ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ಫೋಟೋ; ಬಜರಂಗದಳದಿಂದ ಬಂದೂಕು ಬಳಕೆ ತರಬೇತಿ

|
Google Oneindia Kannada News

ಬೆಂಗಳೂರು, ಮೇ 16: ಬಜರಂಗದಳ ತನ್ನ ಕಾರ್ಯಕರ್ತರಿಗೆ 'ತ್ರಿಶೂಲ ದೀಕ್ಷೆ' ಹೆಸರಿನಲ್ಲಿ ಬಂದೂಕು ಬಳಕೆ ಬಗ್ಗೆ ಶಸ್ತ್ರಾಸ್ತ್ರ ತರಬೇತಿ ನೀಡಿದೆ ಎಂದು ಆರೋಪಿಸಿ ಪಿಎಫ್‌ಐ ರಾಜ್ಯಾಧ್ಯಕ್ಷ ನಾಸಿರ್ ಪಾಷಾ ಟ್ವೀಟ್ ಮಾಡಿದ್ದು ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇ 5ರಿಂದ ಮೇ11ರವರೆಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶ್ರೀ ಶಂಕರ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಶೌರ್ಯ ಪ್ರಶಿಕ್ಷಣ' ಕಾರ್ಯಕ್ರಮದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಆರೋಪ ಕೇಳಿಬಂದಿದೆ. ಬಜರಂಗದಳ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮತ್ತು ಆರ್‌ಎಸ್‌ಎಸ್‌ ಸಂಘಟನೆಯ 400 ಕಾರ್ಯಕರ್ತರು ಪಾಲ್ಗೊಂಡಿದ್ದು ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆತ್ಮರಕ್ಷಣೆ ಹೆಸರಿನಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾರೆ.

ಘಟನೆ ಕುರಿತಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬಿಜೆಪಿ ಶಾಸಕ ಸೇರಿ ಹಲವರ ವಿರುದ್ಧ ದೂರು ದಾಖಲಿಸಿದೆ. ಶ್ರೀ ಶಂಕರ ವಿದ್ಯಾ ಸಂಸ್ಥೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎಸ್‌ಡಿಪಿಐ ಒತ್ತಾಯಿಸಿದೆ.

Bajarang Dal Training With Air Guns SDPI Tweeted Photos

ಈ ಕುರಿತು ಟ್ವೀಟ್ ಮಾಡಿರುವ ನಾಸಿರ್ ಪಾಷ "ಕೊಡಗಿನಲ್ಲಿ ಬಜರಂಗದಳ ಕೈಗೊಂಡಿದ್ದ ಶಸ್ತ್ರಾಸ್ತ್ರ ತರಬೇತಿ ಮತ್ತು ತ್ರಿಶೂಲ ದೀಕ್ಷೆ ಕಾರ್ಯಕ್ರಮದ ಕುರಿತು ಕರ್ನಾಟಕ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ರಾಜಕಾರಣಿಗಳು ಕಮಿಷನ್‌ಗಾಗಿ ಹುಡುಕಾಟದಲ್ಲಿರುವಾಗ ಮಾಧ್ಯಮಗಳು ಆರ್‌ಎಸ್‌ಎಸ್‌ ಭಯೋತ್ಪಾದನಾ ಚಟುವಟಿಕೆ ಬಗ್ಗೆ ವರದಿ ಮಾಡುವಾಗ ರಜೆಯಲ್ಲಿರುತ್ತವೆ" ಎಂದು ಟ್ವೀಟ್ ಮಾಡಿದ್ದಾರೆ.

ದಿನೇಶ್ ಗುಂಡೂರಾವ್ ಕಿಡಿ; ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, "ಬಜರಂಗದಳದ ಸದಸ್ಯರು ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿರುವುದು ಏಕೆ?. ಸರಿಯಾದ ಪರವಾನಗಿ ಇಲ್ಲದೆ ಬಂದೂಕು ತರಬೇತಿ ಅಪರಾಧವಲ್ಲವೇ?. ಶಸ್ತ್ರಾಸ್ತ್ರ ಕಾಯಿದೆ 1959, ಶಸ್ತ್ರಾಸ್ತ್ರ ನಿಯಮಗಳು 1962 ಉಲ್ಲಂಘನೆ ಅಲ್ಲವೇ? ಬಿಜೆಪಿ ನಾಯಕರು ಏಕೆ ಬಹಿರಂಗವಾಗಿ ಈ ಚಟುವಟಿಕೆಗೆ ಹಾಜರಾಗುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.

"ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?. ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು?. ಯಾವ ಸಂಘಟನೆ?. ಅದಕ್ಕೆ ಅನುಮತಿ ಕೊಟ್ಟವರು ಯಾರು?. ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ?. ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಗೃಹಸಚಿವ ಆರಗ ಜ್ಞಾನೇಂದ್ರಗೆ ಕರ್ನಾಟಕ ಕಾಂಗ್ರೆಸ್ ಒತ್ತಾಯಿಸಿ ಟ್ವೀಟ್ ಮಾಡಿದೆ.

ಘಟನೆ ಸಂಬಂಧ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಟ್ವೀಟ್ ಮಾಡಿದ್ದು "ಈ ವಯಸ್ಸಿನಲ್ಲಿ ಎಲ್ಲಾ ಯುವಕರು ತಮ್ಮ ಕನಸು ನನಸಾಗಿಸಲು ಸಿದ್ಧವಾಗುತ್ತಿರುತ್ತಾರೆ, ಆದರೆ ಕರ್ನಾಟಕದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಸೃಷ್ಟಿಸಲು ತರಬೇತಿ ನೀಡುವ ಮೂಲಕ ಬಜರಂಗದಳ ಯುವಜನತೆಯ ಜೀವನವನ್ನು ಹಾಳುಮಾಡುತ್ತಿದ್ದು, ಇದನ್ನು ತಡೆಯಬೇಕಾಗಿದೆ" ಎಂದು ಒತ್ತಾಯಿಸಿದ್ದಾರೆ.

Bajarang Dal Training With Air Guns SDPI Tweeted Photos

ಶಾಲೆಯ ಅಧಿಕಾರಿಗಳ ಪ್ರಕಾರ ಹಲವಾರು ವರ್ಷಗಳಿಂದ ಶಾಲೆಯಲ್ಲಿ ಪ್ರಶಿಕ್ಷಣ ತರಬೇತಿ ನೀಡುತ್ತಿದ್ದು, ಶಸ್ತ್ರಾಸ್ತ್ರ ತರಬೇತಿಯ ಆರೋಪವನ್ನು ತಳ್ಳಿಹಾಕಿದ್ದು, ಅಂತಹ ಯಾವುದೇ ತರಬೇತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

Recommended Video

ನನ್ ಬೌಲಿಂಗ್ ಅಂದ್ರೆ ತಮಾಷೆ ಅಲ್ಲಾ !! | Oneindia Kannada

English summary
SDPI tweeted photos and videos of Bajrang dal activists training with air guns at Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X