ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರ್ಭಕೋಶದ ಆಪರೇಶನ್ ಗಾಗಿ ದಾಖಲಾದ ಶಿಕ್ಷಕಿಗೆ ಕೊರೊನಾ ವೈರಸ್!

|
Google Oneindia Kannada News

ಬೆಂಗಳೂರು, ಜೂನ್.06: ನೊವೆಲ್ ಕೊರೊನಾ ವೈರಸ್ ಸೋಂಕು ಯಾವಾಗ, ಯಾರಿಗೆ, ಯಾವ ರೂಪದಲ್ಲಿ ಅಂಟಿಕೊಳ್ಳುತ್ತೆ ಎನ್ನುವುದೇ ತಿಳಿಯುತ್ತಿಲ್ಲ. ಕರ್ನಾಟಕದಲ್ಲಿ ಪ್ರತಿದಿನ ಕೊವಿಡ್--19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

Recommended Video

India surpasses Italy in Corona cases count | Oneindia kannada

ಬೆಂಗಳೂರಿನಲ್ಲಿ ಗರ್ಭಕೋಶದ ಸಮಸ್ಯೆ ಎಂದು ಆಸ್ಪತ್ರೆಗೆ ದಾಖಲಾದ ಶಿಕ್ಷಕಿಗೆ ಮಹಾಮಾರಿ ನೊವೆಲ್ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಇಟಲಿಯನ್ನೂ ಮೀರಿಸಿದ ಭಾರತ; ಇದು ಕೊರೊನಾ ವೈರಸ್ ಕಥೆ!ಇಟಲಿಯನ್ನೂ ಮೀರಿಸಿದ ಭಾರತ; ಇದು ಕೊರೊನಾ ವೈರಸ್ ಕಥೆ!

ಎರಡು ದಿನಗಳ ಹಿಂದೆಯಷ್ಟೇ ಟಿ.ದಾಸರಹಳ್ಳಿಯ ಹಾವನೂರು ಬಡಾವಣೆಯ ನಿವಾಸಿ 47 ವರ್ಷದ ಮಹಿಳೆಯು ಗರ್ಭಕೋಶದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಆರಂಭಕ್ಕೂ ಮೊದಲು ಮಹಿಳೆಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಲಾಯಿತು.

Bangalore: 47-Years-Old Teacher Get Coronavirus Positive

ಮಹಿಳೆಯ ರಕ್ತ-ಗಂಟಲು ದ್ರವ್ಯ ಪರೀಕ್ಷೆ:

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುವುದಕ್ಕಾಗಿ ದಾಖಲಾದ ಮಹಿಳೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಗೋಚರಿಸಿರಲಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯ ರಕ್ತ ಹಾಗೂ ಗಂಟಲು ದ್ರವವನ್ನು ತೆಗೆದುಕೊಂಡು ಲ್ಯಾಬ್ ಗೆ ಕಳುಹಿಸಿ ಕೊಡಲಾಗಿತ್ತು. ಶನಿವಾರ ಲ್ಯಾಬ್ ನಿಂದ ಬಂದ ವರದಿಯಲ್ಲಿ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

English summary
Bangalore: Coronavirus infection of a hospitalized teacher for uterine surgery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X