ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಣಸವಾಡಿ-ಹೊಸೂರು ರೈಲು ಸೇವೆ ಮತ್ತೆ ಆರಂಭ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24 : ಬಾಣಸವಾಡಿ-ಹೊಸೂರು ರೈಲು ಸೇವೆ ಪುನಃ ಆರಂಭವಾಗಲಿದೆ. ಮಾರ್ಚ್‌ ತಿಂಗಳಿನಲ್ಲಿ ಆರಂಭಗೊಂಡಿದ್ದ ರೈಲು ಸೇವೆ ರೈಲು ಹಳಿಗಳ ದುರಸ್ಥಿ ಕಾರಣದಿಂದಾಗಿ ಮೇ ತಿಂಗಳಿನಲ್ಲಿ ಸ್ಥಗಿತಗೊಂಡಿತ್ತು.

ಬಾಣಸವಾಡಿ-ಹೊಸೂರು ರೈಲು ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಆದ್ದರಿಂದ ನೂರಾರು ಜನರು ಈ ರೈಲಿನಲ್ಲಿ ಪ್ರಯಾಣ ನಡೆಸುತ್ತಿದ್ದರು. ಆದರೆ, ಕೇವಲ ಎರಡು ತಿಂಗಳಿನಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತು.

ಬಾಣಸವಾಡಿ-ಹೊಸೂರು ಉಪನಗರ ರೈಲು ಸಂಚಾರ ಸ್ಥಗಿತಬಾಣಸವಾಡಿ-ಹೊಸೂರು ಉಪನಗರ ರೈಲು ಸಂಚಾರ ಸ್ಥಗಿತ

ರೈಲ್ವೆ ಇಲಾಖೆ ಅಧಿಕಾರಿಗಳು ಹಳಿಗಳ ದುರಸ್ಥಿಗಾಗಿ ಸೇವೆಯನ್ನು ಸ್ಥಗಿತಗೊಳಿಸಿದರು. ಅಕ್ಟೋಬರ್ 26ರ ತನಕ ರೈಲು ಸಂಚಾರ ನಡೆಸುವುದಿಲ್ಲ ಎಂಬ ಮಾಹಿತಿ ಇತ್ತು. ಈಗ ಡಿಸೆಂಬರ್ ತನಕ ರೈಲು ಸಂಚಾರ ಆರಂಭವಾಗುವುದಿಲ್ಲ ಎಂಬ ಮಾಹಿತಿ ಬಂದಿದೆ.

Banaswadi Hosur train to resume in December

'ಸುಮಾರು 45 ರಿಂದ 50 ಕಿ.ಮೀ.ಯ ಹಳಿಗಳ ದುರಸ್ಥಿ ಕಾರ್ಯ ನವೆಂಬರ್ ತಿಂಗಳ ಕೊನೆಯ ನಡಯಲಿದೆ. ಡಿಸೆಂಬರ್‌ನಲ್ಲಿ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ' ಎನ್ನುತ್ತಾರೆ ರೈಲ್ವೆ ಇಲಾಖೆಯ ಅಧಿಕಾರಿಗಳು.

ಉಪನಗರ ರೈಲು ಸಂಚಾರ ಆರಂಭಉಪನಗರ ರೈಲು ಸಂಚಾರ ಆರಂಭ

ಬಾಣಸವಾಡಿ-ಹೊಸೂರು ನಡುವಿನ ಡೀಸೆಲ್ ಚಾಲಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ದಿನಕ್ಕೆ ಎರಡು ಬಾರಿ ಬಾಣಸವಾಡಿ-ಹೊಸೂರು ನಡುವೆ ರೈಲು ಸಂಚಾರ ನಡೆಸುತ್ತಿತ್ತು.

ಭಾನುವಾರ ಹೊರತುಪಡಿಸಿ ಉಳಿದ ದಿನ ರೈಲು ಸಂಚಾರ ನಡೆಸುತ್ತಿತ್ತು. ಬಾಸಣವಾಡಿಯಿಂದ 1 ಗಂಟೆಯಲ್ಲಿ ಹೊಸೂರು ತಲುಪಬಹುದಾಗಿತ್ತು. ಮಾರ್ಚ್‌ 12ರಂದು ಆರಂಭವಾದ ರೈಲು ಸೇವೆ ಮೇನಲ್ಲಿ ಸ್ಥಗಿತಗೊಂಡಿತ್ತು.

English summary
Bengaluru Banaswadi-Hosur train is likely to resume in December 2018. Train service stopped due to track renewal work. The trains service connects Baiyappanahalli Namma Metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X