ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿ, ಪೋಷಕರ ಗಮನಕ್ಕೆ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಕರ್ನಾಟಕದಲ್ಲಿ ಹೆಚ್ಚಿನ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ಸರಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಓದುತ್ತಿದ್ದಾರೆ. ಗುಣಮಟ್ಟದ ಕಲಿಕೆ ಸಾಧ್ಯವಾಗಿಸಲು ಏನು ಮಾಡಬೇಕು? ಎಂದು ಪ್ರಶ್ನಿಸುವ ಪೋಷಕರು ಹಾಗೂ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಆಡಳಿತ ಮಂಡಳಿ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಎಲ್ಲಾ ಸರಕಾರೀ ಶಾಲೆಗಳಲ್ಲಿ ಗುಣಮಟ್ಟದ ಕಲಿಕೆ ನೀಡಲಾಗುತ್ತಿಲ್ಲ ಎಂಬ ಮಾತು ಇದ್ದರೂ, ಇದೊಂದು ಬಗೆಹರಿಸಲಾಗದ ಸಮಸ್ಯೆಯೇನಲ್ಲ. ಆದರೆ, ಈ ಸಮಸ್ಯೆಯು ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವ, ಓದಿಸಬೇಕೆಂದಿರುವ ಕೆಲವೇ ಕೆಲವು ಸಾಮಾನ್ಯ ಪೋಷಕರಿಂದ ಸರಿಪಡಿಸಲಾಗುವಂತದ್ದಲ್ಲ.

Banavasi Balaga Debate on Private Schools Management and Parents

ತಾಯ್ನುಡಿಯಲ್ಲಿ ಕಲಿಕೆಯು ಮಹತ್ವದ್ದು ಎಂಬುದನ್ನರಿತು, ತಮ್ಮ ಮಗುವನ್ನು ಖಾಸಗಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿರುವ ಸಾಮಾನ್ಯ ಪೋಷಕರು ಹಲವರಿದ್ದಾರೆ. ಅಂತಹ ಪೋಷಕರು "ತನ್ನ ಮಗುವಿನ ಶಾಲೆಯಲ್ಲಿ ಗುಣಮಟ್ಟದ ಕಲಿಕೆ ಸಾಧ್ಯವಾಗುವಂತೆ ಏನು ಮಾಡಬಹುದು?" ಅನ್ನುವ ಪ್ರಶ್ನೆ ಎತ್ತಿಕೊಂಡರೆ, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ನಡುವೆ ಸಂವಾದ, ಚರ್ಚೆ ಮತ್ತು ಕೂಡಿ ಕೆಲಸ ಮಾಡುವ ಹೊಸತೊಂದು ಮಾದರಿ ನಮ್ಮ ಮುಂದೆ ಕಾಣುತ್ತದೆ.

ಈ ಮಾದರಿಯ ಮೊದಲನೇ ಹೆಜ್ಜೆಯೇ ಮೇ ಒಂದರಂದು ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿರುವ "ಪೋಷಕರು ಮತ್ತು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಆಡಳಿತ ವರ್ಗದ ನಡುವೆ ಸಂವಾದ" ಕಾರ್ಯಕ್ರಮ.

ನೀವೂ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಲ್ಲಿ, ಅಥವಾ ಓದಿಸಬೇಕು ಅಂತಿದ್ದಲ್ಲಿ ಖಂಡಿತ ಈ ಕಾರ್ಯಕ್ರಮಕ್ಕೆ ಬಂದು ಪಾಲ್ಗೊಳ್ಳಿ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು, [email protected]ಗೆ ನಿಮ್ಮ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಕಳುಹಿಸಿಕೊಡಿ.

English summary
Banavasi Balaga has organised a debate program between Private Schools(Kannada medium of instruction) Management and Parents. This debate is to improve the quality of teaching and learning and development of students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X