೆ.

ಎಷ್ಟು ಜಾಸ್ತಿ ಮಾಡ್ತಾರಂತೆ?
ತಕ್ಷಣಕ್ಕಂತೂ ಡೀಸೆಲ್ ದರ ಏರಿಬಿಟ್ಟಿದ್ದೆ. ಆದ್ದರಿಂದ ಬೆಂಗಳೂರಿನಲ್ಲಿ ಆಟೋರಿಕ್ಷಾ ಪ್ರಯಾಣ ಕನಿಷ್ಟ ದರವನ್ನು 25 -30 ರೂ. ಗೆ ಏರಿಸಿ ಎಂದು ಆಟೋದಾರರು ಪಟ್ಟುಹಿಡಿದಿದ್ದಾರೆ. ಗಮನಾರ್ಹವೆಂದರೆ ಈ ಸಂಬಂಧ ಆಟೋರಿಕ್ಷಾ ಸಂಘಟನೆಗಳು ಸಲ್ಲಿಸಿರುವ ಮನವಿಯನ್ನು ಸ್ವೀಕರಿಸಿರುವ RTA ದರವನ್ನು 4-5 ರೂ. ಗೆ ಹೆಚ್ಚಿಸುವ ಭರವಸೆ ನೀಡಿದೆ. ಅಂದಹಾಗೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1.8 ಕಿಮೀ ಕನಿಷ್ಟ ಪ್ರಯಾಣಕ್ಕೆ ಮಿನಿಮಮ್ ಪ್ರಯಾಣ ದರವನ್ನು 17 ರೂ. ನಿಂದ 20 ರೂ. ಗೆ ಏರಿಸಲಾಗಿತ್ತು.

ಇತ್ತೀಚೆಗೆ ಆಟೋರಿಕ್ಷಾ ವಾಹನದ ಬೆಲೆಯೇ ಏರಿಬಿಟ್ಟಿದೆ. 1.20 ಲಕ್ಷ ರೂ. ಗೆ ಸಿಗುತ್ತಿದ್ದ ಆಟೋ ಬೆಲೆ ಈಗ 1.50 ಲಕ್ಷ ರೂ. ಗೆ ತಲುಪಿದೆ. ಇದರ ಜತೆಜತೆಗೆ ಬಿಡಿಭಾಗಗಳ ಬೆಲೆಯೂ ದುಪ್ಪಟ್ಟು ಏರಿದೆ. ಅಷ್ಟೇ ಅಲ್ಲ. ಸಾರಿಗೆ ವಾಹನಗಳಿಗೆ ಬಳಸುವ ದ್ರವೀಕೃತ ಅನಿಲ (LPG) ಬೆಲೆ ಕೆಜಿಗೆ 50 ರೂ. ನಿಂದ 54 ರೂ. ಗೆ ಏರಿಸಲಾಗಿದೆ.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸುವಂತೆ ಕೋರಿ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು RTAಗೆ ಮನವಿ ಮಾಡಿಕೊಂಡಿದೆ.

ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತಾಗಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದ RTA, ಉಪಸಮಿತಿಯೊಂದನ್ನು ರಚಿಸಿದ್ದು ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

English summary
Bangalore auto rickshaw fare price to increase. Get ready to shell out more for an autorickshaw ride, as the minimum fare is likely to be hiked from Rs 20 to Rs 25. Citing rising fuel costs autorickshaw unions have given representations to the transport department that the minimum fare be increased to Rs 30. The last time autorickshaw fares went up in Bangalore was in March 2012 when the minimum fare was increased from Rs 17 to Rs 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X