ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದಲ್ಲಿ ಡಬ್ಬಿಂಗ್ ಗಾಗಿ ಆಗ್ರಹಿಸಿ ಬನವಾಸಿ ಬಳಗದಿಂದ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 24: ಬನವಾಸಿ ಬಳಗವು ಕನ್ನಡಪರ ಸಂಸ್ಥೆಯಾಗಿದ್ದು, ನಾಡು ನುಡಿಗಳ ಏಳಿಗೆಗಾಗಿ ಕಳೆದ ಹದಿಮೂರು ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ.

ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಎಲ್ಲಾ ಕನ್ನಡಿಗರ ಮೂಲಭೂತ ಹಕ್ಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತಿರುವ ನಾವು, ನಾಡಿನ ಜನರು ಮನರಂಜನೆ ಮತ್ತು ಜ್ಞಾನವಿಜ್ಞಾನಗಳ ಕಲಿಕೆಯೂ ಸೇರಿದಂತೆ ಹಲವಾರು ಸನ್ನಿವೇಶಗಳಲ್ಲಿ ಕನ್ನಡದಿಂದಲೇ ದೂರಸರಿಯುತ್ತಿರುವ ಅಪಾಯವನ್ನೂ ಮನಗಂಡಿದ್ದೇವೆ.

ಈ ನಿಟ್ಟಿನಲ್ಲಿ ಕನ್ನಡಕ್ಕೆ ಪರಭಾಷೆಯಿಂದ ಬರುವ ಪ್ರತಿಯೊಂದೂ ಕನ್ನಡೀಕರಣವಾಗಿಯೇ ಬರಬೇಕೆನ್ನುವ ಕನ್ನಡಪರ ನಿಲುವನ್ನು ನಾವು ಹೊಂದಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಡಬ್ಬಿಂಗ್ ಪರವಾಗಿ ಸಾಕಷ್ಟು ಜಾಗೃತಿ ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ.

ಡಬ್ಬಿಂಗ್ ಬೇಕಾ? ಬೇಡ್ವಾ? ಮುಗಿಯದ ರಗಳೆಗೆ ಪರಿಹಾರ ಇಲ್ಲಿದೆಡಬ್ಬಿಂಗ್ ಬೇಕಾ? ಬೇಡ್ವಾ? ಮುಗಿಯದ ರಗಳೆಗೆ ಪರಿಹಾರ ಇಲ್ಲಿದೆ

ಕನ್ನಡ ಚಿತ್ರೋದ್ಯಮ ಹಾಗು ಕನ್ನಡ ಟೀವಿ ಉದ್ಯಮದ ಕೆಲವು ಹತೋಟಿಕೂಟಗಳ ಕೈವಾಡದಿಂದ ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧವು ಇಂದಿಗೂ ಒಳಒಪ್ಪಂದಗಳ ಮೂಲಕ ಮುಂದುವರೆದಿದ್ದು, ಕನ್ನಡಿಗರ ಮೇಲೆ ಪರಭಾಷಾ ಮನರಂಜನೆಯನ್ನು ಹೇರುವ ಕೆಲಸ ನಿರಂತರವಾಗಿ ಸಾಗುತ್ತಿದೆ.

ಡಬ್ಬಿಂಗ್ ಪರ ನಿರಂತರ ಹೋರಾಟ

ಡಬ್ಬಿಂಗ್ ಪರ ನಿರಂತರ ಹೋರಾಟ

ಬನವಾಸಿ ಬಳಗವು ಕನ್ನಡಪರ ಸಂಸ್ಥೆಯಾಗಿದ್ದು, ನಾಡು ನುಡಿಗಳ ಏಳಿಗೆಗಾಗಿ ಕಳೆದ ಹದಿಮೂರು ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಎಲ್ಲಾ ಕನ್ನಡಿಗರ ಮೂಲಭೂತ ಹಕ್ಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತಿದೆ.

ಈ ನಿಟ್ಟಿನಲ್ಲಿ ಕನ್ನಡಕ್ಕೆ ಪರಭಾಷೆಯಿಂದ ಬರುವ ಪ್ರತಿಯೊಂದೂ ಕನ್ನಡೀಕರಣವಾಗಿಯೇ ಬರಬೇಕೆನ್ನುವ ಕನ್ನಡಪರ ನಿಲುವನ್ನು ನಾವು ಹೊಂದಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಡಬ್ಬಿಂಗ್ ಪರವಾಗಿ ಸಾಕಷ್ಟು ಜಾಗೃತಿ ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ.

ಡಬ್ಬಿಂಗ್ ವಿರೋಧಿ ಕೆಎಫ್ ಸಿಸಿಗೆ ತೀವ್ರ ಮುಖಭಂಗಡಬ್ಬಿಂಗ್ ವಿರೋಧಿ ಕೆಎಫ್ ಸಿಸಿಗೆ ತೀವ್ರ ಮುಖಭಂಗ

ವಿತಕರಿಂದ ಡಬ್ಬಿಂಗ್ ಗೆ ವಿರೋಧ

ವಿತಕರಿಂದ ಡಬ್ಬಿಂಗ್ ಗೆ ವಿರೋಧ

ಭಾರತೀಯ ಸ್ಪರ್ಧಾ ಆಯೋಗ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯಗಳ ಸ್ಪಷ್ಟ ಆದೇಶದ ನಂತರ ಡಬ್ಬಿಂಗ್ ಮೇಲೆ ಕಾನೂನುಬಾಹಿರವಾಗಿ ಇದ್ದ ತಡೆ ತೆರವಾಗಿದ್ದು ಕೆಲವು ಚಲನಚಿತ್ರಗಳು ಕನ್ನಡೀಕರಣಗೊಂಡು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನೂ ಕಂಡಿವೆ.
ಆದರೂ ಪರಭಾಷಾ ಚಿತ್ರಗಳು ಮೂಲಚಿತ್ರಗಳ ಜೊತೆಯಲ್ಲಿಯೇ ಕನ್ನಡೀಕರಣಗೊಂಡು ತೆರೆಕಾಣುವುದನ್ನು ತಡೆಯುವ ಮೂಲಕ ಡಬ್ಬಿಂಗ್ ಹತೋಟಿಕೂಟದ ಕೆಲವು ವಿತರಕರು ಕನ್ನಡದ್ರೋಹಿ ನಡೆಯನ್ನು ತೋರುತ್ತಿದ್ದಾರೆ.

ಜಗ್ಗೇಶ್‌ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡಜಗ್ಗೇಶ್‌ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡ

ಕನ್ನಡ ಮನಸ್ಸುಗಳು ಒಂದಾಗಬೇಕಿದೆ

ಕನ್ನಡ ಮನಸ್ಸುಗಳು ಒಂದಾಗಬೇಕಿದೆ

ಕನ್ನಡ ಚಿತ್ರೋದ್ಯಮ ಹಾಗು ಕನ್ನಡ ಟೀವಿ ಉದ್ಯಮದ ಕೆಲವು ಹತೋಟಿಕೂಟಗಳ ಕೈವಾಡದಿಂದ ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧವು ಇಂದಿಗೂ ಒಳಒಪ್ಪಂದಗಳ ಮೂಲಕ ಮುಂದುವರೆದಿದ್ದು, ಕನ್ನಡಿಗರ ಮೇಲೆ ಪರಭಾಷಾ ಮನರಂಜನೆಯನ್ನು ಹೇರುವ ಕೆಲಸ ನಿರಂತರವಾಗಿ ಸಾಗುತ್ತಿದೆ.


ಕರ್ನಾಟಕದಲ್ಲಿ ಒಂದೆಡೆ ಕೇಂದ್ರಸರ್ಕಾರದ ಭಾಷಾ ನೀತಿಯಿಂದ ಹಿಂದೀ ಹೇರಿಕೆ ನಡೆಯುತ್ತಿದ್ದರೆ ಇನ್ನೊಂದೆಡೆ ಹತೋಟಿಕೂಟಗಳು ಡಬ್ಬಿಂಗ್ ತಡೆಯುವ ಮೂಲಕ ತಮಿಳು, ತೆಲುಗು ಇನ್ನಿತರ ಭಾಷೆಗಳ ಹೇರಿಕೆಗೆ ಕಾರಣವಾಗುತ್ತಿದ್ದಾರೆ. ಕರ್ನಾಟಕದಲ್ಲಿರುವ ಡಬ್ಬಿಂಗ್ ನಿಷೇಧವನ್ನು ಸಂಪೂಣವಾಗಿ ಕಿತ್ತೊಗೆಯಬೇಕು. ಈ ನಿರ್ಣಾಯಕ ಹಂತದ ಹೋರಾಟಕ್ಕೆ ಎಲ್ಲ ಕನ್ನಡಪರ ಮನಸ್ಸುಗಳು ಮುಂದಾಗಬೇಕಾಗಿದೆ.

ಪ್ರತಿಭಟನೆ, ಕಾರ್ಯಕ್ರಮದ ವಿವರ

ಪ್ರತಿಭಟನೆ, ಕಾರ್ಯಕ್ರಮದ ವಿವರ

ಈ ಬಗ್ಗೆ ಪ್ರತಿಭಟನಾ ಸಭೆಯೊಂದನ್ನು ಬನವಾಸಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದೇವೆ. ಇದರಲ್ಲಿ ನಾಡಿನ ಹಲವಾರು ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಲಿದ್ದು "ಡಬ್ಬಿಂಗ್: ಇದು ಕನ್ನಡಪರ" ಎಂಬುದನ್ನು ಸಾರಲಿವೆ.
ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿದೆ:
ವೇಳೆ ಮತ್ತು ದಿನಾಂಕ - 25/11/218ರ ಭಾನುವಾರ ಬೆಳಗ್ಗೆ :30 ಗಂಟೆಗೆ
ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ, ಗಾಂಧಿನಗರ, ಬೆಂಗಳೂರು - 560 009

English summary
Banavasi Balaga is a pro-Kannada think tank working on issues concerning Kannada and Karnataka for the last 13 years. Banavasi Balaga has hosted a public protest in Freedom Park, Bengaluru demanding dubbing to be allowed in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X