ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಬಾಂಗ್ಲಾ ಮಹಿಳೆಗೆ ಮಾಲ್‌ನಲ್ಲಿ ಥಳಿತ

|
Google Oneindia Kannada News

ಬೆಂಗಳೂರು, ಮೇ 29 : ನಾನು ಪೊಲೀಸ್ ಎಂದು ಹೇಳಿಕೊಂಡು ಬಾಂಗ್ಲಾದೇಶದ ಮಹಿಳೆಗೆ ಥಳಿಸಿ ಹಣ ದೋಚಿದ್ದ ಮಹಿಳೆಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಮೇ 25ರಂದು ಡಿ ಮಾರ್ಟ್‌ನಲ್ಲಿ ಮಹಿಳೆ ಹಲ್ಲೆ ನಡೆಸಿದ್ದಳು.

ಬಾಂಗ್ಲಾದೇಶದ ಮಹಿಳೆ ರಶೀದಾ ಬೇಗಂ ನೀಡಿದ ದೂರಿನ ಅನ್ವಯ ಮಂಜುಳಾ (36) ಎಂಬ ಮಹಿಳೆಯನ್ನು ಶುಕ್ರವಾರ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಮಾಲ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡುದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. [ಬೆಂಗಳೂರಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಳ]

hebbagodi

ರಶೀದಾ ಬೇಗಂ ಪತಿಗೆ ಚಿಕಿತ್ಸೆ ಕೊಡಿಸಲು ಬಾಂಗ್ಲಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ನಾರಾಯಣ ಹೃದಯಾಲಯದಲ್ಲಿ ಪತಿಯನ್ನು ದಾಖಲಿಸಿದ್ದಾರೆ. ಮಂಜುಳಾ 65 ಸಾವಿರ ಹಣ ಮತ್ತು 5 ಸಾವಿರ ಮೌಲ್ಯದ ಬಾಂಗ್ಲಾದ ಕರೆನ್ಸಿಯನ್ನು ದೋಚಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. [ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಪೇದೆಗಳು ಅಮಾನತು]

ಘಟನೆ ವಿವರ : ಮೇ 25ರ ಸೋಮವಾರ ರಶೀದಾ ಬೇಗಂ ಅವರು ಹೆಬ್ಬಗೋಡಿಯಲ್ಲಿರುವ ಡಿ ಮಾರ್ಟ್‌ಗೆ ತೆರಳಿದ್ದರು. ಕೆಲವು ಬಟ್ಟೆ ಮತ್ತು ಚಪ್ಪಲಿ ಖರೀದಿ ಮಾಡಿದ್ದರು. ಆದರೆ, ಬಿಲ್ ಪಾವತಿ ಮಾಡಲು ಹೋದಾಗ ಮರೆತು ಬಟ್ಟೆಗಳಿಗೆ ಮಾತ್ರ ಬಿಲ್ ಕೊಟ್ಟಿದ್ದರು.

ಭದ್ರತಾ ಸಿಬ್ಬಂದಿ ಚಪ್ಪಲಿಗೆ ಹಣ ಪಾವತಿ ಮಾಡಿ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಮಂಜುಳಾ ತಾನು ಪೊಲೀಸ್ ಎಂದು ಹೇಳಿಕೊಂಡು ಭದ್ರತಾ ಸಿಬ್ಬಂದಿ ಬಳಿ ಇದ್ದ ಲಾಠಿ ತೆಗೆದುಕೊಂಡು ರಶೀದಾಗೆ ಥಳಿಸಿದ್ದಾರೆ. ಹಣ ಪಾವತಿ ಮಾಡುತ್ತೇನೆ ಎಂದು ರಶೀದಾ ಹೇಳಿದರೂ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಬಳಿಕ ರಶೀದಾ ಬಳಿ ಇದ್ದ 65 ಸಾವಿರ ಹಣ ಮತ್ತು ಬಾಂಗ್ಲಾ ಕರೆನ್ಸಿಯನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಮಂಜುಳಾ ಅವರು ಹಲ್ಲೆ ನಡೆಸುವ ದೃಶ್ಯ ಡಿ ಮಾರ್ಟ್‌ನ ಸಿಸಿಟಿಯಲ್ಲಿ ಸೆರೆಯಾಗಿತ್ತು. ರಶೀದಾ ಬೇಗಂ ನೀಡಿದ ದೂರಿನ ಅನ್ವಯ ಮಂಜುಳಾ ಅವರನ್ನು ಇಂದು ಬಂಧಿಸಲಾಗಿದೆ.

English summary
Bangaladesh woman Rashida Begam was beaten up and robbed in D Mart at Hebbagodi, Bengaluru. Hebbagodi police arrested Manjula (36) on Friday who beaten Rashida Begam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X