ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್ ಫ್ಲೈಓರ್ ಮೇಲೆ ವಾಹನ ನಿಷೇಧ ಸದ್ಯಕ್ಕಿಲ್ಲ

|
Google Oneindia Kannada News

ಬೆಂಗಳೂರು, ಜೂನ್ 18: ವಾಹನ ದಟ್ಟಣ ಹಾಗೂ ಅಪಘಾತವನ್ನು ತಪ್ಪಿಸಲು ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸುವ ಕ್ರಮವನ್ನು ಟ್ರಾಫಿಕ್ ಪೊಲೀಸರು ಸ್ವಲ್ಪ ಮುಂದೂಡಿದ್ದಾರೆ.

ಹೆಬ್ಬಾಳದಿಂದ ಏರ್‌ಪೋರ್ಟ್‌ ಗೆ ಹೋಗುವ ಮಾರ್ಗದಲ್ಲಿ ಒಂದು ವಾರ ಪ್ರಾಯೋಗಿಕವಾಗಿ ಬಂದ್ ಮಾಡಲು ಚಿಂತನೆ ನಡೆಸಿತ್ತು. ಅದು ಜೂನ್ 10ರಿಂದಲೇ ಆರಂಭಗೊಳ್ಳಬೇಕಿತ್ತು.ಬಳ್ಳಾರಿ ರಸ್ತೆಯಲ್ಲಿ ಐದು ಜನರಿದ್ದ ಕಾರಿಗೆ ಆಂಬುಲೆನ್ಸ್ ಒಂದು ಗುದ್ದಿದ ಪ್ರಕರಣದ ಬಳಿಕ ಸೈಕಲ್, ದ್ವಿಚಕ್ರ ವಾಹನಗಳು, ತ್ಯಾಜ್ಯ ಸಂಗ್ರಹಿಸುವ ಟ್ರಕ್‌ಗಳು, ಆಟೋಗಳನ್ನು ನಿಷೇಧಿಸಲು ತೀರ್ಮಾನಿಸಿತ್ತು.

ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ? ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ?

ಯಾವುದಾದರೊಂದು ನಿರ್ಧಾರ ತೆಗೆದುಕೊಳ್ಳುವಾದ ಅದರಿಂದ ಆಗುವ ದುಷ್ಪರಿಣಾಮವನ್ನು ಕೂಡ ಗಮನದಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ಇನ್ನೊಮ್ಮೆ ಆ ವಿಚಾರ ಕುರಿತು ಚರ್ಚೆ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ban on slow vehicles on Airport flyover is postponed

ಯಾವ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಹಾಗೂ ಇನ್ಯಾವ ವಾಹನಗಳನ್ನು ಫ್ಲೈಓವರ್ ಮೇಲೆ ಹೋಗಲು ಅನುಮತಿ ನೀಡಬೇಕು ಎಂಬ ಗೊಂದಲವಿದೆ. ನಿಧಾನ ಗತಿಯಲ್ಲಿ ಸಾಗುವ ಟ್ರಕ್‌ಗಳಿಂದ ಜನರಿಗೆ ತೊಂದರೆಯಾಗುತ್ತಿದೆ.

ಗಂಭೀರ ಸ್ವರೂಪದ ಅಪಘಾತಗಳು ರಾತ್ರಿ ಹೊತ್ತಿನಲ್ಲಿ ಸಂಭವಿಸುತ್ತವೆ. ಕಾರು, ಬಸ್ ಮುಂಗಾತ ಲಘು ವಾಹನಗಳು ವೇಗವಾಗಿ ಸಂಚರಿಸುವ ಕಾರಣ ರಾತ್ರಿ ವೇಳೆ ಸೂಕ್ತ ಪ್ರತಿಫಲನ ಲೈಟ್ ಇಲ್ಲದೆ ಲಾರಿಗಳು ಕಾಣಿಸುವುದಿಲ್ಲ, ಹೀಗಾಗಿ ಅಂತಹ ವಾಹನಗಳಿಗೆ ವೇಗದ ವಾಹನಗಳು ಡಿಕ್ಕಿ ಹೊಡೆಯುತ್ತವೆ.

English summary
Ban on slow vehicles on Airport flyover is postponed, Bengaluru traffic police has decided to start a week long trial on banning slow moving vehicles on Airport road. The special drive has now postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X