ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಜೂನ್‌ನಲ್ಲಿ ಬಳಕೆಗೆ ಮುಕ್ತ, ತಗ್ಗಲಿದೆ ರೈಲು ದಟ್ಟಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಬರುವ ಜೂನ್‌ನಿಂದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ದಟ್ಟಣೆ ಕಡಿಮೆಯಾಗಲಿದೆ.

ಎರಡೂ ನಿಲ್ದಾಣದಿಂದ ಒಟ್ಟು 220 ರೈಲುಗಳು ಸಂಚಾರ ಮಾಡುತ್ತಿವೆ, ಜೂನ್‌ನಿಂದ ಬೈಯಪ್ಪನಹಳ್ಳಿಯಲ್ಲೂ ನೂತನ ಟರ್ಮಿನಲ್ ನಿರ್ಮಾಣವಾಗಲಿರುವ ಕಾರಣ ರೈಲಿನ ದಟ್ಟಣೆ ಕೊಂಚ ಕಡಿಮೆಯಾಗಲಿದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಭಾರತೀಯ ರೈಲ್ವೆ ಬೈಯಪ್ಪನಹಳ್ಳಿ ಟರ್ಮಿನಲ್ ನಿರ್ಮಾಣ ಮಾಡಲು 152 ಕೋಟಿ ರೂ ವೆಚ್ಚ ಮಾಡಿದೆ. ರೈಲು ನಿಲುಗಡೆಗೆ ಮೂರು ಪ್ಲಾಟ್‌ಫಾರಂಗಳು, ರೈಲು ರಿಪೇರಿಗೆ ಮೂರು ಸಣ್ಣ ಲೈನುಗಳು, ಸಿಗ್ನಲ್ ಹಾಗೂ ಟೆಲಿಕಮ್ಯುನಿಕೇಷನ್ ಸಿಸ್ಟಂ, ಸ್ಟೇಷನ್ ಆಫೀಸ್, ಕಾಯ್ದಿರಿಸುವ ಕೌಂಟರ್‌ಗಳು ಇರಲಿವೆ.

Baiyappanahalli train terminal may open by June end

2016ರಲ್ಲೇ ಆರಂಭವಾಗಿರುವಫೇಸ್‌ 1 ಯೋಜನೆಯನ್ನು ಜೂನ್ 30ರೊಳಗೆ ಪೂರ್ಣಗೊಳಸುವ ನಿರ್ಧಾರ ಮಾಡಲಾಗಿದೆ.ಬೈಯಪ್ಪನಹಳ್ಳಿಯಿಂದ ಮೂರು ಕಿ.ಮೀ ದೂರದಲ್ಲಿ ಟರ್ಮಿನಲ್ ನಿರ್ಮಿಸಲಾಗಿದೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ದಿನದ 24 ಗಂಟೆಯೂ ಕಾಮಗಾರಿ ನಡೆಯುತ್ತಿದೆ.ಶೇ.60ರಷ್ಟು ಕಾಮಗಾರಿ ಮುಕ್ತಾಯವಾಗಿದೆ. 400 ಕ್ಕೂ ಹೆಚ್ಚು ಮಂದಿ ಕೆಲಸಗಾರರಿದ್ದಾರೆ. ಮೂರನೇ ಟರ್ಮಿನಲ್ ಸಿದ್ಧಗೊಂಡ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸಾಕಷ್ಟು ರೈಲುಗಳು ಬೈಯಪ್ಪನಹಳ್ಳಿಗೆ ಶಿಫ್ಟ್ ಆಗಲಿದೆ.

ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

ಎಲ್ಲಾ ಮಾರ್ಗದಲ್ಲಿ ಸಂಚರಿಸುವ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಫೇಸ್‌ 2 ಯೋಜನೆ 2020ಕ್ಕೆ ಮುಕ್ತಾಯಗೊಳ್ಳಲಿದೆ.

English summary
Come June both the Krantiveera Sangolli Rayanna and yeshwantpur railway station can experience some relief from massive congestion encountered here on a daily basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X